ತನ್ನ ವೃತ್ತಿ ಮತ್ತು ಜಾತಿಗಂಟಿಕೊಂಡಿರುವ ಕಳಂಕವನ್ನು ಜೊತೆಯಲ್ಲಿರಿಸಿಕೊಂಡೇ ಮಣಿ ತನ್ನ ಬರೋಬ್ಬರಿ ಮೂವತ್ತು ವರ್ಷಗಳನ್ನು ಹಾಳಾದ ಒಳಚರಂಡಿಗಳನ್ನು ರಿಪೇರಿ ಮಾಡುವುದರಲ್ಲಿ ಕಳೆದಿದ್ದಾನೆ. ಕೆಸರು, ಕೊಳಚೆ, ಮಲಮೂತ್ರಗಳಿಂದ ತುಂಬಿದ ಗುಂಡಿಗಳಿಗೆ ಪ್ರತೀಬಾರಿಯೂ ಆತ ಹಾರಿದಾಗಲೆಲ್ಲಾ ತಾನು ಜೀವಂತ ಮರಳುವೆನೋ ಇಲ್ಲವೋ ಎಂಬ ಪ್ರಶ್ನೆಯು ಅವನಿಗೆ ಕಾಡುತ್ತಿರುತ್ತದೆಯಂತೆ.
ಭಾಷಾ ಸಿಂಗ್ ಸ್ವತಂತ್ರ ಪತ್ರಕರ್ತೆ ಮತ್ತು ಬರಹಗಾರರು ಮತ್ತು 2017 ಪರಿ ಫೆಲೋ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತ ಅವರ ಪುಸ್ತಕವಾದ 'ಅದೃಶ್ಯ ಭಾರತ್', (ಹಿಂದಿ) ಅನ್ನು 2012ರಲ್ಲಿ (ಇಂಗ್ಲಿಷಿನಲ್ಲಿ 'ಅನ್‌ಸೀನ್' 2014) ಪೆಂಗ್ವಿನ್ ಪ್ರಕಟಿಸಿತು. ಅವರ ಪತ್ರಿಕೋದ್ಯಮವು ಉತ್ತರ ಭಾರತದ ಕೃಷಿ ಸಂಕಟ, ಪರಮಾಣು ಸ್ಥಾವರಗಳ ರಾಜಕೀಯ ಮತ್ತು ನೈಜ ವಾಸ್ತವತೆಗಳು ಮತ್ತು ದಲಿತ, ಲಿಂಗ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಕೇಂದ್ರೀಕೃತಗೊಂಡಿದೆ.
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.