ತುಳುನಾಡು ಅರಬ್ಬಿ ಸಮುದ್ರ ತೀರದ ಕರಾವಳಿ ಪ್ರದೇಶ. ಇದು ಸಾಗರೋತ್ತರ ವ್ಯಾಪಾರದ ಸುದೀರ್ಘ ಮತ್ತು ಸುಸ್ಥಾಪಿತ ಇತಿಹಾಸವನ್ನು ಹೊಂದಿದೆ. ಭೂತಾರಾಧನೆಯ ಸಂಪ್ರದಾಯವು ಇಲ್ಲಿನ ಜನಜೀವನದಲ್ಲಿ ಹಲವು ಶತಮಾನಗಳಿಂದ ಹಾಸುಹೊಕ್ಕಾಗಿದೆ.

“ಭೂತಾರಧನೆಯಲ್ಲಿ ಸಂಗೀತ ನುಡಿಸುವುದು ನನ್ನ ಉದ್ಯೋಗ” ಎನ್ನುತ್ತಾರೆ ನಾಸಿರ್.‌ ತುಳುನಾಡಿನ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ ಅವರು ಮುಸ್ಲಿಂ ಸಮುದಾಯದವರೇ ನಿರ್ವಹಿಸುವ ವಾದ್ಯ ಸಂಗೀತ ತಂಡದ ಸದಸ್ಯರಾಗಿದ್ದಾರೆ. “ಈ ಆಚರಣೆಗಳಲ್ಲಿ ಪ್ರದರ್ಶನ ನೀಡುವಾಗ ನಮಗೆ ಯಾವುದೇ ತೊಂದರೆ ಎದುರಾಗಿಲ್ಲ.”

ಭೂತಾರಾಧನೆಯು ಅನೇಕ ಸಮುದಾಯಗಳನ್ನು ಒಂದು ಚಪ್ಪರದಡಿ ತರುವ ಆಚರಣೆಯಾಗಿದೆ ಎನ್ನುತ್ತಾರೆ ಕರ್ನಾಟಕದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಸಹಾಯಕ ಸಂಸೋಧಕ  ನಿತೇಶ್ ಅಂಚನ್.

ನಾಸಿರ್‌ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಭೂತಾರಾಧನೆಯ ಆಚರಣೆಗಳಲ್ಲಿ ನಾದಸ್ವರ ಮತ್ತು ಇತರ ವಾದ್ಯಗಳನ್ನು ನುಡಿಸುತ್ತಿದೆ. ಅವರು ತಮ್ಮ ತಂದೆಯಿಂದ ಈ ಕಲೆಯನ್ನು ಬಳುವಳಿಯಾಗಿ ಪಡೆದಿದ್ದು. ಅವರ ಕುಟುಂಬದಲ್ಲಿ ಈ ವೃತ್ತಿಯಲ್ಲಿರುವ ಕೊನೆಯ ಕೊಂಡಿ ನಾಸಿರ್.

“ಭೂತಗಳು ತುಳುನಾಡು ಜನರ ದೈವಗಳು” ಎಂದು ಅಂಚನ್‌ ಹೇಳುತ್ತಾರೆ. ಇಲ್ಲಿ ಭೂತಗಳು ಕೇವಲ ಪೂಜಿಸಲ್ಪಡುವುದಿಲ್ಲ, ಅವು ಇಲ್ಲಿನ ಜನರ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದು ಅವರು ಮುಂದುವರೆದು ಹೇಳುತ್ತಾರೆ.ಭೂತಾರಾಧನೆಗೆ ಸಂಬಂದಿಸಿದ ಪ್ರದರ್ಶನಗಳಲ್ಲಿ ಮಹಿಳೆಯರು ಪಾತ್ರ ಧರಿಸುವುದಿಲ್ಲ. ಆದರೆ ಮಹಿಳಾ ಪಾತ್ರಗಳಿವೆ. ಅವುಗಳನ್ನು ಗಂಡಸರೇ ನಿರ್ವಹಿಸುತ್ತಾರೆ.

ಈ ಕಿರುಚಿತ್ರವು ನಾಸಿರ್‌ ಅವರು ತುಳುನಾಡಿನ ವಿವಿಧೆಡೆ ಭೂತಾರಾಧನೆಯಲ್ಲಿ ನೀಡಿದ ಪ್ರದರ್ಶನಗಳನ್ನು ಒಳಗೊಂಡಿದೆ.

ತುಳುನಾಡಿನ ಭೂತಗಳು: ಸಾಮರಸ್ಯ ಸಂಪ್ರದಾಯದ ಸ್ಫೂರ್ತಿ

ಕವರ್ ಫೋಟೋ: ಗೋವಿಂದ್ ರಾಧೇಶ್ ನಾಯರ್

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Faisal Ahmed

ಫೈಸಲ್ ಅಹ್ಮದ್ ಸಾಕ್ಷ್ಯಚಿತ್ರ ನಿರ್ಮಾಪಕರಾಗಿದ್ದು, ಪ್ರಸ್ತುತ ಕರಾವಳಿ ಕರ್ನಾಟಕದ ಮಲ್ಪೆಯಲ್ಲಿ ನೆಲೆಸಿದ್ದಾರೆ. ಅವರು ಈ ಹಿಂದೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರು ತುಳುನಾಡಿನ ಜೀವಂತ ಸಂಸ್ಕೃತಿಗಳ ಬಗ್ಗೆ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಎಂಎಂಎಫ್-ಪರಿ ಫೆಲೋ (2022-23).

Other stories by Faisal Ahmed
Text Editor : Siddhita Sonavane

ಸಿದ್ಧಿತಾ ಸೊನಾವಣೆ ಪತ್ರಕರ್ತರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ವಿಷಯ ಸಂಪಾದಕರಾಗಿ ಮಾಡುತ್ತಿದ್ದಾರೆ. ಅವರು 2022ರಲ್ಲಿ ಮುಂಬೈನ ಎಸ್ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅದರ ಇಂಗ್ಲಿಷ್ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

Other stories by Siddhita Sonavane
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru