“ನಮ್ಮನ್ನು ಇಲ್ಲಿಗೆ ಕರೆತಂದವರಿಗೆ ನಾನು ಅಡುಗೆ ಮಾಡುತ್ತಿದ್ದೇನೆ. ನನ್ನ ಪತಿ ಅವರಿಗೆ ಇಟ್ಟಿಗೆಗಳನ್ನು ತಯಾರಿಸಲು ಸಹಾಯ ಮಾಡುತ್ತಿದ್ದಾರೆ,” ಎಂದು ಹೈದರಾಬಾದ್ನ ಇಟ್ಟಿಗೆ ಗೂಡಿನಲ್ಲಿ ನಮಗೆ ಪರಿಚಿತರಾದ ಊರ್ವಶಿ ಹೇಳುತ್ತಾರೆ.
ಇಟ್ಟಿಗೆ ಭಟ್ಟಿಯಲ್ಲಿ ಸುಮಾರು 61 ವರ್ಷದ ದೇಗು ಧಾರುವ ಮತ್ತು ಸುಮಾರು 58 ವರ್ಷದ ಊರ್ವಶಿ ಧಾರುವೆಯವರನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಈ ಗಂಡ-ಹೆಂಡತಿ ಇಬ್ಬರೂ ಪಶ್ಚಿಮ ಒಡಿಶಾದ ಬೋಲಂಗಿರ್ ಜಿಲ್ಲೆಯ ಬೆಲ್ಪಾರಾ ಗ್ರಾಮ ಪಂಚಾಯತ್ನ ಪಂಡ್ರಿಜೋರ್ ಗ್ರಾಮದ ನಿವಾಸಿಗಳು. ಇದು ದೇಶದ ಅತ್ಯಂತ ಬಡ ಹಳ್ಳಿಗಳಲ್ಲಿ ಒಂದಾಗಿದೆ.
50 ವರ್ಷಗಳಿಗೂ ಹೆಚ್ಚು ಕಾಲ ವಲಸೆ ಹೋಗುತ್ತಿರುವ ಪಶ್ಚಿಮ ಒಡಿಶಾದ ಜನರ ಕುರಿತು ನಾನು ಇಪ್ಪತ್ತು ವರ್ಷಗಳಿಂದ ವರದಿ ಮಾಡುತ್ತಿದ್ದೇನೆ. ಈ ಪ್ರದೇಶವು ಹಸಿವು ಮತ್ತು ಅದರ ಪರಿಣಾಮದಿಂದ ಸಾವುಗಳು ಹಾಗೂ ಮಕ್ಕಳ ಮಾರಾಟಕ್ಕೆ ಕುಖ್ಯಾತವಾಗಿದೆ. ಇದು ಬಡತನ ಮತ್ತು ನೀತಿಗಳ ಕೆಟ್ಟ ಪರಿಣಾಮಗಳ ಕುರಿತಾಗಿ ಕೂಡ ಕುಖ್ಯಾತಿಯನ್ನು ಹೊಂದಿದ ಪ್ರದೇಶವಾಗಿದೆ.
1966-67ರಲ್ಲಿ ಬರಗಾಲದಂತಹ ಪರಿಸ್ಥಿತಿಯು ಜನರನ್ನು ವಲಸೆ ಹೋಗುವಂತೆ ಮಾಡಿತು. 90ರ ದಶಕದ ಹತ್ತರ ದಶಕದಲ್ಲಿ ಕಾಳಹಂಡಿ, ನುವಾಪರ, ಬೋಲಂಗೀರ್ ಮತ್ತಿತರ ಜಿಲ್ಲೆಗಳಲ್ಲಿ ಭೀಕರ ಬರಗಾಲ ಉಂಟಾದಾಗ ಮತ್ತೆ ಜನ ಇಲ್ಲಿಂದ ವಲಸೆ ಬರಲಾರಂಭಿಸಿದರು. ಆ ಸಮಯದಲ್ಲಿ, ದಿನಗೂಲಿ ಕೆಲಸ ಮಾಡುವವರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ನಾವು ಗಮನಿಸಿದ್ದೇವೆ, ಆದರೆ ವಯಸ್ಸಾದವರು ಹಳ್ಳಿಗಳಲ್ಲಿ ಉಳಿಯುತ್ತಿದ್ದರು.





