ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. 70 ವರ್ಷಗಳ ಸ್ವಾತಂತ್ರ್ಯದ ನಂತರ, ಈಗ ಮತ್ತೆ ದೇಶದ ರೈತರು ಮತ್ತೆ ರೈತ ಕಾರ್ಮಿಕರಿಗಾಗಿ ಹೋರಾಡುತ್ತಿದ್ದಾರೆ.

ಹೌಸಾಬಾಯಿ ಅವರಿಗೆ ಈಗ 91 ವರ್ಷ, ಅವರು ತೂಫಾನ್‌ ಸೇನೆಯ ಸದಸ್ಯರಾಗಿದ್ದರು. ಮಹಾರಾಷ್ಟ್ರದ ಸತಾರಾ ಪ್ರದೇಶದಲ್ಲಿ 1943ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಘೋಷಿಸಿದ ತೂಫಾನ್‌ ಸೇನೆಯು ಪ್ರತಿ ಸರ್ಕಾರದ (ತಾತ್ಕಾಲಿಕ ಭೂಗತ ಸರ್ಕಾರ) ಸಶಸ್ತ್ರ ಪಡೆಯಾಗಿತ್ತು. 1943 ಮತ್ತು 1946ರ ನಡುವೆ, ಅವರು ಬ್ರಿಟಿಷ್ ರೈಲುಗಳು, ಅವರ ಖಜಾನೆ ಮತ್ತು ಅವರ ಅಂಚೆ ಕಚೇರಿಗಳ ಮೇಲೆ ದಾಳಿ ಮಾಡಿದ ಕ್ರಾಂತಿಕಾರಿಗಳ ಗುಂಪಿನ ಭಾಗವಾಗಿ ಸೇವೆ ಸಲ್ಲಿಸಿದರು.

ತೂಫಾನ್ ಸೇನೆಯ 'ಫೀಲ್ಡ್ ಮಾರ್ಷಲ್' ಆಗಿದ್ದವರು ರಾಮಚಂದ್ರ ಶ್ರೀಪತಿ ಲಾಡ್, ಇವರನ್ನು ಕ್ಯಾಪ್ಟನ್ ಭಾವು ಎಂದು ಜನರು ಪ್ರೀತಿಯಿಂದ(ಮರಾಠಿಯಲ್ಲಿ ಭಾವು ಎಂದರೆ ಹಿರಿಯಣ್ಣ) ಕರೆಯುತ್ತಾರೆ. ಜೂನ್ 7, 1943ರಂದು, ಲಾಡ್ ಬ್ರಿಟಿಷ್ ರಾಜ್ ಅಧಿಕಾರಿಗಳ ಸಂಬಳವನ್ನು ಹೊತ್ತ ಪುಣೆ-ಮಿರಜ್ ರೈಲಿನ ಮೇಲೆ ಸ್ಮರಣೀಯ ದಾಳಿಯನ್ನು ನಡೆಸಿದ್ದರು.

ನಾವು ಅವರನ್ನು ಸೆಪ್ಟೆಂಬರ್ 2016ರಲ್ಲಿ ಭೇಟಿಯಾದಾಗ, 94 ವರ್ಷದ ಲಾಡ್, "ಹಣವು ಯಾವುದೇ ವ್ಯಕ್ತಿಯ ಜೇಬಿಗೆ ಹೋಗಲಿಲ್ಲ ಆದರೆ ಪ್ರತಿ ಸರ್ಕಾರಕ್ಕೆ ಹೋಯಿತು" ಎನ್ನುವುದು ನಮಗೆ ತಿಳಿಯಬೇಕೆಂದು ಅವರು ಬಯಸಿದ್ದರು. ನಾವು ಆ ಹಣವನ್ನು ನಿರ್ಗತಿಕರಿಗೆ ಮತ್ತು ಬಡವರಿಗೆ ನೀಡಿದ್ದೆವು.

ನವೆಂಬರ್ 29-30, 2018ರಂದು ದೆಹಲಿಯಲ್ಲಿ ಕಿಸಾನ್ ಮುಕ್ತಿ ಮೆರವಣಿಗೆಗೆ ಮುನ್ನ, ಕ್ಯಾಪ್ಟನ್ ಭಾವು ಮತ್ತು ಹೌಸಾಬಾಯಿ ರೈತರಿಗೆ ಮತ್ತು ಕಾರ್ಮಿಕರ ಸಲುವಾಗಿ 21 ದಿನಗಳ ಸಂಸತ್ತಿನ ಅಧಿವೇಶನಕ್ಕೆ ಒತ್ತಾಯಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ವಿಡಿಯೋಗಳಲ್ಲಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಎಷ್ಟು ನಾಚಿಕೆಗೇಡಿನ ಸಂಗತಿ ಎಂದು ಕ್ಯಾಪ್ಟನ್ ಭಾವು ನಮಗೆ ನೆನಪಿಸುತ್ತಾರೆ, ಮತ್ತು ಹೌಸಾಬಾಯಿ ಸರ್ಕಾರವು ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ನೀಡಬೇಕು, ಮತ್ತು ಎಚ್ಚರಗೊಂಡು ಬಡವರಿಗಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸುತ್ತಾರೆ.

ಅನುವಾದ: ಶಂಕರ ಎನ್. ಕೆಂಚನೂರು

Bharat Patil

Bharat Patil is a volunteer with the People’s Archive of Rural India.

Other stories by Bharat Patil
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru