सूखा
रोज़ बरसता नैनों का जल
रोज़ उठा सरका देता हल
रूठ गए जब सूखे बादल
क्या जोते क्या बोवे पागल
सागर ताल बला से सूखे
हार न जीते प्यासे सूखे
दान दिया परसाद चढ़ाया
फिर काहे चौमासे सूखे
धूप ताप से बर गई धरती
अबके सूखे मर गई धरती
एक बाल ना एक कनूका
आग लगी परती की परती
भूखी आंखें मोटी मोटी
हाड़ से चिपकी सूखी बोटी
सूखी साखी उंगलियों में
सूखी चमड़ी सूखी रोटी
सूख गई है अमराई भी
सूख गई है अंगनाई भी
तीर सी लगती है छाती में
सूख गई है पुरवाई भी
गड्डे गिर्री डोरी सूखी
गगरी मटकी मोरी सूखी
पनघट पर क्या लेने जाए
इंतज़ार में गोरी सूखी
मावर लाली बिंदिया सूखी
धीरे धीरे निंदिया सूखी
आंचल में पलने वाली फिर
आशा चिंदिया चिंदिया सूखी
सूख चुके सब ज्वारों के तन
सूख चुके सब गायों के थन
काहे का घी कैसा मक्खन
सूख चुके सब हांडी बर्तन
फूलों के परखच्चे सूखे
पके नहीं फल कच्चे सूखे
जो बिरवान नहीं सूखे थे
सूखे अच्छे अच्छे सूखे
जातें, मेले, झांकी सूखी
दीवाली बैसाखी सूखी
चौथ मनी ना होली भीगी
चन्दन रोली राखी सूखी
बस कोयल की कूक न सूखी
घड़ी घड़ी की हूक न सूखी
सूखे चेहरे सूखे पंजर
लेकिन पेट की भूक न सूखी
ಬರ
ಕಣ್ಣೀರು ಸುರಿಯುತ್ತದೆ ಈ ಕಣ್ಣುಗಳಿಂದ ದಿನವೂ
ನೇಗಿಲು ಜಾರುತ್ತದೆ ಕೈಯಿಂದ.
ಮೋಡಗಳು ಕೋಪಗೊಳ್ಳುತ್ತವೆ ಪ್ರತಿ ದಿನವೂ
ಮತ್ತೆ ಹೇಗೆ ಮಾಡುವೆ ಬೇಸಾಯ ಮರುಳ?
ಕಡಲು ಒಣಗಿದೆ, ಕೆರೆಯೂ ಒಣಗಿದೆ.
ಹೊಲಗಳು ಬಾಡಿವೆ, ನೆಲ ಬಾಯಿಬಿಟ್ಟಿದೆ
ದೇವರಿಗೆ ಹರಕೆ ಕೊಟ್ಟೆ, ಹಣೆ ಹಚ್ಚಿ ಬೇಡಿಕೊಂಡೆ
ಆದರೂ ಕರುಣೆ ತೋರಲಿಲ್ಲವೇಕೆ ಮಳೆಯೇ?
ಸೂರ್ಯನ ಸಿಟ್ಟಿಗೆ ನೆಲ ಹೋಗಿದೆ ಸುಟ್ಟು
ಇನ್ನು ಉಳಿಯದು ನೆಲ, ಊರಿಗೆ ಬರ ಬಂದಿದೆ
ಕಾಣುತ್ತಿಲ್ಲ ಎಲ್ಲೂ ಕಡೇ ಪಕ್ಷ ಹೊಟ್ಟು
ಪಾಳು ಬಿದ್ದಿದೆ ಭೂಮಿ ಸೂರ್ಯನ ಶಾಪಕ್ಕೆ ಸಿಕ್ಕು
ಹಸಿದ ಕಣ್ಣುಗಳು ಹೊರಬಿದ್ದಿವೆ
ಮೈಯಲ್ಲಿ ನೆಣವಿಲ್ಲದೆ ಹೊರ ಬಿದ್ದಿದೆ ಮೂಳೆ
ಒಣ ಚರ್ಮ, ಅಯ್ಯೋ ಬರವೇ!
