ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಜನಸಾಮಾನ್ಯರಿಂದ ಜನಸಾಮನ್ಯರ ಗಣರಾಜ್ಯೋತ್ಸವದ ಆಚರಣೆ ನಡೆಯಿತು. ಮೂರು ಕೃಷಿ ಕಾನೂನುಗಳ ವಿರುದ್ಧ ಎರಡು ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ನೆಲೆಯಾಗಿ ಪ್ರತಿಭಟಿಸುತ್ತಿದ್ದ ಹತ್ತಾರು ಸಾವಿರ ರೈತರು ಆ ದಿನದಂದು ತಮ್ಮದೇ ಆದ ಗಣ ರಾಜ್ಯೋತ್ಸವ ಮೆರವಣಿಗೆಯನ್ನು ಆಯೋಜಿಸಿದ್ದರು. ಜನವರಿ 26, 2021ರಂದು ಸಿಂಘು, ಟಿಕ್ರಿ, ಘಾಜಿಪುರ, ಮತ್ತು ದೆಹಲಿ ಗಡಿಯಲ್ಲಿರುವ ಇತರ ಪ್ರತಿಭಟನಾ ಶಿಬಿರಗಳಿಂದ ಟ್ರ್ಯಾಕ್ಟರ್ ಮೆರವಣಿಗೆ ಹೊರಟಿತ್ತು. ಜೊತೆಗೆ ದೇಶದ ಇನ್ನಿತರ ಭಾಗಗಳಲ್ಲೂ ಈ ಮೆರವಣಿಗೆ ನಡೆದಿತ್ತು.

ಈ ರೈತ ಮೆರವಣಿಗೆಯು ಶಕ್ತಿಯುತವಾದ ಹಾಗೂ ಬಲಶಾಲಿಯಾದ ಸಾಂಕೇತಿಕ ಕ್ರಮವಾಗಿತ್ತು. ಇದು ರೈತರು, ಜನಸಾಮಾನ್ಯರು, ಕಾರ್ಮಿಕರು ಇತರರು ಗಣರಾಜ್ಯವನ್ನು ಮರಳಿ ಪಡೆದುಕೊಂಡ ದಿನ. ಅಂದು ಸಣ್ಣ ಗುಂಪೊಂದು ಕೆಲ ಅಹಿತಕರ ಘಟನೆಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಿತಾದರೂ, ಇದೊಂದು ಗಮನಾರ್ಹ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಯಿತು.

ನವೆಂಬರ್ 2021ರಲ್ಲಿ ಸರ್ಕಾರ ಆ ಕಾನೂನುಗಳನ್ನು ರದ್ದುಗೊಳಿಸಿದ ನಂತರ ರೈತರ ಪ್ರತಿಭಟನೆಗಳು ಕೊನೆಗೊಂಡವು. ಆ ವೇಳೆಗೆ, ಅವರು  ಮೈ ಕೊರೆಯುವ ಚಳಿಗಾಲ, ಸುಡುವ ಬೇಸಿಗೆಯ ಬಿಸಿಲು ಮತ್ತು ಕೋವಿಡ್-19 ರ ಮಾರಣಾಂತಿಕ ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸಿದ್ದರು - 700ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು. ಈ ಚಿತ್ರವು ಅವರ ಸುದೀರ್ಘ ಹೋರಾಟಕ್ಕೆ ಸಲ್ಲಿಸುವ ಗೌರವವಾಗಿದೆ.

2021ರ ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಮೆರವಣಿಗೆಯು ಇತಿಹಾಸದ ಅತಿದೊಡ್ಡ ಪ್ರತಿಭಟನೆಗಳಲ್ಲಿ ಒಂದಾಗಿದೆ - ರೈತರು ನಿರ್ವಹಿಸಿದ ಈ ಶಾಂತಿಯುತ ಮತ್ತು ಶಿಸ್ತುಬದ್ಧ ಚಳುವಳಿಯು ಸಂವಿಧಾನ ಮತ್ತು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಮರ್ಥಿಸುತ್ತದೆ. ಮತ್ತು ನೆನಪಿಡಿ: ಗಣರಾಜ್ಯೋತ್ಸವವು ನಿಖರವಾಗಿ ಅದನ್ನು ಸೂಚಿಸುತ್ತದೆ - ಪ್ರಜಾಪ್ರಭುತ್ವ ಮತ್ತು ನಾಗರಿಕರ ಹಕ್ಕುಗಳನ್ನು ಪ್ರತಿಷ್ಠಾಪಿಸುವ ಸಂವಿಧಾನದ ಅಳವಡಿಕೆ.

ವೀಡಿಯೊ ನೋಡಿ: ಗಣರಾಜ್ಯೋತ್ಸವದಂದು ರೈತರ ಮೆರವಣಿಗೆಯ ನೆನಪು

ಈ ಚಿತ್ರವು ಆದಿತ್ಯ ಕಪೂರ್ ಅವರ ಕೊಡುಗೆ.

ಅನುವಾದ: ಶಂಕರ. ಎನ್. ಕೆಂಚನೂರು

Aditya Kapoor

ಆದಿತ್ಯ ಕಪೂರ್ ದೆಹಲಿ ಮೂಲದ ದೃಶ್ಯ-ಚಿತ್ರ ಅಭ್ಯಾಸಿಯಾಗಿದ್ದು, ಸಂಪಾದಕೀಯ ಮತ್ತು ಸಾಕ್ಷ್ಯಚಿತ್ರಗಳ ಕೆಲಸದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಚಲಿಸುವ ಚಿತ್ರಗಳು ಮತ್ತು ಸ್ಥಿರಚಿತ್ರಗಳನ್ನು ಒಳಗೊಂಡಿದೆ. ಛಾಯಾಗ್ರಹಣದ ಜೊತೆಗೆ ಸಾಕ್ಷ್ಯಚಿತ್ರಗಳು ಮತ್ತು ಜಾಹೀರಾತು ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ.

Other stories by Aditya Kapoor
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru