"ನನ್ನ ಅಬ್ಬು [ತಂದೆ] ಕೂಲಿ ಕಾರ್ಮಿಕರಾಗಿದ್ದರು, ಆದರೆ ಮೀನುಗಾರಿಕೆ ಅವರ ಬದುಕಿನ ಪ್ರೀತಿಯಾಗಿತ್ತು. ಅವರು ಹೇಗೋ ಮಾಡಿ ಒಂದು ಕಿಲೋ ಅಕ್ಕಿ ಸಂಪಾದಿಸಿ ತರುತ್ತಿದ್ದರು, ಮತ್ತು ಅಂದಿಗೆ ತಮ್ಮ ಕರ್ತವ್ಯ ಮುಗಿಯಿತೆನ್ನುವಂತೆ ಹೊರಟುಹೋಗುತ್ತಿದ್ದರು! ನನ್ನ ಅಮ್ಮಿ [ತಾಯಿ] ಎಲ್ಲವನ್ನೂ ನಿಭಾಯಿಸಬೇಕಾಗಿತ್ತು" ಎಂದು ಬೆಲ್ಡಂಗದ ಉತ್ತರಪಾರಾ ಪ್ರದೇಶದಲ್ಲಿರುವ ತನ್ನ ಮನೆಯ ಟೆರೇಸ್ ಮೇಲೆ ನಿಂತು ಮಾತನಾಡುತ್ತಾ ಕೊಹಿನೂರ್ ಬೇಗಂ ಹೇಳುತ್ತಾರೆ.
"ಹಾಗೇ ಊಹಿಸಿಕೊಳ್ಳಿ, ಆ ಒಂದು ಕಿಲೋ ಅಕ್ಕಿಯಿಂದ, ನನ್ನ ಅಮ್ಮಿ ನಾಲ್ಕು ಮಕ್ಕಳಿಗೆ, ನಮ್ಮ ದಾದಿ [ತಂದೆಯ ಅಮ್ಮ], ನನ್ನ ತಂದೆ, ಚಿಕ್ಕಮ್ಮ ಮತ್ತು ಮತ್ತು ಅವರಿಗೆ ಆಹಾರವನ್ನು ತಯಾರಿಸಬೇಕಾಗಿತ್ತು." ಅವರು ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ಮತ್ತೆ ಹೇಳಿದರು, "ಅದರ ಮೇಲೆ, ಮೀನು ಹಿಡಿಯಲು ಸ್ವಲ್ಪ ಅಕ್ಕಿಯನ್ನು ಕೇಳುವ ಧೈರ್ಯ ಅಬ್ಬುಗೆ ಇತ್ತು. ನಾವು ಈ ಮನುಷ್ಯನೊಂದಿಗೆ ನಮ್ಮ ಬುದ್ಧಿವಂತಿಕೆಯನ್ನು ಬಳಸಲು ನಮಗೆ ಸಾಕಾಗುತ್ತಿತ್ತು!"
55 ವರ್ಷದ ಕೊಹಿನೂರ್ ಆಪಾ (ಅಕ್ಕ) ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಾನಕಿ ನಗರ ಪ್ರಾಥಮಿಕ್ ವಿದ್ಯಾಲಯದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಅಡುಗೆಯವರಾಗಿ ಕೆಲಸ ಮಾಡುತ್ತಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ಬೀಡಿ ಕಟ್ಟುತ್ತಾರೆ ಮತ್ತು ಈ ಕೆಲಸದಲ್ಲಿ ತೊಡಗಿರುವ ಇತರ ಮಹಿಳೆಯರ ಹಕ್ಕುಗಳಿಗಾಗಿ ಸಂಘಟನೆ ಮಾಡುತ್ತಾರೆ. ಮುರ್ಷಿದಬಾದ್‌ನ ಈ ಬೀಡಿ ಕಟ್ಟುವ ಕೆಲಸ ಮಾಡುವ ಮಹಿಳೆಯರು ಅತ್ಯಂತ ಬಡವರು. ಇದು ಅತ್ಯಂತ ಕಠಿಣ ದೈಹಿಕ ಶ್ರಮ ಬೇಡುವ ಕೆಲಸ. ಸಣ್ಣ ವಯಸ್ಸಿನಿಂದಲೂ ಈ ಮಹಿಳೆಯರು ತಮ್ಮನ್ನು ತಂಬಾಕಿಗೆ ಒಡ್ಡಿಕೊಳ್ಳುವುದರಿಂದಾಗಿ ಇವರ ಆರೋಗ್ಯಕ್ಕೂ ಅಪಾಯ ಎದುರಾಗುತ್ತದೆ. ಇದನ್ನೂ ಓದಿ: ದಟ್ಟ ಹೊಗೆಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಬೀಡಿ ಕಟ್ಟುವ ಮಹಿಳೆಯರ ಆರೋಗ್ಯ
2021ರ ಡಿಸೆಂಬರ್ ಬೆಳಿಗ್ಗೆ, ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಕೊಹಿನೂರ್ ಆಪಾ ಈ ವರದಿಗಾರರನ್ನು ಭೇಟಿಯಾದರು. ನಂತರ, ಹೆಚ್ಚು ನಿರಾಳವಾಗಿದ್ದ ಕೊಹಿನೂರ್ ತನ್ನ ಬಾಲ್ಯದ ಬಗ್ಗೆ ಮಾತನಾಡಿದರು ಮತ್ತು ಬೀಡಿ ಕಾರ್ಮಿಕರ ಪ್ರಯಾಸಕರ ಕೆಲಸ ಮತ್ತು ಶೋಷಣೆಯ ಕೆಲಸದ ಪರಿಸ್ಥಿತಿಗಳ ಬಗ್ಗೆ ತಮ್ಮದೇ ಆದ ಸಂಯೋಜನೆಯನ್ನು ಸಹ ಹಾಡಿದರು.
ತಾನು ಚಿಕ್ಕವಳಿದ್ದ ಸಮಯದಲ್ಲಿ ಕುಟುಂಬದ ಭೀಕರ ಆರ್ಥಿಕ ಪರಿಸ್ಥಿತಿಯು ಮನೆಯಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿತ್ತು ಎನ್ನುತ್ತಾರವರು. ಅವರಿಗೆ ಅದನ್ನೆಲ್ಲ ನೋಡುವುದು ಅಸಹನೀಯವೆನ್ನಿಸುತ್ತಿತ್ತು. “ಆಗ ನನಗೆ ಕೇವಲ ಒಂಬತ್ತು ವರ್ಷ, ಒಂದು ದಿನ ಬೆಳಗ್ಗೆ ಮನೆಯ ಎಲ್ಲಾ ಸಾಮಾನ್ಯ ಅಸ್ಥವ್ಯಸ್ತತೆಯ ನಡುವೆ ಅಮ್ಮ ಬೆರಣಿ, ಕಲ್ಲಿದ್ದಲು ಮತ್ತು ಸೌದೆ ಬಳಸಿ ಒಲೆ ಉರಿಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಣ್ಣಿಗೆ ಬಿತ್ತು, ಅಂದು ಮನೆಯಲ್ಲಿ ಅಡುಗೆ ಮಾಡಲು ಒಂದಿಷ್ಟೂ ಧಾನ್ಯವಿರಲಿಲ್ಲ” ಎಂದು ಅವರು ಹೇಳುತ್ತಾರೆ.
ಆಗ ಆ ಒಂಬತ್ತು ವರ್ಷದ ಹುಡುಗಿಗೆ ಒಂದು ಉಪಾಯ ಹೊಳೆಯಿತು. “ನಾನು ಸೀದಾ ಒಬ್ಬ ಕಲ್ಲಿದ್ದಲು ವ್ಯಾಪಾರಿಯ ಹೆಂಡತಿಯ ಬಳಿ ಹೋಗಿ, ʼ‘কাকিমা, আমাকে এক মণ করে কয়লা দেবে রোজ? [ಕಾಕಿಮಾ ಅಮಕೆ ಏಕ್ ಮೊನ್ ಕೊರೆ ಕೊಯ್ಲಾ ದೇಬೆ ರೋಜ್? ʼಕಾಕಿ, ದಿನಾ ನನಗೆ ಒಂದು ರಾಶಿ ಕಲ್ಲಿದ್ದಲು ಕೊಡುವಿರಾ?]” ಎಂದು ಅವರು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. “ಒಂದಿಷ್ಟು ಮನವೊಲಿಕೆಯ ನಂತರ ಆ ಹೆಂಗಸು ಕಲ್ಲಿದ್ದಲು ನೀಡಲು ಒಪ್ಪಿಕೊಂಡಿತು. ಅವರ ಡಿಪೋದಿಂದ ಕಲ್ಲಿದ್ದಲನ್ನು ರಿಕ್ಷಾದಲ್ಲಿ ನಮ್ಮ ಮನೆಗೆ ತರಲು ಪ್ರಾರಂಭಿಸಿದೆ. ರಿಕ್ಷಾ ಬಾಡಿಗೆಯಾಗಿ ಇಪ್ಪತ್ತು ಪೈಸೆ ಖರ್ಚು ಮಾಡುತ್ತಿದ್ದೆ.”
ಬದುಕು ಇದೇ ರೀತಿಯಾಗಿ ಮುಂದುವರೆಯುತ್ತಿತ್ತು. 14 ವರ್ಷದವರಿದ್ದಾಗ ಕೊಹಿನೂರ್ ತನ್ನ ಮತ್ತು ಹತ್ತಿರದ ಊರುಗಳಲ್ಲಿ ನಿರುಪಯುಕ್ತ ಕಲ್ಲಿದ್ದಲನ್ನು ಮಾರುತ್ತಿದ್ದರು. ಆಗ ಆಕೆ ತನ್ನ ಎಳೆಯ ಹೆಗಲಿನ ಮೇಲೆ 20 ಕೇಜಿಯ ತನಕ ಹೊತ್ತೊಯ್ಯುತ್ತಿದ್ದರು. “ಆಗ ಬಹಳ ಸಣ್ಣ ಮೊತ್ತ ಸಂಪಾದಿಸುತ್ತಿದ್ದೇನಾದರೂ, ಅದು ನಮ್ಮೆಲ್ಲ ಊಟದ ವ್ಯವಸ್ಥೆ ಮಾಡಲು ಸಾಲುತ್ತಿತ್ತು” ಎನ್ನುತ್ತಾರೆ.
ತಾನು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದೇನೆ ಎನ್ನುವ ಸಂತಸ ಮತ್ತು ನಿರಾಳತೆಯ ನಡುವೆಯೂ ಅವರಿಗೆ ಬದುಕಿನಲ್ಲಿ ತಾನು ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎನ್ನಿಸತೊಡಗಿತು. “ನಾನು ರಸ್ತೆಯಲ್ಲಿ ಕಲ್ಲಿದ್ದಲು ಮಾರುತ್ತಾ ಸಾಗುವಾಗ, ಹೆಣ್ಣುಮಕ್ಕಳು ಶಾಲೆಗೆ ಹೋಗುವುದು, ಹೆಂಗಸರು ಮತ್ತು ಯುವತಿಯರು ಬಗಲಿಗೆ ಚೀಲ ಹಾಕಿಕೊಂಡು ಕಾಲೇಜು, ಕೆಲಸಗಳಿಗೆ ಹೋಗುವುದನ್ನು ಗಮನಿಸುತ್ತಿದ್ದೆ. ಆಗ ನನಗೆ ನನ್ನ ಕುರಿತು ವಿಷಾದವೆನ್ನಿಸಿತು.” ಎನ್ನುತ್ತಾರಾಕೆ. ಇಷ್ಟು ಹೇಳುತ್ತಿದ್ದಂತೆ ಅವರ ಕಂಠ ನಡುಗತೊಡಗಿತು, ಉಮ್ಮಳಿಸುತ್ತಿದ್ದ ದುಃಖವನ್ನು ತಡೆಹಿಡಿದು, “ನಾನೂ ಬಗಲ ಚೀಲ ಹಾಕಿಕೊಂಡು ಎಲ್ಲಿಗಾದರೂ ಹೋಗಬೇಕಾಗಿದ್ದವಳು…”
ಆ ಸಮಯದಲ್ಲಿ, ಸೋದರಸಂಬಂಧಿಯೊಬ್ಬರು ಪುರಸಭೆ ಮಹಿಳೆಯರಿಗಾಗಿ ಆಯೋಜಿಸಿದ್ದ ಸ್ಥಳೀಯ ಸ್ವಸಹಾಯ ಗುಂಪುಗಳಿಗೆ ಕೊಹಿನೂರ್ ಅವರನ್ನು ಪರಿಚಯಿಸಿದರು. "ವಿವಿಧ ಮನೆಗಳಿಗೆ ಕಲ್ಲಿದ್ದಲು ಮಾರಾಟ ಮಾಡುವಾಗ, ನಾನು ಅನೇಕ ಮಹಿಳೆಯರನ್ನು ಭೇಟಿಯಾಗುತ್ತಿದ್ದೆ. ಅವರ ಕಷ್ಟಗಳು ನನಗೆ ಗೊತ್ತಿತ್ತು. ಪುರಸಭೆಯು ನನ್ನನ್ನು ಸಂಘಟಕರಲ್ಲಿ ಒಬ್ಬಳನ್ನಾಗಿ ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸಿದೆ."
ಅದಾಗಿಯೂ ಅವರ ಸೋದರಸಂಬಂಧಿಯು ಕೊಹಿನೂರ್ ಔಪಚಾರಿಕವಾಗಿ ಶಾಲಾ ಶಿಕ್ಷಣ ಪಡೆಯದಿರುವ ಕಾರಣ ಲೆಕ್ಕಪತ್ರಗಳನ್ನು ನೋಡಿಕೊಳ್ಳುವುದು ಕಷ್ಟವಾಗಬಹುದು ಎಂದು ಗಮನಸೆಳೆದರು.
“ಆದರೆ ನನಗೆ ಅದೇನೂ ಸಮಸ್ಯೆಯಾಗಿರಲಿಲ್ಲ. ನಾನು ಎಣಿಕೆ ಮತ್ತು ಲೆಕ್ಕವನ್ನು ಚೆನ್ನಾಗಿಯೇ ಮಾಡುತ್ತಿದ್ದೆ. ಕಲ್ಲಿದ್ದಲು ಮಾರುವಾಗ ಅದನ್ನೆಲ್ಲ ಕಲಿತಿದ್ದೆ.” ಎನ್ನುತ್ತಾರಾಕೆ. ತಾನು ಲೆಕ್ಕದಲ್ಲಿ ಯಾವುದೇ ತಪ್ಪು ಮಾಡುವುದಿಲ್ಲ. ಡೈರಿಯಲ್ಲಿ ಲೆಕ್ಕ ಬರೆಯಲು ಸೋದರಸಂಬಂಧಿ ಸಹಾಯ ಮಾಡಿದರಷ್ಟೇ ಸಾಕು “ಉಳಿದಿದ್ದನ್ನು ನಾನೇ ಸಂಭಾಳಿಸುತ್ತೇನೆ” ಎಂದು ಅವರ ಮನವೊಲಿಸಿದರು.
ಮತ್ತು ಅವರು ತನ್ನ ಮಾತುಗಳನ್ನು ಉಳಿಸಿಕೊಂಡರು. ಸ್ವಸಹಾಯ ಸಂಘ ಸೇರಿದ ನಂತರ ಕೊಹಿನೂರ್ ಅವರಿಗೆ ಈ ಮಹಿಳೆಯರನ್ನು ಮತ್ತಷ್ಟು ಅರಿಯಲು ಸಹಾಯವಾಯಿತು – ಅವರಲ್ಲಿ ಬಹುತೇಕರು ಬೀಡಿ ಕಾರ್ಮಿಕರು. ಅವರು ಉಳಿತಾಯ, ಮೂಲನಿಧಿ ರಚನೆ, ಅದರಿಂದ ಸಾಲ ಪಡೆಯುವುದು ಮತ್ತು ಅದರ ಮರುಪಾವತಿಯ ಕುರಿತು ಕಲಿತರು.
ಹಣದ ವಿಷಯದಲ್ಲಿ ಕೊಹಿನೂರ್ ಅವರ ಹೋರಾಟ ಮುಂದುವರೆದಿದ್ದರೂ, ಜನರ ನಡುವೆ ಕೆಲಸ ಮಾಡಿದ್ದು “ಅಮೂಲ್ಯ ಅನುಭವ” ಕೊಟ್ಟಿತು ಎನ್ನುತ್ತಾರೆ. “ನನ್ನೊಳಗೆ ರಾಜಕೀಯ ಪ್ರಜ್ಞೆ ಬೆಳೆಯುತ್ತಿತ್ತು. ಏನಾದರೂ ತಪ್ಪಾಗಿದೆ ಅನ್ನಿಸಿದಾಗ ಆ ಕುರಿತು ದನಿಯೆತ್ತುತ್ತಿದ್ದೆ. ಕಾರ್ಮಿಕ ಸಂಘಟನೆಗಳೊಡನೆಯೂ ನಿಕಟ ಸಂಪರ್ಕವನ್ನು ಬೆಳೆಸಿಕೊಂಡಿದ್ದೇನೆ.”
ಆದರೆ ಇದೆಲ್ಲ ಅವರ ಕುಟುಂಬ ಮತ್ತು ಸಂಬಂದಿಕರಿಗೆ ಸರಿಬರಲಿಲ್ಲ. “ಹೀಗಾಗಿ ಅವರು ನನಗೆ ಮದುವೆ ಮಾಡಿಸಿದರು” 16ನೇ ವಯಸ್ಸಿನಲ್ಲಿ ಅವರಿಗೆ ಜಮಾಲುದ್ದೀನ್ ಶೇಖ್ ಎನ್ನುವವರೊಡನೆ ಮದುವೆ ಮಾಡಿಸಲಾಯಿತು. ಈಗ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಅದೃಷ್ಟವಶಾತ್ ಮದುವೆಯೆನ್ನುವುದು ಕೊಹಿನೂರ್ ಆಪಾ ಬದುಕಿನಲ್ಲಿ ತೊಡಕಾಗಲಿಲ್ಲ. ಅವರು ತನ್ನ ಕೆಲಸವನ್ನು ಮುಂದುವರೆಸಿದರು. “ನಾನು ನನ್ನ ಸುತ್ತ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೆ. ನನ್ನಂತಹ ಮಹಿಳೆಯರ ಹಕ್ಕಿಗಾಗಿ ದುಡಿಯುವ ತಳಮಟ್ಟದ ಸಂಸ್ಥೆಗಳು ನನಗೆ ಮೆಚ್ಚಿಗೆಯಾಯಿತು. ಅವರೊಂದಿಗೆ ನನ್ನ ಒಡನಾಟ ಬೆಳೆಯುತ್ತಿತ್ತು. ಜಮಾಲುದ್ದೀನ್ ಪ್ಲಾಸ್ಟಿಕ್ ಮತ್ತು ನಿರುಪಯೋಗಿ ವಸ್ತುಗಳ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದರೆ, ಕೊಹಿನೂರ್ ಶಾಲೆಯಲ್ಲಿ ಮತ್ತು ಮುರ್ಷಿದಾಬಾದ್ ಜಿಲ್ಲಾ ಬೀಡಿ ಮಜ್ದೂರ್ ಮತ್ತು ಪ್ಯಾಕರ್ಸ್ ಯೂನಿಯನ್ನಿನ ಕೆಲಸದಲ್ಲಿ ನಿರತರಾಗಿದ್ದಾರೆ, ಅಲ್ಲಿ ಅವರು ಬೀಡಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಾರೆ.
"ಭಾನುವಾರ ಬೆಳಿಗ್ಗೆ ಮಾತ್ರ, ನನಗೆ ಸ್ವಲ್ಪ ಸಮಯ ಸಿಗುತ್ತದೆ" ಎಂದು ಅವರು ತನ್ನ ಪಕ್ಕದ ಬಾಟಲಿಯಿಂದ ಸ್ವಲ್ಪ ತೆಂಗಿನ ಎಣ್ಣೆಯನ್ನು ತನ್ನ ಅಂಗೈಗೆ ಸುರಿಯುತ್ತಾ ಹೇಳಿದ ಅವರು, ತನ್ನ ದಟ್ಟ ಕೂದಲಿಗೆ ತೆಂಗಿನೆಣ್ಣೆಯನ್ನು ಹಚ್ಚಿ ಜಾಗರೂಕತೆಯಿಂದ ಬಾಚತೊಡಗಿದರು.
ತಲೆ ಬಾಚಿ ಮುಗಿದ ನಂತರ ದುಪ್ಪಟಾವನ್ನು ತಲೆಗೆ ಹೊದ್ದುಕೊಂಡು ಕನ್ನಡಿಯನ್ನು ನೋಡಿದರು. “[ಇವತ್ತು ಒಂದು ಹಾಡು ಹಾಡಬೇಕೆನ್ನಿಸುತ್ತಿದೆ] একটা বিড়ি বাঁধাইয়ের গান শোনাই… ಏಕ್ಟಾ ಬೀಡಿ ಬಾಂಧಾಯ್ ಎರ್ ಗಾನ್ ಶೋನಾಯ್ [ಬೀಡಿ ಕಟ್ಟುವುದರ ಬಗ್ಗೆ ಒಂದು ಹಾಡು ಹಾಡ್ತೀನಿ ಇವತ್ತು].”
বাংলা
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
শ্রমিকরা দল গুছিয়ে
শ্রমিকরা দল গুছিয়ে
মিনশির কাছে বিড়ির পাতা আনতে যাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
পাতাটা আনার পরে
পাতাটা আনার পরে
কাটার পর্বে যাই রে যাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
বিড়িটা কাটার পরে
পাতাটা কাটার পরে
বাঁধার পর্বে যাই রে যাই
একি ভাই রে ভাই
আমরা বিড়ির গান গাই
ওকি ভাই রে ভাই
আমরা বিড়ির গান গাই
বিড়িটা বাঁধার পরে
বিড়িটা বাঁধার পরে
গাড্ডির পর্বে যাই রে যাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
গাড্ডিটা করার পরে
গাড্ডিটা করার পরে
ঝুড়ি সাজাই রে সাজাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
ঝুড়িটা সাজার পরে
ঝুড়িটা সাজার পরে
মিনশির কাছে দিতে যাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
মিনশির কাছে লিয়ে যেয়ে
মিনশির কাছে লিয়ে যেয়ে
গুনতি লাগাই রে লাগাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
বিড়িটা গোনার পরে
বিড়িটা গোনার পরে
ডাইরি সারাই রে সারাই
একি ভাই রে ভাই
আমরা বিড়ির গান গাই
একি ভাই রে ভাই
আমরা বিড়ির গান গাই
ডাইরিটা সারার পরে
ডাইরিটা সারার পরে
দুশো চুয়ান্ন টাকা মজুরি চাই
একি ভাই রে ভাই
দুশো চুয়ান্ন টাকা চাই
একি ভাই রে ভাই
দুশো চুয়ান্ন টাকা চাই
একি মিনশি ভাই
দুশো চুয়ান্ন টাকা চাই।
ಕನ್ನಡ
ಕೇಳಿ ಅಣ್ಣಂದಿರೆ
ನಾವು ಬೀಡಿಯ ಹಾಡು ಹಾಡುತ್ತೇವೆ
ಕೇಳಿ ತಮ್ಮಂದಿರೆ
ನಾವು ಬೀಡಿಯ ಹಾಡು ಹಾಡುತ್ತೇವೆ
ಕಾರ್ಮಿಕರು ಹೊರಡುತ್ತಾರೆ
ಕಾರ್ಮಿಕರು ಹೊರಡುತ್ತಾರೆ
ಮುನ್ಷಿಯ [ಮಧ್ಯವರ್ತಿ] ಬಳಿ ಹೋಗಿ, ಬೀಡಿ ಎಲೆ ತರಲು
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಎಲೆಯನ್ನು ತರುತ್ತೇವೆ
ಎಲೆಯನ್ನು ತರುತ್ತೇವೆ
ಉರುಟಾಗಿ ಕತ್ತರಿಸುತ್ತೇವೆ
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಒಮ್ಮೆ ಬೀಡಿ ಮಡಚಿ ಮುಗಿದರೆ
ಒಮ್ಮೆ ಎಲೆ ಮಡಚಿ ಮುಗಿದರೆ
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಬೀಡಿ ಕಟ್ಟಿ ಮುಗಿದ ನಂತರ
ಬೀಡಿ ಕಟ್ಟಿ ಮುಗಿದ ನಂತರ
ಕಟ್ಟು ಕಟ್ಟಲು ತೊಡಗುವೆವು
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಒಮ್ಮೆ ಗದ್ದಿಸ್ [ಕಟ್ಟು] ಕಟ್ಟಿ ಮುಗಿದರೆ
ಒಮ್ಮೆ ಕಟ್ಟು ಕಟ್ಟಿ ಮುಗಿದರೆ
ಪ್ಯಾಕಿಂಗ್ ಕೆಲಸ ಮಾಡುವೆವು
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಈಗ ಜೂರಿಗಳನ್ನು [ಬುಟ್ಟಿ] ಕಟ್ಟಿಯಾಯ್ತು
ಬುಟ್ಟಿಗಳನ್ನು ಜೋಡಿಸಿ ಇಟ್ಟು
ಮುನ್ಷಿಯ ಹತ್ತಿರ ಕೊಂಡು ಹೊರಡುವೆವು
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಮುನ್ಷಿ ಇರುವಲ್ಲಿಗೆ ಹೋದ ಮೇಲೆ
ಮುನ್ಷಿ ಇರುವಲ್ಲಿಗೆ ಹೋದ ಮೇಲೆ
ಕೊನೆಯ ಬಾರಿ ಲೆಕ್ಕ ತಾಳೆ ಮಾಡುತ್ತೇವೆ
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಈಗ ಲೆಕ್ಕಗಳು ಮುಗಿದಿವೆ
ಈಗ ಲೆಕ್ಕಗಳು ಮುಗಿದಿವೆ
ಡೈರಿ ಬರುತ್ತದೆ, ನಾವು ಲೆಕ್ಕ ಬರೆಯುತ್ತೇವೆ
ಕೇಳು ಓ ಅಣ್ಣ
ನಾವು ಹಾಡುತ್ತೇವೆ
ಕೇಳು ನಾವು ಹಾಡುವುದನ್ನು
ಬೀಡಿಯ ಕುರಿತಾಗಿ
ಲೆಕ್ಕದ ಪುಸ್ತಕ ಬರೆದಾಯ್ತು
ಲೆಕ್ಕದ ಪುಸ್ತಕ ಬರೆದಾಯ್ತು
ನಮ್ಮ ಸಂಬಳ ಕೊಡು ಮತ್ತು ಕೇಳು ನಮ್ಮ ಕೂಗು
ಎರಡು ನೂರಾ ಐವತ್ತು ಚಿಲ್ಲರೆ ಬೇಕೆನ್ನುವುದು ನಮ್ಮ ಕೂಗು
ಓ ಮುನ್ಷಿಯೇ ಬೇಡಿಕೆಯನು ಈಡೇರಿಸು
ಇನ್ನೂರ ಐವತ್ತನಾಲ್ಕು ರೂಪಾಯಿ ಎನ್ನುವುದು ನಮ್ಮ ಕೂಗು
ಕೇಳು ಓ ಮುನ್ಷಿ, ಕಿವಿಗೊಟ್ಟು ಕೇಳು
ಹಾಡಿನ ಹಕ್ಕುಗಳು:
ಬಂಗಾಳಿ ಹಾಡು : ಕೊಹಿನೂರ್ ಬೇಗಂ
ಅನುವಾದ: ಶಂಕರ. ಎನ್. ಕೆಂಚನೂರು