“ಪಾನಿ ಲೇ ಲೋ! ಪಾನಿ [ನೀರು ಬೇಕಾ! ನೀರು]!"

ಈಗ ಹೋಗಿ ನೀರು ತುಂಬಿಸಲು ಪಾತ್ರೆಗಳನ್ನು ತರಬೇಡಿ. ಈ ನೀರಿನ ಟ್ಯಾಂಕರ್‌ ಸ್ವಲ್ಪ ಸಣ್ಣದು. ಪ್ಲಾಸ್ಟಿಕ್ ಬಾಟಲ್, ಹಳೆಯ ರಬ್ಬರ್ ಚಪ್ಪಲ್, ಹೆಚ್ಚು ಉದ್ದವಿಲ್ಲದ  ಪ್ಲಾಸ್ಟಿಕ್ ಪೈಪ್ ಮತ್ತು ಮರದ ತುಂಡುಗಳನ್ನು ಬಳಸಿ ತಯಾರಿಸಿದ ಈ 'ಟ್ಯಾಂಕರ್'ನಲ್ಲಿ ಒಂದು ಲೋಟ ನೀರನ್ನು ಮಾತ್ರ ಸಾಗಿಸಲು ಸಾಧ್ಯ.

ಬಲ್ವೀರ್ ಸಿಂಗ್, ಭವಾನಿ ಸಿಂಗ್, ಕೈಲಾಶ್ ಕನ್ವರ್ ಮತ್ತು ಮೋತಿ ಸಿಂಗ್ - 5 ರಿಂದ 13 ವರ್ಷ ಪ್ರಾಯದ ಸಾನ್ವಟದ ಈ ಮಕ್ಕಳು - ವಾರಕ್ಕೆ ಎರಡು ಬಾರಿ ಬರುವ ನೀರಿನ ಟ್ಯಾಂಕರನ್ನು ತಮ್ಮ ಪೋಷಕರು ಮತ್ತು ಇತರರು ಹಳ್ಳಿಯಲ್ಲಿ ಹೇಗೆ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಿ ಈ ಆಟದ ಸಾಮಾನನ್ನು ತಯಾರಿಸಿದ್ದಾರೆ.  ಈ ಗ್ರಾಮ ರಾಜಸ್ಥಾನದ ಪೂರ್ವದ ಒಂದು ಮೂಲೆಯಲ್ಲಿದೆ.

PHOTO • Urja
PHOTO • Urja

ಎಡ: ಜೈಸಲ್ಮೇರ್‌ನ ಸಾನ್ವಟದಲ್ಲಿರುವ ತಮ್ಮ ಮನೆಯ ಹೊರಗಿನ ಕೇರು ಮರದ ಕೆಳಗೆ ಆಟಿಕೆಯೊಂದಿಗೆ ಆಟವಾಡುತ್ತಿರುವ ಭವಾನಿ ಸಿಂಗ್ (ಕುಳಿತಿರುವವನು) ಮತ್ತು ಬಲ್ವೀರ್ ಸಿಂಗ್. ಬಲ: ರಿಪೇರಿ ಕೆಲಸ ಮಾಡುತ್ತಿರುವ ಭವಾನಿ

PHOTO • Urja
PHOTO • Urja

ಎಡ: ತಮ್ಮ ಮನೆಗಳು ಹಾಗೂ ಸುತ್ತಮುತ್ತ ಆಡುತ್ತಿರುವ ಕೈಲಾಶ್ ಕನ್ವರ್ ಮತ್ತು ಭವಾನಿ ಸಿಂಗ್. ಬಲ: ಟ್ಯಾಂಕರನ್ನು ಎಳೆದುಕೊಂಡು ಹೋಗುತ್ತಿರುವ ಭವಾನಿ

ಇಲ್ಲಿ ಮೈಲುಗಟ್ಟಲೆ ಒಣ ಭೂಮಿಯೇ ಇದೆ, ಅಂತರ್ಜಲವೂ ಇಲ್ಲ. ಅಲ್ಲಲ್ಲಿ ಇರುವ ಕೆಲವು ಓರಾನ್‌ಗಳಲ್ಲಿ (ದೇವರ ಬನ) ಮಾತ್ರ ದೊಡ್ಡ ಕೆರೆಗಳಿವೆ.

