ಮಧ್ಯಪ್ರದೇಶದ ಪನ್ನಾದ ಅಕ್ರಮ, ಓಪನ್ ಕಾಸ್ಟ್ ಗಣಿಗಳಲ್ಲಿ ಮತ್ತು ಅದರ ಸುತ್ತಲಿನ ಕೆಲವು ಹುಲಿ ಸಂರಕ್ಷಿತ ಪ್ರದೇಶ ಮತ್ತು ಪಕ್ಕದ ಅರಣ್ಯಗಳ ಅಡಿಯಲ್ಲಿ ಬರುತ್ತವೆ, ಇಲ್ಲಿ ಜನರು, ಯುವಕರು ಮತ್ತು ಹಿರಿಯರು ತಮ್ಮ ಅದೃಷ್ಟವನ್ನು ಬದಲಾಯಿಸುವ ಕಲ್ಲಿನ ಹುಡುಕಾಟದಲ್ಲಿ ತೊಡಗಿದ್ದಾರೆ.

ಇಲ್ಲಿನ ವಜ್ರದ ಗಣಿಗಳಲ್ಲಿ ಮರಳು ಮತ್ತು ಮಣ್ಣಿನಲ್ಲಿ ವಜ್ರದ ಹರಳುಗಳನ್ನು ಹುಡುಕುವ ಪೋಷಕರೊಂದಿಗೆ ಅವರ ಮಕ್ಕಳೂ ಇರುತ್ತಾರೆ. ಈ ಮಕ್ಕಳು ಬಹುತೇಕ ಗೊಂಡ ಸಮುದಾಯಕ್ಕೆ ಸೇರಿದವರು. (ಈ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ)

“ಒಂದು ವೇಳೆ ನನಗೆ ವಜ್ರ ಸಿಕ್ಕರೆ ನಾನು ಅದನ್ನು ನನ್ನ ಮುಂದಿನ ಓದಿನ ಖರ್ಚಿಗೆ ಬಳಸಿಕೊಳ್ಳಬಹುದು” ಎನ್ನುತ್ತದೆ ಅವರಲ್ಲೊಬ್ಬ ಮಗು.

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ( 2016 ) ಗಣಿ ಉದ್ಯಮದಲ್ಲಿ ಮಕ್ಕಳು (14 ವರ್ಷಕ್ಕಿಂತ ಕೆಳಗಿನವರು) ಮತ್ತು ಹದಿಹರೆಯದವರನ್ನು (18 ವರ್ಷಕ್ಕಿಂತ ಕೆಳಗಿನವರು) ನೇಮಿಸಿಕೊಳ್ಳುವುದಕ್ಕೆ ನಿಷೇಧವನ್ನು ಹೇರಿದೆ.

ಇಲ್ಲಂದ ಸರಿಸುಮಾರು 300 ಕಿಲೋಮೀಟರ್ ದೂರದ ಉತ್ತರ ಪ್ರದೇಶದ ಮಿರ್ಜಾಪುರದ ಮಕ್ಕಳು ಸಹ ತಮ್ಮ ಪೋಷಕರೊಂದಿಗೆ ಇಲ್ಲಿಎ ಕೆಲಸಕ್ಕೆ ಬರುತ್ತಾರೆ. ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ಈ ಹಲವು ಕುಟುಂಬಗಳು ಗಣಿಗಳ ಸಮೀಪದಲ್ಲೇ ವಾಸಿಸುತ್ತವೆ. ಇದು ಅವರ ಬದುಕಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು.

"ನನ್ನ ಮನೆ ಈ ಗಣಿ ಹಿಂದೆ ಇದೆ" ಹುಡುಗಿಯರಲ್ಲಿ ಒಬ್ಬಳು ಹೇಳುತ್ತಾಳೆ, "ಇಲ್ಲಿ ದಿನಕ್ಕೆ ಐದು ಸ್ಫೋಟಗಳು ನಡೆಯುತ್ತವೆ. [ಒಂದು ದಿನ] ಒಂದು ದೊಡ್ಡ ಬಂಡೆಯ ಚೂರು ಬಿದ್ದು [ಮನೆಯ] ನಾಲ್ಕೂ ಗೋಡೆಗಳು ಬಿರುಕುಬಿಟ್ಟವು”

ಈ ಕಿರುಚಿತ್ರವು ಗಣಿಗಳಲ್ಲಿ ದುಡಿಯುವ ಲೆಕ್ಕಕ್ಕೆ ಸಿಗದ ಬಾಲ ಕಾರ್ಮಿಕರ ಕುರಿತು ಮಾತನಾಡುತ್ತದೆ. ಈ ಕೆಲಸದಿಂದದಾಗಿ ಈ ಮಕ್ಕಳು ಶಾಲೆಯಿಂದ ಹೊರಗುಳಿದು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.

ವೀಕ್ಷಿಸಿ: ಗಣಿಯ ಮಕ್ಕಳು

ಅನುವಾದ: ಶಂಕರ ಎನ್ ಕೆಂಚನೂರು

Kavita Carneiro

ಕವಿತಾ ಕಾರ್ನೆರೊ ಪುಣೆ ಮೂಲದ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿದ್ದು, ಕಳೆದ ದಶಕದಿಂದ ಸಾಮಾಜಿಕ ಪರಿಣಾಮದ ಚಲನಚಿತ್ರಗಳನ್ನು ತಯಾರಿಸುತ್ತಿದ್ದಾರೆ ಅವರು ಜಾಫರ್ & ಟುಡು ಎಂಬ ರಗ್ಬಿ ಆಟಗಾರರ ಬಗೆಗಿನ ಸಾಕ್ಷ್ಯಚಿತ್ರ ಮಾಡಿದ್ದಾರೆ ಮತ್ತು ಅವರ ಇತ್ತೀಚಿನ ಚಿತ್ರ ಕಾಲೇಶ್ವರಂ ವಿಶ್ವದ ಅತಿದೊಡ್ಡ ಏತ ನೀರಾವರಿ ಯೋಜನೆಯ ಮೇಲೆ ಕೇಂದ್ರೀಕರಿಸಿದೆ.

Other stories by Kavita Carneiro
Text Editor : Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Other stories by Sarbajaya Bhattacharya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru