ಪಾಲಿಯೆಸ್ಟರ್‌ ಸೀರೆಗಳು 90 ರೂಪಾಯಿಗಳಿಗೆಲ್ಲ ಲಭ್ಯವಿರುವಾಗ, ತಾನು ನೇಯುವ ಕೋಟ್ಪಾಡ್‌ ಸೀರೆಯನ್ನು 300 ರೂಪಾಯಿಗಳನ್ನು ಕೊಟ್ಟು ಯಾರು ಖರೀದಿಸುತ್ತಾರೆ ಎನ್ನುವ ಚಿಂತೆ ಮಧುಸೂದನ್‌ ತಾಂತಿ ಅವರನ್ನು ಕಾಡುತ್ತಿದೆ

ಒಡಿಶಾದ ಕೋರಾಪುಟ್ ಜಿಲ್ಲೆಯ ಕೋಟ್ಪಾಡ್ ತಹಸಿಲ್ ಡೊಂಗ್ರಿಗುಡ ಗ್ರಾಮದ ನಲವತ್ತರ ಹರೆಯದ ಈ ನೇಕಾರ, ಪ್ರಸಿದ್ಧ ಕೋಟ್ಪಾಡ್ ಸೀರೆಗಳನ್ನು ಅನೇಕ ದಶಕಗಳಿಂದ ನೇಯುತ್ತಿದ್ದಾರೆ. ಕೋಟ್ಪಾಡ್ ಸೀರೆಯು ಸಂಕೀರ್ಣವಾದ ಆಕಾರಗಳನ್ನು ಹೊಂದಿದ್ದು, ಇದನ್ನು ಕಪ್ಪು, ಕೆಂಪು ಮತ್ತು ಕಂದು ಬಣ್ಣದ ರೋಮಾಂಚಕ ಛಾಯೆಗಳಲ್ಲಿ ಹತ್ತಿ ದಾರಗಳಿಂದ ನೇಯಲಾಗುತ್ತದೆ.

"ನೇಯ್ಗೆ ನಮ್ಮ ಕುಟುಂಬದ ಕಸುಬು. ಅಜ್ಜ ನೇಯ್ಗೆ ಮಾಡುತ್ತಿದ್ದರು, ನನ್ನ ತಂದೆ ನೇಯ್ಗೆ ಮಾಡುತ್ತಿದ್ದರು ಮತ್ತು ಈಗ ಮಗ ನೇಯ್ಗೆ ಮಾಡುತ್ತಿದ್ದಾನೆ" ಎಂದು ಮಧುಸೂದನ್ ಹೇಳುತ್ತಾರೆ, ಅವರು ತಮ್ಮ ಎಂಟು ಸದಸ್ಯರ ಕುಟುಂಬವನ್ನು ಪೋಷಿಸುವ ಸಲುವಾಗಿ ಇತರ ಅನೇಕ ಕೆಲಸಗಳನ್ನು ಮಾಡುತ್ತಾರೆ.

ಎ ವೀವ್ ಇನ್ ಟೈಮ್ ಎಂಬ ಈ ಕಿರುಚಿತ್ರವನ್ನು 2014ರಲ್ಲಿ ತಯಾರಿಸಲಾಯಿತು. ಈ ಚಿತ್ರವು ಮಧುಸೂದನ್ ಅವರ ಆನುವಂಶಿಕ ಕರಕುಶಲತೆ ಮತ್ತು ಅದನ್ನು ಉಳಿಸಿಕೊಳ್ಳುವಲ್ಲಿ ಅವರ ಎದುರಿಸುತ್ತಿರುವ ತೊಂದರೆಗಳನ್ನು ಅನ್ವೇಷಿಸುತ್ತದೆ.

ವಿಡಿಯೋ ನೋಡಿ: ಎ ವೀವ್‌ ಇನ್‌ ಎ ಟೈಮ್

ಅನುವಾದ: ಶಂಕರ. ಎನ್. ಕೆಂಚನೂರು

Kavita Carneiro

ಕವಿತಾ ಕಾರ್ನೆರೊ ಪುಣೆ ಮೂಲದ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿದ್ದು, ಕಳೆದ ದಶಕದಿಂದ ಸಾಮಾಜಿಕ ಪರಿಣಾಮದ ಚಲನಚಿತ್ರಗಳನ್ನು ತಯಾರಿಸುತ್ತಿದ್ದಾರೆ ಅವರು ಜಾಫರ್ & ಟುಡು ಎಂಬ ರಗ್ಬಿ ಆಟಗಾರರ ಬಗೆಗಿನ ಸಾಕ್ಷ್ಯಚಿತ್ರ ಮಾಡಿದ್ದಾರೆ ಮತ್ತು ಅವರ ಇತ್ತೀಚಿನ ಚಿತ್ರ ಕಾಲೇಶ್ವರಂ ವಿಶ್ವದ ಅತಿದೊಡ್ಡ ಏತ ನೀರಾವರಿ ಯೋಜನೆಯ ಮೇಲೆ ಕೇಂದ್ರೀಕರಿಸಿದೆ.

Other stories by Kavita Carneiro
Text Editor : Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Vishaka George
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru