ಕವಿತೆಯಲ್ಲಿ ನಾವು ಬದುಕನ್ನು ಪೂರ್ತಿಯಾಗಿ ಬದುಕುತ್ತೇವೆ; ಗದ್ಯದಲ್ಲಿ ನಾವು ಸಮಾಜ ಮತ್ತು ಮನುಷ್ಯರ ನಡುವೆ ಸೃಷ್ಟಿಸಲಾದ ಅಂತರದಲ್ಲಿ ಬೇಯುತ್ತೇವೆ ಎಂದು ಈ ಪದ್ಯದಲ್ಲಿ ಹೇಳಲಾಗಿದೆ. ಕವಿತೆಯೆನ್ನುವುದು ಹತಾಶೆ, ಖಂಡನೆ, ಪ್ರಶ್ನಿಸುವಿಕೆ, ಹೋಲಿಕೆಗಳು, ನೆನಪುಗಳು, ಕನಸುಗಳು, ಸಾಧ್ಯತೆಗಳ ಕುರಿತು ಮಾತನಾಡಬಹುದಾದ ಸ್ಥಳ. ಇದು ನಮ್ಮ ಒಳ ಹೊರಗನ್ನು ನೋಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ನಾವು ಕವಿತೆ ಕೇಳುವುದನ್ನು ನಿಲ್ಲಿಸಿದಾಗ ವ್ಯಕ್ತಿಯಾಗಿ ಮತ್ತು ಸಮಾಜವಾಗಿ ಅನುಭೂತಿಯನ್ನು ಕಳೆದುಕೊಳ್ಳುತ್ತೇವೆ.
ದೇವನಾಗರಿ ಲಿಪಿಯನ್ನು ಬಳಸಿಕೊಂಡು ಮೂಲತಃ ದೆಹ್ವಾಲಿ ಭಿಲಿಯಲ್ಲಿ ಬರೆದ ಜಿತೇಂದ್ರ ವಾಸವ ಅವರ ಕವಿತೆಯನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ.
कविता उनायां बोंद की देदोहो
मां पावुहूं! तुमुहुं सोवता पोंगा
बाठे बांअणे बोंद की लेदेहें
खोबोर नाहा काहा?
तुमां बारे हेरां मोन नाहां का
बारे ने केड़ाल माज आवां नाह द्याआ
मान लागेहे तुमुहूं कविता उनायां बोंद की देदोहो
मांय उनायोहो
दुखू पाहाड़, मयाल्या खाड़्या
इयूज वाटे रीईन निग्त्याहा
पेन मां पावुहूं! तुमुहुं सोवता पोंगा
बाठे बांअणे बोंद की लेदेहें
खोबोर नाहा काहा?
तुमां बारे हेरां मोन नाहां का
बारे ने केड़ाल माज आवां नाह द्याआ मोन
मान लागेहे तुमुहूं कविता उनायां बोंद की देदोहो
पेन मां पावुहू!
तुमुहू सौवता डोआं खुल्ला राखजा मासां होच
बास तुमुहू सोवताल ता ही सेका
जेहकी हेअतेहे वागलें लोटकीन सौवताल
तुमुहू ही सेका तुमां माजर्या दोर्याले
जो पुनवू चादू की उथलपुथल वेएत्लो
तुमुहू ही सेका का
तुमां डोआं तालाय हुकाय रियिही
मां पावुहू! तुमनेह डोगडा बी केहेकी आखूं
आगीफूंगा दोबी रेताहा तिहमे
तुमुहू कोलाहा से कोम नाहाँ
हाचो गोग्यो ना माये
किही ने बी आगीफूंगो सिलगावी सेकेह तुमनेह
पेन मां पावुहूं! तुमुहुं सोवता पोंगा
बाठे बांअणे बोंद की लेदेहें
खोबोर नाहा काहा?
तुमां बारे हेरां मोन नाहां का
बारे ने केड़ाल माज आवां नाह द्याआ मोन
मान लागेहे तुमुहूं कविता उनायां बोंद की देदोहो
तुमुहू जुगु आंदारो हेरा
चोमकुता ताराहान हेरा
चुलाते नाहां आंदारारी
सोवताला बालतेहे
तिया आह्लीपाहली दून्या खातोर
खूब ताकत वालो हाय दिही
तियाआ ताकात जोडिन राखेहे
तियाआ दुन्याल
मां डायी आजलिही जोडती रेहे
तियू डायि नोजरी की
टुटला मोतिई मोनकाहाने
आन मां याहकी खूब सितरें जोडीन
गोदड़ी बोनावेहे, पोंगा बाठा लोकू खातोर
तुमुहू आवाहा हेरां खातोर???
