ಕೃಷಿ ಕೂಲಿಯಾಗಿ 70 ವರ್ಷಗಳವರೆಗೆ ದುಡಿದ ನಂತರ, ಈಗ 83 ರ ಆಸುಪಾಸಿನಲ್ಲಿರುವ ಗಂಗಪ್ಪನವರು ಮಹಾತ್ಮ ಗಾಂಧಿ ಅವತಾರದಲ್ಲಿ ತಮ್ಮನ್ನು ಮರುಕಂಡುಕೊಂಡಿದ್ದಾರೆ. ಆಗಸ್ಟ್ 2016 ರಿಂದ ಅವರು ಪಶ್ಚಿಮ ಆಂಧ್ರಪ್ರದೇಶದ ಅನಂತಪುರ ಪಟ್ಟಣದಾದ್ಯಂತ ಗಾಂಧಿಯಂತೆ ವೇಷಭೂಷಣವನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಅವರಿಗೆ ಬರುವ ಭಿಕ್ಷೆಯು ಕೃಷಿ ಕೂಲಿಯಿಂದ ಗಳಿಸಿದ ಆದಾಯಕ್ಕಿಂತ ಉತ್ತಮವಾಗಿರುತ್ತದೆ.
"ನಾನು ನಿಮ್ಮ ವಯಸ್ಸಿಗೆ ಬಂದರೆ, ನಾನು ಕೂಡ ನಿಮ್ಮಂತೆಯೇ ಡ್ರೆಸ್ ಮಾಡುತ್ತೇನೆ, ಸ್ವಾಮಿ" ಎಂದು ಗಂಗಪ್ಪನವರು ಬಾಲ್ಯದಲ್ಲಿ ಗಾಂಧೀಜಿ ಅನಂತಪುರಕ್ಕೆ ಭೇಟಿಯಾದಾಗ ಅವರನ್ನು ಭೇಟಿಯಾದಾಗ ಹೇಳಿದ್ದರು. "ಆ ಸಮಯದಲ್ಲಿ ಪೇರೂರು ಟ್ಯಾಂಕ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನನ್ನ ತಂದೆ-ತಾಯಿ ಜೊತೆ ಇದ್ದೆ." ಗಂಗಪ್ಪನವರು ಹುಟ್ಟಿದ ಚೆನ್ನಂಪಲ್ಲಿ ಪೇರೂರಿನಿಂದ ಹೆಚ್ಚು ದೂರವಿಲ್ಲ. ಗಾಂಧೀಜಿಗೆ ತಾವು ಅಂದುಕೊಂಡಿದ್ದನ್ನು ಸಾಧಿಸುವ ಸಾಮರ್ಥ್ಯ, ಪರಾಕ್ರಮಿಗಳನ್ನು ಆಜ್ಞಾಪಿಸುವ ಅವರ ಸಾಮರ್ಥ್ಯಗಳೆಲ್ಲವೂ ಕೂಡ ಆಗ ತರುಣರಾಗಿದ್ದ ಗಂಗಪ್ಪನವರಿಗೆ ಮೆಚ್ಚುಗೆಯಾಗಿತ್ತು.
ಮಹಾತ್ಮಾ ಗಾಂಧಿಯವರೊಂದಿಗಿನ ಭೇಟಿಯ ಬಗ್ಗೆ ಗಂಗಪ್ಪನವರ ಹೇಳಿಕೆಯನ್ನು ಪರಿಶೀಲಿಸುವುದು ಅಥವಾ ದಿನಾಂಕವನ್ನು ಒದಗಿಸುವುದು ಕಷ್ಟಕರವಾಗಿದ್ದರೂ ಸಹ ಗಾಂಧಿ ಅವರ ಸ್ಮರಣೆಯು ಅವರ ಜೀವನಕ್ಕೆ ಪ್ರೇರಕವಾಗಿದೆ. ಗಂಗಪ್ಪನವರಿಗೆ ಪ್ರವಾಸವೆಂದರೆ ಅಚ್ಚುಮೆಚ್ಚು - ಗಾಂಧೀಜಿಯವರಂತಾಗಲು ಪ್ರವಾಸ ಮತ್ತು ತಾಳ್ಮೆ ಅತ್ಯಗತ್ಯ ಎಂದು ಅವರು ನಂಬಿದ್ದಾರೆ.
ಗಂಗಪ್ಪನವರು (ಈ ಹೆಸರಿನಿಂದ ಮಾತ್ರ ಕರೆದುಕೊಳ್ಳುತ್ತಾರೆ) ಈಗ ತಮ್ಮ ಹೆಸರು ಈಗ ಗಂಗುಲಪ್ಪ ಎಂದು ಹೇಳುತ್ತಾರೆ, ಏಕೆಂದರೆ ಜನರು ಹಾಗೆಯೇ ಅವರನ್ನು ತಪ್ಪಾಗಿ ಕರೆಯುತ್ತಿದ್ದಾರೆ. ತಮ್ಮ ಗಾಂಧಿಯ ವೇಷಭೂಷಣ ಎದ್ದುಕಾಣಲು ಅವರು ತಮ್ಮ ಎದೆಯ ಮೇಲೆ ಜನಿವಾರವನ್ನು ಧರಿಸುತ್ತಾರೆ. ಅವರು ತಮ್ಮ ಹಣೆಗೆ ಮತ್ತು ಅವರ ಪಾದಗಳಿಗೆ ಕುಂಕುಮವನ್ನು ಹಚ್ಚುತ್ತಾರೆ ಮತ್ತು ಕೆಲವೊಮ್ಮೆ ಗಾಂಧಿ ವೇಷಭೂಷಣದಲ್ಲಿದ್ದಾಗ ಜನರನ್ನು ತಮ್ಮ ಕೈಯಿಂದ ಆಶೀರ್ವದಿಸುವ ಮೂಲಕ ಅವರು 'ಪುರೋಹಿತರಂತೆ ವರ್ತಿಸುತ್ತಾರೆ.







