ಶಾಂತಿಲಾಲ್, ಶಾಂತು, ಟಿಣಿಯೋ: ಮೂರು ಹೆಸರುಗಳು. ಒಬ್ಬರೇ ವ್ಯಕ್ತಿ. ಆದರೆ ನಾವು ಈ ಕತೆಗೆ ಅವರ ನಾಲ್ಕನೇ ಹೆಸರನ್ನೇ ಬಳಸೋಣ. ಅದು ಸಬರಕಾಂತ್ ಜಿಲ್ಲೆಯ ವಡಾಲಿ ಭಾಷೆಯಲ್ಲಿ ಅವರ ಊರಿನವರು ಅವರನ್ನು ಕರೆಯು ಹೆಸರು. ಆ ಹೆಸರು ಶೋಂತೋ.
ಶೋಂತು ಎನ್ನುವುದು ನಿಜಕ್ಕೂ ಒಂದು ಅಸಾಧಾರಣ ವ್ಯಕ್ತಿತ್ವ. ಇಲ್ಲಿ ಅಸಾಧಾರಣ ವ್ಯಕ್ತಿ ಎನ್ನುವುದು ಅನನ್ಯ, ಪ್ರಸಿದ್ಧ ಮುಂತಾದ ವಿಶೇಷಣಗಳ ಪರಿಭಾಷೆಗಳ ಅಡಿಯಲ್ಲಿ ಬರುವುದಿಲ್ಲ. ಅವರನ್ನು ಬದಲಾಗಿ, ನೀತಿವಂತರು, ಬಡವರು, ದೀನದಲಿತರು ಅಥವಾ ದಲಿತರು ಎನ್ನುವ ಕಾರಣಕ್ಕಾಗಿ ಶಾಶ್ವತವಾಗಿ ನೆಲೆಯಿಲ್ಲದೆ ಒಂದೆಡೆಯಿಂದ ಇನ್ನೊಂದೆಡೆಗೆ ಅಲೆಯುವ, ಸದಾ ಯಾತನೆ ಅನುಭವಿಸುವ ವ್ಯಕ್ತಿಯೆಂದು ವ್ಯಾಖ್ಯಾನಿಸಬಹುದು. ಒಮ್ಮೊಮ್ಮೆ ಈ ಶೋಂತು ಎನ್ನುವ ಪಾತ್ರದ ಅಸ್ತಿತ್ವವೇ ಸುಳ್ಳು ಎನ್ನಿಸಿಬಿಡುತ್ತದೆ.
ತಂದೆ, ತಾಯಿ, ಒಬ್ಬ ಅಣ್ಣ, ಒಬ್ಬ ಅಕ್ಕ ಮತ್ತು ಒಬ್ಬ ತಂಗಿಯಿರುವ ಕುಟುಂಬ ಅವರದು. ಬಡತನವನ್ನೇ ಹಾಸಿ ಹೊದ್ದಿರುವ, ಸದಾ ತಮ್ಮ ಬಯಕೆಗಳನ್ನು ಹತ್ತಿಕ್ಕಿಕೊಂಡು ಬದುಕಬೇಕಿದ್ದ ಅನಿವಾರ್ಯತೆಯಿದ್ದ ಕುಟುಂಬವೂ ಆಗಿತ್ತದು. ಅಪ್ಪ ಮತ್ತು ಅಣ್ಣ ಕುಟುಂಬಕ್ಕೆ ಹೇಗೋ ಎರಡು ಹೊತ್ತಿನ ಊಟವನ್ನು ಸಂಪಾದಿಸುತ್ತಿದ್ದರು. ಅಪ್ಪ ಒಂದು ಸರಕು ಸಾಗಣೆ ಮಾಡುವ ಗೂಡ್ಸ್ ಟೆಂಪೋ ಓಡಿಸುತ್ತಿದ್ದರು. ಅವರು ಅದರಲ್ಲಿ ಪ್ಯಾಸೆಂಜರ್ ಹತ್ತಿಸುತ್ತಿರಲಿಲ್ಲವಾದ ಕಾರಣ, ಹೆಚ್ಚುವರಿ ಸಂಪಾದನೆಯೂ ಇರುತ್ತಿರಲಿಲ್ಲ. ತಾಯಿ ಆಗಲೋ ಈಗಲೋ ಒಮ್ಮೆ ದೊರೆಯುತ್ತಿದ್ದ ದಿನಗೂಲಿ ಕೆಲಸಗಳಿಗೆ ಹೋಗುತ್ತಿದ್ದರು. ತಂದೆ ಕುಡುಕನಾಗಿರಲಿಲ್ಲದ ಕಾರಣ ಮನೆಯಲ್ಲಿ ಸದಾ ಪ್ರಕ್ಷುಬ್ಧ ವಾತಾವಾರವೊಂದು ಇರುತ್ತಿರಲಿಲ್ಲ.
ಶೋಂತು ಒಂಬತ್ತನೆಯ ತರಗತಿಯಲ್ಲಿರುವಾಗಲೊಮ್ಮೆ ಅವರ ಊರಿಗೆ ಸರ್ಕಸ್ ಬಂದಿತ್ತು. ಆದರೆ ಅಲ್ಲಿ ಶಾಲೆಯ ಮಕ್ಕಳಿಗೆ ಮಕ್ಕಳಿಗೆ ಮಾತ್ರ ಐದು ರೂಪಾಯಿಯ ರಿಯಾಯಿತಿ ಟಿಕೆಟ್ ಇಡಲಾಗಿತ್ತು. ಅಂದು ಅವರ ಪರಿಸ್ಥಿತಿ ಹೇಗಿತ್ತೆಂದರೆ ಮನೆಯಿಂದ ಕೊಂಡು ಹೋಗಲು ಅಲ್ಲಿ ಐದು ರೂಪಾಯಿಯೂ ಇದ್ದಿರಿಲಿಲ್ಲ. ಶೋಂತು ಶಾಲೆಗೆ ಹಣ ಕೊಂಡು ಹೋಗಿರದ ಕಾರಣ ಟೀಚರ್ ಎದ್ದು ನಿಲ್ಲುವಂತೆ ಹೇಳಿದರು. ನಂತರ, “ಮಗೂ, ನೀನೇಕೆ ಹಣ ತಂದಿಲ್ಲ?” ಎಂದು ಪ್ರೀತಿಯಿಂದ ಕೇಳಿದರು. ಆಗ ಶೋಂತು, “ಮೇಡಮ್, ಮನೆಯಲ್ಲಿ ತಂದೆಗೆ ಹುಷಾರಿಲ್ಲ, ಮಾ ಗೆ ಇನ್ನೂ ಹತ್ತಿ ಕೆಲಸದ ಹಣ ಬಂದಿಲ್ಲ,” ಎನ್ನುತ್ತಾ ಅಳತೊಡಗಿದರು.
ಮರುದಿನ ಅವರ ಸಹಪಾಠಿ ಕುಸುಮ್ ಪಠಾಣ್ ರಂಜಾನ್ ತಿಂಗಳಿನ ಪುಣ್ಯ ದಾನದ ಸಲುವಾಗಿ ಮನೆಯಿಂದ ಹತ್ತು ರೂಪಾಯಿ ತಂದು ಶೋಂತುವಿಗೆ ನೀಡಿದರು. ಮರುದಿನ ಆಕೆ ಶೋಂತುವಿನ ಬಳಿ, “ಹಣ ಏನು ಮಾಡಿದೆಯೆಂದು ಕೇಳಿದಾಗ,” ಶೋಂತು ಶೃದ್ಧೆಯಿಂದ, “ನಾನು ಐದು ರೂಪಾಯಿ ಸರ್ಕಸ್ಸಿಗೆ ಖರ್ಚು ಮಾಡಿದೆ. ಉಳಿದ ಐದು ರೂಪಾಯಿ ಮನೆಯ ಖರ್ಚಿಗೆ ಸಹಾಯವಾಗಲೆಂದು,” ನೀಡಿದೆ ಎಂದು ಹೇಳಿದರು. ಕುಸುಮ್, ಶೋಂತು ಮತ್ತು ಸರ್ಕಸ್ ಇದು ನಿಜಕ್ಕೂ ಇದು ಕರುಣಾಳು ಜಗತ್ತು.
ಶೋಂತು 11ನೇ ತರಗತಿಯಲ್ಲಿದ್ದಾಗ ಅವರ ಮನೆಯಲ್ಲಿ ಇಟ್ಟಿಗೆ ಮತ್ತು ಸಿಮೆಂಟ್ ಬಳಸಿ ಮರುನಿರ್ಮಾಣ ಮಾಡಲಾಯಿತು. ಆದರೆ ಮನೆಗೆ ಗಾರೆ ಮಾಡಿರಲಿಲ್ಲ. ಏಕೆಂದರೆ ಅದಕ್ಕೆ ಬೇಕಾಗುವಷ್ಟು ಹಣ ಕುಟುಂಬದ ಬಳಿಯಿರಲಿಲ್ಲ. ಮನೆ ಕಟ್ಟುವ ಕೆಲಸಕ್ಕೆ ಕೇವಲ ಓರ್ವ ಮೇಸ್ತ್ರಿಯನ್ನಷ್ಟೇ ದಿನಗೂಲಿಗೆ ಕೆಲಸಕ್ಕೆ ಇರಿಸಿಕೊಳ್ಳಲಾಗಿತ್ತು. ಈ ಮನೆಯ ಕೆಲಸದ ಗಡಿಬಿಡಿಯ ನಡುವೆ ಶೋಂತುವಿಗೆ ತನ್ನ ಕೊನೆಯ ಪರೀಕ್ಷೆ ಬಂದಿದ್ದೇ ಗೊತ್ತಾಗಿರಲಿಲ್ಲ. ಶೋಂತು ಕೊನೆಗೆ ಹೆಡ್ ಮಾಸ್ಟರ್ ಬಳಿ ಬೇಡಿಕೊಂಡಾಗ ಅವರು ಪರೀಕ್ಷೆ ಬರೆಯಲು ಅನುಮತಿ ನೀಡಿದರು.
ಅವರು ಪರೀಕ್ಷೆ ಪಾಸಾಗಿ 12ನೇ ತರಗತಿಗೆ ಪ್ರವೇಶ ಪಡೆದರು ಮತ್ತು ಉತ್ತಮ ಅಂಕಗಳನ್ನು ಪಡೆಯುವ ಪ್ರತಿಜ್ಞೆಯನ್ನು ಕೂಡಾ ಮಾಡಿದರು. ಶೋಂತು ಬಹಳ ಶೃದ್ಧೆಯಿಂದ ಓದುತ್ತಿದ್ದರು, ಆದರೆ ಇದೇ ಸಮಯದಲ್ಲಿ ಅವರ ತಾಯಿ ಕಾಯಿಲೆಬಿದ್ದರು. ಅವರ ಅನಾರೋಗ್ಯ ಬಹಳ ಬೇಗನೆ ತೀವ್ರಗೊಳ್ಳುತ್ತಾ ಹೋಯಿತು. ಮತ್ತು ಅವರು ಶೋಂತುವಿನ ಫೈನಲ್ ಎಕ್ಸಾಮ್ ಹತ್ತಿರದಲ್ಲಿರುವಾಗ ತೀರಿಕೊಂಡರು. ಆ ನೋವು, ನಷ್ಟ ಎನ್ನುವುದು ಹದಿನೆಂಟು ವರ್ಷದ ಹುಡುಗನೊಬ್ಬನಿಗೆ ಭರಿಸಲು ಸಾಧ್ಯವಿಲ್ಲದಷ್ಟು ತೀವ್ರವಾಗಿತ್ತು. ಅವರಿಗೆ ಪರೀಕ್ಷೆಯೆನ್ನುವುದು ಒತ್ತಡವಾಗಿ ಹೋಯಿತು. ಎಷ್ಟು ಕಷ್ಟಪಟ್ಟು ಓದಿದರೂ ಅದು ಸಹಾಯಕ್ಕೆ ಬರಲಿಲ್ಲ. ಕೊನೆ 65 ಶೇಕಡಾ ಅಂಕಗಳನ್ನು ತೆಗೆಯುವ ಮೂಲಕ ತೇರ್ಗಡೆಯಾದರು. ಶೋಂತು ತನ್ನ ಮುಂದಿನ ಓದಿನ ಕನಸ್ಸನ್ನು ಕೈಬಿಡಲಾರಂಭಿಸಿದರು.
ಶೋಂತುವಿಗೆ ಓದುವುದೆಂದರೆ ಬಹಳ ಮೆಚ್ಚು. ಅವರು ಲೈಬ್ರರಿಗಳಿಂದ ಪುಸ್ತಕ ತಂದು ಮನೆಯಲ್ಲಿ ಓದುತ್ತಿದ್ದರು. ಅವರ ಆಸಕ್ತಿಯನ್ನು ಗಮನಿಸಿದ ಸ್ನೇಹಿತನೊಬ್ಬ ವಡಾಲಿ ಕಲಾ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿಗಾಗಿ ಪ್ರವೇಶ ಪಡೆಯಲು ಪುಸಲಾಯಿಸಿದರು. “ನೀನು ಅಲ್ಲಿ ತುಂಬಾ ಒಳ್ಳೆಯ ಪುಸ್ತಕಗಳನ್ನು ಓದಬಹುದು,” ಎಂದು ಹೇಳಿದರು. ಶೋಂತು ಕಾಲೇಜಿಗೆ ಸೇರಿದರಾದರೂ ಅವರು ಅಲ್ಲಿಗೆ ಹೋಗುತ್ತಿದ್ದದ್ದು ಅಲ್ಲಿನ ಲೈಬ್ರರಿಯಿಂದ ಪುಸ್ತಕ ಪಡೆಯಲು ಮತ್ತು ಹಿಂತಿರುಗಿಸಲು ಮಾತ್ರ.
ಕಾಲೇಜಿ ಪ್ರೊಫೆಸರ್ ಶೋಂತುವಿನ ಫಲಿತಾಂಶಗಳನ್ನು ನೋಡಿದಾಗ, ನಿಯಮಿತವಾಗಿ ಕಾಲೇಜಿಗೆ ಹಾಜರಾಗುವಂತೆ ವಿನಂತಿಸಿದರು, ಮತ್ತು ಶೋಂತು ತನ್ನ ಓದನ್ನು ಆನಂದಿಸಲು ಪ್ರಾರಂಭಿಸಿದರು. ಅದು ಅವರ ಮೂರನೇ ವರ್ಷವಾಗಿತ್ತು. ಆ ವರ್ಷ ವಡಾಲಿಯ ಕಲಾ ಕಾಲೇಜು ಅತ್ಯುತ್ತಮ ಓದುವ ಕೌಶಲ್ಯವನ್ನು ಹೊಂದಿರುವ ವಿದ್ಯಾರ್ಥಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡಲು ನಿರ್ಧರಿಸಿತು. ಶೋಂತು ಅದನ್ನು ತನ್ನದಾಗಿಸಿಕೊಂಡರು. "ಶಾಂತಿಲಾಲ್, ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಳ್ಳಲು ನಿನಗೆ ಯಾವಾಗ ಸಮಯ ಸಿಗುತ್ತದೆ?" ಅವರ ಪ್ರೊಫೆಸರ್ ದಿಗ್ಭ್ರಮೆಯಿಂದ ಕೇಳಿದರು. ಶೋಂತು 2003ರಲ್ಲಿ ಶೇಕಡಾ 66ರಷ್ಟು ಅಂಕಗಳೊಂದಿಗೆ ಮೂರನೇ ವರ್ಷದ ಬಿಎ ಉತ್ತೀರ್ಣರಾದರು.







