ಬಕ್ಕಿಂಗ್‌ಹ್ಯಾಮ್ ಕಾಲುವೆಯಲ್ಲಿ ನೀರು ಹಕ್ಕಿಯಂತೆ ನೀರಿನೊಳಗೆ ಡೈವ್ ಮಾಡುತ್ತಾ, ಈಜುತ್ತಾ ಸಾಗುವ ಅವರನ್ನು ನಾನು ಮೊದಲಿಗೆ ನೋಡಿದ್ದು 2019ರಲ್ಲಿ. ಅವರ ಈ ಕೌಶಲ ನನ್ನನ್ನು ಅವರತ್ತ ಆಕರ್ಷಿಸಿತು. ಅವರು ಕಾಲುವೆಯ ತಟದಲ್ಲಿನ ಮರಳಿನೊಳಗೆ ಕೈ ತೂರಿಸಿ ಚಾಕಚಕ್ಯೆತೆಯಿಂದ ಎಲ್ಲರಿಗಿಂತಲೂ ವೇಗವಾಗಿ ಸೀಗಡಿ ಹಿಡಿಯುತ್ತಿದ್ದರು.
ಗೋವಿಂದಮ್ಮ ವೇಲು, ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿರುವ ಇರುಳ ಸಮುದಾಯಕ್ಕೆ ಸೇರಿದವರು. ಅವರು ಸಣ್ಣ ಹುಡುಗಿಯಾಗಿದ್ದ ಕಾಲದಿಂದಲೂ ಚೆನೈ ಬಳಿಯ ಕೋಸಸ್ಥಲೈಯಾರ್ ನದಿಯ ಗುಂಟ ಮೀನು ಹೀಡಿಯುತ್ತಿದ್ದರು. ಈಗ ಬದುಕಿನ ಎಂಬತ್ತನೇ ವಸಂತದ ಸನಿಹದಲ್ಲಿರುವ ಅವರು ಕುಟುಂಬದ ಭೀಕರ ಆರ್ಥಿಕ ಸಮಸ್ಯೆಯ ಕಾರಣಕ್ಕೆ ದುಡಿಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಅವರಿಗೆ ದೃಷ್ಟಿ ಮಂದವಾಗಿದೆ ಮತ್ತು ಕೈಕಾಲುಗಳ ತುಂಬಾ ಗಾಯಗಳಿವೆ.
ಅಂದು ಚೆನ್ನೈ ಉತ್ತರ ಭಾಗದ ಕೋಸಸ್ಥಲೈಯಾರ್ ನದಿಯ ಪಕ್ಕದಲ್ಲಿರುವ ಬಕ್ಕಿಂಗ್ ಹ್ಯಾಮ್ ಕಾಲುವೆಯಲ್ಲಿ ಅವರು ಮೀನು ಹಿಡಿಯುವಾಗ ನಾನು ಈ ವಿಡಿಯೋ ಶೂಟ್ ಮಾಡಿದೆ. ಸೀಗಡಿ ಹಿಡಿಯಲು ಓಡಾಡುತ್ತಲೇ ಅವರು ನನ್ನೊಡನೆ ತನ್ನ ಬದುಕಿನ ಕುರಿತು ಮಾತನಾಡಿದರು.
ಗೋವಿಂದಮ್ಮನವರ ಕುರಿತು ಇನ್ನಷ್ಟು ತಿಳಿಯಲು ನೀವು ಈ ವರದಿಯನ್ನು ಓದಬಹುದು.
ಅನುವಾದ : ಶಂಕರ . ಎನ್ . ಕೆಂಚನೂರು