ओह माफ केअजा, माय विहराय गेयलो
तुमुहुं सोवता पोंगा
बाठे बांअणे बोंद की लेदेहें
खोबोर नाहा काहा?
तुमां बारे हेरां मोन नाहां का
बारे ने केड़ाल माज आवां नाह द्याआ मोन
मान लागेहे तुमुहूं कविता उनायां बोंद की देदोहो
ನೀನು ಕವಿತೆ ಓದುವುದನ್ನು ನಿಲ್ಲಿಸಿರುವುದರಿಂದ
ಯಾಕೆ
ಗೆಳೆಯ ಹೀಗೆ
ಮನೆಯ
ಎಲ್ಲ ಬಾಗಿಲುಗಳನ್ನು ಮುಚ್ಚಿಕೊಂಡಿರುವೆ?
ನೀನು
ಹೊರ ಜಗತ್ತನ್ನು ನೋಡಬಾರದು ಎಂದೋ
ಅಥವಾ
ಹೊರಗಿನವರು ಒಳ ಬಾರದಿರಲಿ ಎಂದೋ?
ನನಗನ್ನಿಸುತ್ತಿದೆ
ಬಹುಶಃ ನೀನು ಕವಿತೆ ಕೇಳಿಸಿಕೊಳ್ಳುವುದನ್ನು ನಿಲ್ಲಿಸಿರಬೇಕು.
ಈ
ಕವಿತೆಯಲ್ಲಿ
ಪರ್ವತದೆತ್ತರದ
ನೋವು
ಹರಿಯುವ
ಪ್ರೀತಿಯ ನದಿ
ಎರಡೂ
ಇರುತ್ತವೆ
ಆದರೆ
ನೀನು ಮನೆಯ ಬಾಗಿಲು ಮುಚ್ಚಿಕೊಂಡಿರುವೆ.
ಏಕೆಂದು
ನನಗೂ ಗೊತ್ತಿಲ್ಲ.
ನೀನು
ಹೊರ ಜಗತ್ತನ್ನು ನೋಡಬಾರದು ಎಂದೋ
ಅಥವಾ
ಹೊರಗಿನವರು ಒಳ ಬಾರದಿರಲಿ ಎಂದೋ?
ಬಹುಶಃ
ನೀನು ಕವಿತೆ ಕೇಳಿಸಿಕೊಳ್ಳುವುದನ್ನು ನಿಲ್ಲಿಸಿರಬೇಕು.
ಓ
ಗೆಳೆಯ! ಮೀನಿನಂತೆ ಸದಾ ತೆರೆದಿಟ್ಟುಕೊಂಡಿರು ನಿನ್ನ ಕಣ್ಣುಗಳನ್ನು,
ಆಗ
ನಿನಗೆ ನೀನು ಕಾಣುವೆ,
ಗೂಬೆಯಂತೆ
ಕತ್ತು ತಿರುಗಿಸಿ
ಪೂರ್ತಿಯಾಗಿ
ಹಿಂತಿರುಗಿ ನೋಡುವಾಗ.
ಒಂದು
ಕಾಲದಲ್ಲಿ ಹುಣ್ಣಿಮ್ಮೆಯ ಚಂದ್ರನ ಕಂಡು ಕುಣಿಯುತ್ತಿದ್ದ
ನಿನ್ನೊಳಗಿನ
ಕಡಲು ಬತ್ತಿ ಹೋಗಿರುವುದು ಕಾಣಬಹುದು.
ನಿನ್ನ
ಕಣ್ಣೊಳಗಿನ ಕೊಳ ಬತ್ತಿ ಹೋಗಿದೆ.
ಆದರೆ
ಗೆಳೆಯ, ನಿನ್ನನ್ನು ನಾನು ಕಲ್ಲಿಗೆ ಹೋಲಿಸಲಾರೆ,
ಹೇಗೆ
ಹೋಲಿಸಲಿ ನಿನ್ನನ್ನು ಕಲ್ಲಿಗೆ? ಕಲ್ಲಿನೊಳಗೂ ಬೆಂಕಿ ಅಡಗಿರುತ್ತದೆ.
ನಿನ್ನನ್ನು
ಕಲ್ಲಿದ್ದಲಿಗೆ ಹೋಲಿಸುವುದೇ ಸರಿ.
ಯಾವ
ಕಿಡಿ ಬೇಕಿದ್ದರೂ ನಿನ್ನೊಳಗೆ ಕಿಚ್ಚು ಹತ್ತಿಸಬಲ್ಲದು,
ಸರಿಯಲ್ಲವೆ
ಗೆಳೆಯ?
ಆದರೆ
ಗೆಳೆಯ, ನೀನು ಮನೆಯ ಬಾಗಿಲು ಮುಚ್ಚಿಕೊಂಡಿರುವೆ.
ಏಕೆಂದು
ನನಗೂ ಗೊತ್ತಿಲ್ಲ.
ನೀನು
ಹೊರ ಜಗತ್ತನ್ನು ನೋಡಬಾರದು ಎಂದೋ
ಅಥವಾ
ಹೊರಗಿನವರು ಒಳ ಬಾರದಿರಲಿ ಎಂದೋ?
ಬಹುಶಃ
ನೀನು ಕವಿತೆ ಕೇಳಿಸಿಕೊಳ್ಳುವುದನ್ನು ನಿಲ್ಲಿಸಿರಬೇಕು
ಆಕಾಶದಲ್ಲಿ
ದಟ್ಟೈಸುತ್ತಿರುವ ಕತ್ತಲೆಯನ್ನು ನೋಡು,
ಮಿನುಗುತ್ತಿರುವ
ಮಕ್ಷತ್ರಗಳ ನೋಡು
ಅವು
ಕತ್ತಲೆಗೆ ಹೆಸರುವುದಿಲ್ಲ
ಅವು
ಕತ್ತಲೆಯೊಂದಿಗೆ ಬಡಿದಾಡುವುದೂ ಇಲ್ಲ
ಅವು
ತಮ್ಮ ಪಾಡಿಗೆ ತಾವು ಬೆಳಗುತ್ತವೆ
ತಮ್ಮ
ಸುತ್ತಲಿನ ಜಗತ್ತಿಗೆ ಬೆಳಕಾಗುತ್ತ.
ಸೂರ್ಯ
ಮತ್ತಷ್ಟು ಶಕ್ತಿಶಾಲಿ.
ನನ್ನ
ಅಜ್ಜಿ ಸದಾ ಒಂದು ಹರಿದ ಹಾರದ ಮಣಿಗಳನ್ನು ಪೋಣಿಸುತ್ತಿರುತ್ತಿತ್ತಾಳೆ
ತನ್ನ
ಕುರುಡುಗಣ್ಣುಗಳಲ್ಲಿಯೇ.
ಮತ್ತೆ
ನನ್ನಮ್ಮ
ಮನೆಯಲ್ಲಿನ
ಹರಿದ ಬಟ್ಟೆಗಳನ್ನೆಲ್ಲ ಸೇರಿಸಿ
ಕೌದಿ
ಹೊಲಿಯುತ್ತಾಳೆ
ನೀನು
ನೋಡಬಯಸುವೆಯ ಇವೆಲ್ಲವನ್ನು?
ಓಹ್!
ಕ್ಷಮಿಸು ಗೆಳೆಯ, ನಾನು ಮರೆತಿದ್ದೆ
ನೀನು
ನಿನ್ನ ಮನೆಯ ಬಾಗಿಲನ್ನು ಮುಚ್ಚಿಕೊಂಡಿರುವೆ ಎನ್ನುವುದನ್ನು
ಯಾಕೆ
ಹೀಗೆ ಮಾಡಿರುವೆ ನೀನು?
ನೀನು
ಹೊರ ಜಗತ್ತನ್ನು ನೋಡಬಾರದು ಎಂದೋ
ಅಥವಾ
ಹೊರಗಿನವರು ಒಳ ಬಾರದಿರಲಿ ಎಂದೋ?
ಬಹುಶಃ
ನೀನು ಕವಿತೆ ಕೇಳಿಸಿಕೊಳ್ಳುವುದನ್ನು ನಿಲ್ಲಿಸಿರಬೇಕು.
ಅನುವಾದಕರು: ಶಂಕರ ಎನ್ ಕೆಂಚನೂರು