ಕಣ್ಣು ಹಾಯಿಸಿದಂತೆಲ್ಲ ಕಾಣುವ ಕೊಲ್ಹಾಪುರ ಜಿಲ್ಲೆಯ ಕಬ್ಬಿನ ಗದ್ದೆಗಳ ಸಮುದ್ರದ ನಡುವೆ ನಾರಾಯಣ್ ಮತ್ತು ಕುಸುಮ್ ಗಾಯಕ್ವಾಡ್ ಅವರ ಹರಳು ಗಿಡದ ತೋಟ ಪ್ರತ್ಯೇಕವಾಗಿ ದ್ವೀಪದಂತೆ ನಿಂತಿದೆ. ಕಳೆದ ಅರವತ್ತು ವರ್ಷಗಳಿಂದ ಹರಳು ಬೆಳೆಯುತ್ತಿರುವ ದಂಪತಿ ಗಾಣ ಬಳಸಿ ಅದರ ಎಣ್ಣೆಯನ್ನು ತೆಗೆಯುತ್ತಾರೆ. ಈಗೀಗ ಗಾಣದಿಂದ ಎಣ್ಣೆ ತೆಗೆಯುವವರು ಸಿಗುವುದು ಬಹಳ ಅಪರೂಪ