ಒಣ ಬೆರಳುಗಳು ಒಣ ರೊಟ್ಟಿ ಮುರಿಯುತ್ತಿವೆ
ತೋಟ ಒಣಗಿದೆ
ಅಂಗಳವೂ ಒಣಗಿದೆ
ತೇವವಿಲ್ಲದ ನನ್ನೆದೆಯಂತೆ
ಬೇಸರದಿಂದ ಉಸಿರೆಳೆದುಕೊಂಡರೆ
ಬೀಸುವ ಗಾಳಿಯೂ ಬಿಸಿ
ಮಡಕೆ, ಕೊಡಪಾನಗಳು ಒಣಗಿವೆ
ಮರದ ಕಂಬ, ರಾಟೆ, ಮತ್ತೆ ಹಗ್ಗವೂ ಒಣಗಿದೆ
ಎಲ್ಲಿಂದ ತರುವುದು ನೀರನ್ನು?
ಭರವಸೆಯೇ ಕಾಣದೆ ಈಗ ಅವಳ ಗಂಟಲೂ ಬತ್ತಿದೆ
ಮೊದಲಿಗೆ ಕೆನ್ನೆಯ ಮೇಲಿನ ಗುಲಾಬಿ
ನಂತರ ಹಣೆಯ ಮೇಲಿನ ಕುಂಕುಮ
ಮತ್ತೆ ನಿಧಾನವಾಗಿ ನಿದ್ರೆ
ಹೀಗೆ ಎಲ್ಲವನ್ನೂ ಕಳೆದುಕೊಂಡಿದ್ದಾಳೆ ಬರದಿಂದಾಗಿ
ಇದೆಲ್ಲದರ ನಡುವೆ
ಹೊಟ್ಟೆಯೊಳಗೆ ಮೊಳೆತಿತ್ತು ಭರವಸೆಯೊಂದು
ಈಗ ಅದೂ ಕರಗಿ ಹೋಯಿತು ಹನಿ ಹನಿಯಾಗಿ
ಎತ್ತುಗಳ ಮೈ ಒಣಗಿದೆ
ಹಸುಗಳ ಕೆಚ್ಚಲು ಬತ್ತಿದೆ
ಎಲ್ಲಿದೆ ಬೆಣ್ಣೆ? ಎಲ್ಲಿದೆ ತುಪ್ಪ?
ಈಗ ಮನೆಯ ಪಾತ್ರೆಗಳೂ ಖಾಲಿ ಖಾಲಿ
ಕಾಲಕ್ಕೂ ಮೊದಲೇ ಹಣ್ಣುಗಳು ಒಣಗಿವೆ
ಹೂವಿನ ದಳಗಳೂ ಉದುರುತ್ತಿವೆ
ಹಸಿರಿದ್ದ ಮರವೂ ಒಣಗಿ ನಿಂತಿದೆ
ದಿನ, ಗಂಟೆಗಳೂ ಈಗ ಒಣಗಿದಂತೆ ಭಾಸ
ಹಬ್ಬ, ಸಂತೆ, ಮತ್ತು ಮೆರವಣಿಗೆಗಳು
ದೀಪಾವಳಿ, ಬೈಸಾಖಿ, ಛೌತ್, ಹೋಲಿ
ಚಂದನ ತಿಲಕವಿಲ್ಲ, ಕುಂಕುಮವಿಲ್ಲ
ಈ ಬಾರಿಯ ರಾಖಿಯೂ ಶುಷ್ಕ
ಆದರೆ ಕೋಗಿಲೆ ಈಗಲೂ ಹಾಡುತ್ತಿದೆ.
ನೋವು, ದುಃಖ ಎದೆಯಲ್ಲಿ ಇನ್ನೂ ಜೀವಂತವಿದೆ
ನೀರ್ಜೀವ ಮುಖ ಹಾಗೂ ಅಸ್ಥಿಪಂಜರದ ಹಿಂದೆ
ಒಲೆಯಲ್ಲಿ ಒಂದೇ ಸಮನೇ ಉರಿಯುತ್ತಿದೆ ಹಸಿವೆಯ ಬೆಂಕಿ