ಶೈಲ ನೃತ್ಯವು ಛತ್ತೀಸಗಢದ ಸರ್ಗುಜಾ ಮತ್ತು ಜಶ್ಪುರ್ ಜಿಲ್ಲೆಗಳಲ್ಲಿ ಜನಪ್ರಿಯ ಜಾನಪದ ಕುಣಿತವಾಗಿದೆ. ರಾಜ್ವಾಡೆ, ಯಾದವ್, ನಾಯಕ್, ಮಾಣಿಕ್ಪುರಿ ಸಮುದಾಯಗಳ ಸದಸ್ಯರು ಈ ನೃತ್ಯವನ್ನು ಪ್ರದರ್ಶಿಸುತ್ತಾರೆ. “ಛತ್ತೀಸಗಢ ಮತ್ತು ಒಡಿಶಾದ ಉಳಿದ ಭಾಗಗಳಲ್ಲಿ ಛೆರ್ಛೇರಾ ಎಂದೂ ಕರೆಯಲ್ಪಡುವ ಈ ನೃತ್ಯವನ್ನು ನಾವು ಶೇಟ್ ಹಬ್ಬದ ದಿನದಿಂದ ಆರಂಭಿಸುತ್ತೇವೆ” ಎಂದು ಸುರ್ಗುಜಾ ಜಿಲ್ಲೆಯ ಲಹಪಾತ್ರ ಗ್ರಾಮದ ಕೃಷ್ಣ ಕುಮಾರ್ ರಾಜ್ವಾಡೆ ಹೇಳುತ್ತಾರೆ.

ಛತ್ತೀಸಗಢದ ರಾಜಧಾನಿ ರಾಯ್ಪುರದಲ್ಲಿ ನಡೆಯುತ್ತಿದ್ದ ಸರ್ಕಾರಿ ಪ್ರಾಯೋಜಿತ ಕರಕುಶಲ ಉತ್ಸವದಲ್ಲಿ ಪ್ರದರ್ಶನ ನೀಡಲು 15 ಜನ ಶೈಲ ನೃತ್ಯ ನೃತ್ಯಗಾರರ ಗುಂಪೊಂದು ಬಂದಿತ್ತು. ಅವರಲ್ಲಿ ಕೃಷ್ಣ ಕುಮಾರ್ ಕೂಡ ಒಬ್ಬರು.

ಈ ನೃತ್ಯವು ವರ್ಣರಂಜಿತವಾಗಿದ್ದ, ನರ್ತಕರು ಗಾಢ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ, ಅಲಂಕರಿಸಿದ ಪೇಟಗಳನ್ನು ಧರಿಸುತ್ತಾರೆ ಮತ್ತು ಕೈಯಲ್ಲಿ ಕೋಲುಗಳನ್ನು ಹಿಡಿದಿರುತ್ತಾರೆ. ಈ ನೃತ್ಯದಲ್ಲಿ ಬಳಸುವ ಸಂಗೀತ ವಾದ್ಯಗಳೆಂದರೆ ಕೊಳಲು, ಮಂದರ್, ಮಹುರಿ ಮತ್ತು ಝಾಲ್.

ಈ ಪ್ರಕಾರದಲ್ಲಿ ಕೇವಲ ಗಂಡಸರು ಮಾತ್ರವೇ ನರ್ತಿಸುತ್ತಾರೆ ಮತ್ತು ಅವರಲ್ಲಿ ಕೆಲವರು ತಮ್ಮ ಉಡುಪುಗಳಿಗೆ ನವಿಲುಗರಿಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಇದು ನವಿಲು ಹಿಂಡು ಕುಣಿಯುತ್ತಿರುವ ಭಾವವನ್ನು ನೋಡುಗರಲ್ಲಿ ಹುಟ್ಟಿಸುತ್ತದೆ.

ಛತ್ತೀಸಗಢವು ಆದಿವಾಸಿಗಳೇ ಪ್ರಧಾನವಾಗಿರುವ ರಾಜ್ಯವಾಗಿದ್ದು, ಇಲ್ಲಿನ ಜನರು ಬಹುತೇಕ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಸಂಗತಿಗಳು ಈ ಪ್ರದೇಶದ ಸಂಗೀತ ಮತ್ತು ಕುಣಿತಗಳಲ್ಲಿ ಪ್ರತಿಫಲಿಸುತ್ತವೆ. ಕೊಯ್ಲು ಮುಗಿದ ನಂತರ ಇಲ್ಲಿನ ಜನರು ಹಳ್ಳಿಗಳಲ್ಲಿ ನೃತ್ಯವನ್ನು ಆನಂದಿಸುತ್ತಾರೆ ಮತ್ತು ಊರಿಂದೂರಿಗೆ ಹೋಗಿ ಪ್ರದರ್ಶನಗಳನ್ನು ನೀಡುತ್ತಾರೆ.

ವಿಡಿಯೋ ನೋಡಿ: ಛತ್ತೀಸಗಢದ ಶೈಲ ನೃತ್ಯ

ಅನುವಾದ: ಶಂಕರ. ಎನ್. ಕೆಂಚನೂರು

Purusottam Thakur

ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ (PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.

Other stories by Purusottam Thakur
Editor : PARI Desk

ಪರಿ ಡೆಸ್ಕ್ ನಮ್ಮ ಸಂಪಾದಕೀಯ ಕೆಲಸಗಳ ಕೇಂದ್ರಸ್ಥಾನ. ಈ ತಂಡವು ದೇಶಾದ್ಯಂತ ಹರಡಿಕೊಂಡಿರುವ ನಮ್ಮ ವರದಿಗಾರರು, ಸಂಶೋಧಕರು, ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕರು ಮತ್ತು ಭಾಷಾಂತರಕಾರರೊಂದಿಗೆ ಕೆಲಸ ಮಾಡುತ್ತದೆ. ಪರಿ ಪ್ರಕಟಿಸುವ ಪಠ್ಯ, ವಿಡಿಯೋ, ಆಡಿಯೋ ಮತ್ತು ಸಂಶೋಧನಾ ವರದಿಗಳ ತಯಾರಿಕೆ ಮತ್ತು ಪ್ರಕಟಣೆಯಗೆ ಡೆಸ್ಕ್ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ನಿರ್ವಹಿಸುತ್ತದೆ.

Other stories by PARI Desk
Video Editor : Shreya Katyayini

ಶ್ರೇಯಾ ಕಾತ್ಯಾಯಿನಿ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ಹಿರಿಯ ವೀಡಿಯೊ ಸಂಪಾದಕರಾಗಿದ್ದಾರೆ. ಅವರು ಪರಿಗಾಗಿ ಚಿತ್ರವನ್ನೂ ಬರೆಯುತ್ತಾರೆ.

Other stories by Shreya Katyayini
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru