ನಿಜವಾದ ಪ್ರಶ್ನೆ ಮೌಲ್ಯಗಳ ಕುರಿತಾಗಿದೆ. ಮತ್ತು ಈ ಮೌಲ್ಯಗಳು ನಮ್ಮ ಜೀವನದ ಒಂದು ಭಾಗ. ನಾವು ನಮ್ಮನ್ನು ಪ್ರಕೃತಿಯೊಂದಿಗೆ ಒಂದಾಗಿ ನೋಡುತ್ತೇವೆ. ಆದಿವಾಸಿಗಳು ಹೋರಾಡುವಾಗ, ಸರ್ಕಾರ ಅಥವಾ ನಿಗಮದ ವಿರುದ್ಧ ಹೋರಾಡುವುದಿಲ್ಲ. ಅವರು ತಮ್ಮದೇ ʼಭೂಮಿ ಸೇನಾ'ವನ್ನು ಹೊಂದಿದ್ದಾರೆ, ಮತ್ತು ಅವರು ದುರಾಸೆ ಮತ್ತು ಸ್ವಾರ್ಥದಲ್ಲಿ ಬೇರೂರಿರುವ ಮೌಲ್ಯಗಳ ವಿರುದ್ಧ ಹೋರಾಡುತ್ತಾರೆ.
ಇದು ನಾಗರಿಕತೆಯ ಬೆಳವಣಿಗೆಯೊಂದಿಗೆ ಪ್ರಾರಂಭವಾಯಿತು - ನಾವು ವ್ಯಕ್ತಿವಾದದ ಉದಯವನ್ನು ನೋಡಲು ಪ್ರಾರಂಭಿಸಿದಾಗ, ಮನುಷ್ಯನನ್ನು ಪ್ರಕೃತಿಯಿಂದ ಪ್ರತ್ಯೇಕ ಘಟಕವಾಗಿ ನೋಡಲು ಪ್ರಾರಂಭಿಸಿದೆವು. ಅಲ್ಲಿಂದಲೇ ಸಂಘರ್ಷ ಪ್ರಾರಂಭವಾಯಿತು. ಒಮ್ಮೆ ನಾವು ನದಿಯಿಂದ ಬೇರ್ಪಟ್ಟ ನಂತರ, ನಮ್ಮ ಒಳಚರಂಡಿ ತ್ಯಾಜ್ಯ, ರಾಸಾಯನಿಕ ಮತ್ತು ಕೈಗಾರಿಕಾ ತ್ಯಾಜ್ಯವನ್ನು ನೀರಿನಲ್ಲಿ ಸೇರಿಸಲು ನಾವು ಹಿಂಜರಿಯುವುದಿಲ್ಲ. ನಾವು ನದಿಯನ್ನು ಸಂಪನ್ಮೂಲವಾಗಿ ಹೊಂದಲು ಪ್ರಾರಂಭಿಸುತ್ತೇವೆ. ಒಮ್ಮೆ ನಾವು ನಮ್ಮನ್ನು ಪ್ರಕೃತಿಯಿಂದ ಪ್ರತ್ಯೇಕ ಮತ್ತು ಶ್ರೇಷ್ಠ ಎಂದು ಭಾವಿಸಿದರೆ, ಅದನ್ನು ಕೊಳ್ಳೆ ಹೊಡೆಯುವುದು ಮತ್ತು ಶೋಷಿಸುವುದು ಸುಲಭ. ಮತ್ತೊಂದೆಡೆ, ಆದಿವಾಸಿ ಸಮುದಾಯದ ಮೌಲ್ಯಗಳು ಕೇವಲ ಕೇವಲ ಕಾಗದದ ಮೇಲೆ ಬರೆಯಲಾದ ಮೌಲ್ಯಗಳಲ್ಲ. ನಮ್ಮ ಮೌಲ್ಯಗಳು ನಮ್ಮ ಜೀವನ ವಿಧಾನ.


