“ಕಸ ಉತ್ಪತ್ತಿ ಮಾಡುವವರು ನೀವಾಗಿರುವಾಗ ನಾನು ಹೇಗೆ “ಕಚರೇವಾಲಿ [ಕಸದವಳು]” ಆಗುತ್ತೇನೆ? ಹಾಗೆ ನೋಡಿದರೆ ನಾನು ನಗರವನ್ನು ಸ್ವಚ್ಛವಾಗಿಡುವವಳು. ಈ ಲೆಕ್ಕದಲ್ಲಿ ನಾಗರಿಕರೇ ʼಕಚರೇವಾಲೆಗಳುʼ ಅಲ್ಲವೆ?” ಎಂದು ಕೇಳುತ್ತಾರೆ ಸುಮನ್‌ ಮೋರೆ. ಇವರು ಪುಣೆ ಮೂಲದ ಓರ್ವ ಪೌರ ಕಾರ್ಮಿಕರು.

ಕಾಗದ್‌ ಕಾಚ್‌ ಪತ್ರ ಕಷ್ಟಕಾರಿ 1993ರ ಅಡಿಯಲ್ಲಿ ನಿಯೋಜಿತಗೊಂಡ ಕಸ ಸಂಗ್ರರಕಾರರಲ್ಲಿ ಸುಮನ್‌ ಕೂಡಾ ಒಬ್ಬರು. ಇಂದು ಈ ಮಹಿಳೆಯರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿದೆ. ಅವರು ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ತಮಗೆ ತಮ್ಮ ಕೆಲಸವನ್ನು ಅಧಿಕೃತಗೊಳಿಸಬಲ್ಲ ಗುರುತಿನ ಚೀಟಿಗಳನ್ನು ನೀಡಬೇಕೆನ್ನುವುದು ಅವರ ಬೇಡಿಕೆಯಾಗಿತ್ತು. 1996ರಲ್ಲಿ ಅವರ ಈ ಬೇಡಿಕೆ ಈಡೇರಿತು.

ಈ ಮಹಿಳೆಯರು ಈಗ ಪಿಎಂಸಿಗಾಗಿ ಕಸ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ನಾವು ಮಹರ್‌ ಮತ್ತು ಮಾತಂಗ್‌ ಸಮುದಾಯಕ್ಕೆ ಸೇರಿದವರು. "ನಾವು ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ, ಹಸಿ ಕಸವನ್ನು ಕಸದ ಲಾರಿಗೆ ಕೊಡುತ್ತೇವ” ಎನ್ನುತ್ತಾರೆ ಸುಮನ್.‌ ಮುಂದುವರೆದು ಅವರು “ಒಣ ಕಸದಿಂದಲೂ ನಮಗೆ ಅಗತ್ಯವಿರುವುದನ್ನು ಎತ್ತಿಕೊಂಡು ಉಳಿದಿದ್ದನ್ನು ಅದೇ ಕಸದ ಲಾರಿಗೆ ಕೊಡುತ್ತೇವೆ” ಎನ್ನುತ್ತಾರೆ.

ಈ ಮಹಿಳೆಯರು ಈಗ ಪಿಎಂಸಿ ಈ ಕೆಲಸವನ್ನು ಖಾಸಗಿ ಕಂಪನಿಗಳಿಗೆ ಅಥವಾ ಖಾಸಗಿ ಗುತ್ತಿಗೆದಾರರಿಗೆ ನೀಡಬಹುದೆನ್ನುವ ಆತಂಕದಲ್ಲಿದ್ದಾರೆ. ಮತ್ತು ಈ ಕುರಿತು ಅವರು ಹೋರಾಟಕ್ಕೂ ಸಿದ್ಧರಿದ್ದಾರೆ – “ನಾವು ನಮ್ಮ ಕೆಲಸವನ್ನು ಯಾರಿಗೂ ಕಿತ್ತುಕೊಳ್ಳಲು ಬಿಡುವುದಿಲ್ಲ” ಎನ್ನುತ್ತಾರೆ ಆಶಾ ಕಾಂಬ್ಳೆ.

ಈ ಸಾಕ್ಷ್ಯಚಿತ್ರ, मोल (ಮೌಲ್ಯ) ಈ ಕಸ ಸಂಗ್ರಹಿಸುವ ಮಹಿಳೆಯರ ಹೋರಾಟದ ಇತಿಹಾಸವನ್ನು ಅವರದೇ ದನಿಯಲ್ಲಿ ಹೇಳುತ್ತದೆ.

ಸಾಕ್ಷ್ಯಚಿತ್ರ ನೋಡಿ: ಮೌಲ್ಯ

ಅನುವಾದ: ಶಂಕರ. ಎನ್. ಕೆಂಚನೂರು

Kavita Carneiro

ಕವಿತಾ ಕಾರ್ನೆರೊ ಪುಣೆ ಮೂಲದ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿದ್ದು, ಕಳೆದ ದಶಕದಿಂದ ಸಾಮಾಜಿಕ ಪರಿಣಾಮದ ಚಲನಚಿತ್ರಗಳನ್ನು ತಯಾರಿಸುತ್ತಿದ್ದಾರೆ ಅವರು ಜಾಫರ್ & ಟುಡು ಎಂಬ ರಗ್ಬಿ ಆಟಗಾರರ ಬಗೆಗಿನ ಸಾಕ್ಷ್ಯಚಿತ್ರ ಮಾಡಿದ್ದಾರೆ ಮತ್ತು ಅವರ ಇತ್ತೀಚಿನ ಚಿತ್ರ ಕಾಲೇಶ್ವರಂ ವಿಶ್ವದ ಅತಿದೊಡ್ಡ ಏತ ನೀರಾವರಿ ಯೋಜನೆಯ ಮೇಲೆ ಕೇಂದ್ರೀಕರಿಸಿದೆ.

Other stories by Kavita Carneiro
Video Editor : Sinchita Maji

ಸಿಂಚಿತಾ ಮಾಜಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ವೀಡಿಯೊ ಸಂಪಾದಕರಾಗಿ ಕೆಲಸ ಮಾಡುತ್ತಿದ್ದು, ಸ್ವತಂತ್ರ ಛಾಯಾಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

Other stories by Sinchita Maji
Text Editor : Sanviti Iyer

ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್‌ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.

Other stories by Sanviti Iyer
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru