ʼಮಳೆಯ ಕೊರತೆ ನನ್ನ ಕಲೆಯನ್ನು ಕೊಲ್ಲಬಹುದು ಎಂದುಕೊಂಡಿರಲಿಲ್ಲʼ
ಪಶ್ಚಿಮ ಮಹಾರಾಷ್ಟ್ರದ ಕೆರ್ಲೆ ಗ್ರಾಮದ ರೈತ ಮತ್ತು ಕುಶಲಕರ್ಮಿ ಸಂಜಯ್ ಕಾಂಬ್ಳೆ ಅವರು ಕೈಯಿಂದ ಸಂಕೀರ್ಣವಾದ ಇರ್ಲಾ ಎನ್ನುವ ಬಿದಿರಿನಿಂದ ತಯಾರಿಸಲಾಗುವ ಮಳೆಗೆ ಧರಿಸುವ ಉಪಕರಣವೊಂದನ್ನು ತಯಾರಿಸುತ್ತಾರೆ. ಆದರೆ ಕಳೆದೊಂದು ದಶಕದಿಂದ ಎದುರಾಗಿರುವ ಮಳೆಯ ಕೊರತೆ ಮತ್ತು ಪ್ಲಾಸ್ಟಿಕ್ ರೇನ್ ಕೋಟ್ ಬಳಕೆಯ ಹೆಚ್ಚಳ ಅವರ ಈ ಕರಕುಶಲ ಕಲೆಗೆ ಕುತ್ತು ತಂದಿದೆ