ತೆಳ್ಳಗಿನ ಮೈಕಟ್ಟಿನ ಮಾಧುರಿಯವರು ತಮ್ಮ ಮಗಳು ಅವಳ ಬದುಕಿನಲ್ಲಿ ಏನನ್ನಾದರೂ ಅರ್ಥಪೂರ್ಣವಾದದ್ದನ್ನು ಸಾಧಿಸುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ. ಅವರ ಗಂಡ ಮತ್ತು ಊರ್ವಶಿಯ ಅಪ್ಪ ಊರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡುವುದರ ಜೊತೆಗೆ ಹತ್ತಿರ ಸಣ್ಣ ಕಾರ್ಖಾನೆಯೊಂದರಲ್ಲಿ ದಿನಗೂಲಿ ನೌಕರನಾಗಿಯೂ ದುಡಿಯುತ್ತಾರೆ.
“ಅವಳು ನಮ್ಮೊಂದಿಗೆ ಇದ್ದರೆ, ಇನ್ನೊಂದು 10 ವರ್ಷಗಳಲ್ಲಿ ಅವಳೂ ನನ್ನಂತೆಯೇ ಆಗುತ್ತಾಳೆ. ಮದುವೆ, ಮಕ್ಕಳು, ಹೊಲದಲ್ಲಿ ದುಡಿಯುವುದು ಮತ್ತೆ ಒಂದು ದಿನ ಸಾಯುವುದು. ಇಷ್ಟರಲ್ಲೇ ಅವಳ ಬದುಕು ಮುಗಿದುಹೋಗುತ್ತದೆ” ಎನ್ನುತ್ತಾರೆ ಊರ್ವಶಿಯ ತಾಯಿ. ಅವರು ಮೊಯಿ ಎನ್ನುವಲ್ಲಿರುವ ಮ್ಮ ಎರಡು ಕೋಣೆಗಳ ಮನೆಯಲ್ಲಿ ಪತಿ ಮತ್ತು ಮಾವನ ಪಕ್ಕದಲ್ಲಿ ಕುಳಿತು ಪರಿಯೊಂದಿಗೆ ಮಾತನಾಡುತ್ತಿದ್ದರು. “ಅವಳು ಅಂತಹ ಬದುಕನ್ನು ಬದುಕುವುದು ನನಗೆ ಇಷ್ಟವಿಲ್ಲ” ಎಂದು ಅವರು ಹೇಳುತ್ತಾರೆ.
ಊರ್ವಶಿ ತಾಂಡೇಕರ್ ಅವರನ್ನು ʼಮಾಮಾʼ ಎಂದು ಕರೆಯುತ್ತಾಳೆ. ಈ ಬಾಲಕಿಯನ್ನು ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಈ ತರಬೇತುದಾರನಿಗೆ 35 ವರ್ಷ ಮತ್ತು ಮದುವೆ ಆಗಿರಲಿಲ್ಲ.
ತಾಂಡೇಕರ್ ದಲಿತ, ಚಮ್ಹಾರ್ ಜಾತಿಗೆ ಸೇರಿದವರುಮತ್ತುಭಂಡಾರ, ಗೊಂಡಿಯಾಮತ್ತುಗಡಚಿರೋಲಿ ಜಿಲ್ಲೆಗಳಗ್ರಾಮೀಣಪ್ರದೇಶಗಳಿಂದಉತ್ತಮಕ್ರೀಡಾಪಟುಗಳನ್ನು ಹೊರತರುವ ಕನಸು ಕಾಣುತ್ತಿದ್ದಾರೆ. ಅವರು ಈ ಯುವ ಮನಸ್ಸುಗಳಿಗೆ ಹೊಸ ರೆಕ್ಕೆ ಕಟ್ಟುವ ಕನಸು ಕಾಣುತ್ತಿದ್ದಾರೆ. ಆ ಮಕ್ಕಳನ್ನು ಓಟದ ಮೈದಾನದಲ್ಲಿ ನೋಡುವ ಹಂಬಲ ಅವರದು.
ಊರ್ವಶಿ ಜಾತಿಯಿಂದ ಕುಣಬಿ (ಒಬಿಸಿ). ಆದರೆ ಅವಳ ಪೋಷಕರು ಜಾತಿ ಶ್ರೇಣಿ ಮತ್ತು ಪಿತೃಪ್ರಭುತ್ವದ ಎರಡನ್ನೂ ಮೀರಿ ನಿಲ್ಲಬೇಕಾದ ಅವಶ್ಯಕತೆಯನ್ನು ಮನಗಂಡರು. ಭಂಡಾರದ ಶಿವಾಜಿ ಕ್ರೀಡಾಂಗಣದಲ್ಲಿ 2024 ರ ಬೇಸಿಗೆಯ ಬೆಳಿಗ್ಗೆ ಪರಿಯೊಂದಿಗೆ ಮಾತನಾಡಿದ ತಾಂಡೇಕರ್, ಊರ್ವಶಿ ವಿಶೇಷ ಮಗು ಎಂದು ಹೇಳುತ್ತಾರೆ.
ಭಂಡಾರದಲ್ಲಿ, ಅವರು ಅನಾಥ ಪಿಂಡಕ್ ಎಂಬ ಹೆಸರಿನ ಅಕಾಡೆಮಿಯೊಂದನ್ನು ನಡೆಸುತ್ತಿದ್ದಾರೆ. ಸಣ್ಣ ಸಣ್ಣ ದೇಣಿಗೆಗಳ ಮೂಲಕ ಅವರು ಈ ಅಕಾಡೆಮಿಯನ್ನು ಒಬ್ಬರೇ ನಿಭಾಯಿಸುತ್ತಾ ಬಂದಿದ್ದಾರೆ. ಮೂಲಕ ಹಣವನ್ನು ಸಂಗ್ರಹಿಸುತ್ತಾರೆ. ದುಂಡಗಿನ ಮುಖ ಮತ್ತು ತೀಕ್ಷ್ಣವಾದ, ಪ್ರೀತಿಯ ಕಣ್ಣುಗಳನ್ನು ಹೊಂದಿರುವ ಕುಳ್ಳಗಿನ ವ್ಯಕ್ತಿಯಾದ ಅವರು ಮಹಾತ್ವಾಂಕ್ಷೆಯೊಂದಿಗೆ ತನ್ನ ಬಳಿ ಬಂದಿರುವ ಮಕ್ಕಳಿಗೆ ಎಂದಿಗೂ ವೈಫಲ್ಯ ಮತ್ತು ಹಿನ್ನೆಡೆಗೆ ಹೆದರಬೇಡಿ ಎಂದು ಹುರಿದುಂಬಿಸುವ ಮಾತನ್ನಾಡುತ್ತಾರೆ.