ರಾಜು ದುಮರ್ಗೊಯಿ ಅವರು ಟಾರ್ಪಿ (ಟಾರ್ಪಾ ಎಂದೂ ಕರೆಯುತ್ತಾರೆ) ನುಡಿಸಲು ಪ್ರಾರಂಭಿಸುತ್ತಿದ್ದ ಹಾಗೆ ಅವರ ಕೆನ್ನೆಗಳು ಊದಿಕೊಳ್ಳುತ್ತವೆ. ಬಿದಿರು ಮತ್ತು ಒಣಗಿದ ಸೋರೆಬುರುಡೆಯಿಂದ ಮಾಡಿದ ಐದು ಅಡಿ ಉದ್ದದ ಸಂಗೀತ ವಾದ್ಯವು ತಕ್ಷಣವೇ ಜೀವ ಪಡೆಯುತ್ತದೆ, ಮತ್ತು ವಾದ್ಯದ ಸದ್ದು ವಾತಾವರಣದಲ್ಲಿ ಅಲೆಯಾಗಿ ಹೊಮ್ಮುತ್ತದೆ.
2020ರ ಡಿಸೆಂಬರ್ 27ರಿಂದ 29ರವರೆಗೆ ರಾಜ್ಯ ಸರ್ಕಾರ ಆಯೋಜಿಸಿದ್ದ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಈ ಸಂಗೀತಗಾರ ಮತ್ತು ಅವರ ವಾದ್ಯವನ್ನು ಸುತ್ತಲಿದ್ದವರು ಗಮನಿಸದೆ ಇರುವ ಹಾಗಿರಲಿಲ್ಲ. ಈ ಕಾರ್ಯಕ್ರಮವನ್ನು ಛತ್ತೀಸಗಢದ ರಾಯ್ಪುರದಲ್ಲಿ ಅಯೋಜಿಸಲಾಗಿತ್ತು.
ಕಾ ಠಾಕೂರ್ ಸಮುದಾಯದವರಾದ ವಾದ್ಯ ಕಲಾವಿದ ರಾಜು, ದಸರಾ ಮತ್ತು ನವರಾತ್ರಿ ಮತ್ತು ಇತರ ಹಬ್ಬಗಳ ಸಮಯದಲ್ಲಿ ಮಹಾರಾಷ್ಟ್ರದ ಪಾಲ್ಘರ್ ಬಳಿಯ ತನ್ನ ಊರಾದ ಗುಂಡಾಚಾ ಪಾಡಾ ಎಂಬ ಕುಗ್ರಾಮದಲ್ಲಿ ಟಾರ್ಪಿ ನುಡಿಸುತ್ತೇನೆ ಎಂದು ವಿವರಿಸಿದರು.
ಇದನ್ನೂ ಓದಿ: 'ನನ್ನ ತಾರ್ಪಾ ನನ್ನ ದೇವರು'
ಅನುವಾದ: ಶಂಕರ. ಎನ್. ಕೆಂಚನೂರು