ಕೆಲವೊಮ್ಮೆ ಮಕ್ಕಳು ಈ ನೀರಿನ ಟ್ಯಾಂಕರ್‌ಗೆ ಪ್ಲಾಸ್ಟಿಕ್‌ ಕ್ಯಾನನ್ನು ಕತ್ತರಿಸಿ ಮಾಡಿದ ಪಾಟೆಯನ್ನು ಜೋಡಿಸುತ್ತಾರೆ.  ವರದಿಗಾರರು ಈ ಬಗ್ಗೆ ಮಕ್ಕಳೊಂದಿಗೆ ಮಾತನಾಡಿದಾಗ, ಬೇರೆ ಬೇರೆ ಭಾಗಗಳನ್ನು ಹುಡುಕಿ ತರಲು ಸಮಯ ಬೇಕು, ಅವುಗಳನ್ನು ಗುಜುರಿಗೆ ಹಾಕಿರುತ್ತಾರೆ ಎಂದು ಹೇಳಿದರು.

ಚಂದದ ಆಟಿಕೆಯ ಗಟ್ಟಿಯಾದ ಚೌಕಟ್ಟು ಸಿದ್ದವಾದ ಮೇಲೆ, ಅದಕ್ಕೆ ಉದ್ದದ ಲೋಹದ ತಂತಿಯೊಂದನ್ನು ಬಿಗಿದು ಸುತ್ತವ ಚಕ್ರಗಳ ಮೂಲಕ ಟ್ಯಾಂಕರನ್ನು ಓಡಿಸುತ್ತಾರೆ. ಹೀಗೇ ಈ ಟ್ಯಾಂಕರನ್ನು ಎಳೆಯುತ್ತಾ, ಕೇರು ಮರದ (ಕ್ಯಾಪಾರಿಸ್ ಡೆಸಿಡುವಾ) ಅಡಿಯಿಂದ ಕೂಗಳತೆಯ ಅಂತರದಲ್ಲಿರುವ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ.

PHOTO • Urja
PHOTO • Urja

ಎಡದಿಂದ ಬಲಕ್ಕೆ: ಎಡದಿಂದ ಬಲಕ್ಕೆ ನಿಂತಿರುವ ಕೈಲಾಶ್ ಕನ್ವರ್, ಭವಾನಿ ಸಿಂಗ್ (ಹಿಂದೆ), ಬಲವೀರ್ ಸಿಂಗ್ ಮತ್ತು ಮೋತಿ ಸಿಂಗ್ (ಹಳದಿ ಶರ್ಟ್). ಬಲ: ರೈತರಾಗಿರುವ ಸಾನ್ವಟದ ಹೆಚ್ಚಿನ ಜನ, ಮೇಕೆಗಳನ್ನೂ ಸಾಕುತ್ತಾರೆ

ಕನ್ನಡ: ಚರಣ್‌ ಐವರ್ನಾಡು

Urja

ऊर्जा (जी आपलं पहिलं नाव वापरणंच पसंत करते) बनस्थळी विद्यापीठ, टोंक, राजस्थान येथे पत्रकारिता व जनसंवाद विषयात बी.ए. पदवीचं शिक्षण घेत आहे. पारी मधील प्रशिक्षणाचा भाग म्हणून तिने हा लेख लिहिला आहे.

यांचे इतर लिखाण Urja
Translator : Charan Aivarnad

Charan Aivarnad is a poet and a writer. He can be reached at: [email protected]

यांचे इतर लिखाण Charan Aivarnad