songs-of-the-rann-archive-of-kutchi-folk-songs-kn

Jul 20, 2023

ರಣ್‌ ಪ್ರದೇಶದ ಹಾಡುಗಳು: ಕಚ್ಛೀ ಜಾನಪದ ಹಾಡುಗಳ ಸಂಗ್ರಹ

ಪೀಪಲ್ಸ್‌ ಆರ್ಕೈವ್ಸ್‌ ಆಫ್‌ ರೂರಲ್‌ ಇಂಡಿಯಾವು ಕಚ್‌ ಮಹಿಳಾ ವಿಕಾಸ್ ಸಂಘಟನೆ (ಕೆಎಮ್‌ವಿಎಸ್)‌ ಸಹಯೋಗದೊಂದಿಗೆ ಕಚ್ಛ್‌ ಪ್ರದೇಶದ ಜಾನಪದ ಹಾಡುಗಳ ಈ ಬಹುಮಾಧ್ಯಮ ಸಂಗ್ರಹವನ್ನು ಪ್ರಸ್ತುತ ಪಡಿಸುತ್ತಿದೆ. ಈ ಸಂಗ್ರಹದಲ್ಲಿರುವ 341 ಹಾಡುಗಳು ಪ್ರೀತಿ, ಹಂಬಲ, ಕಳೆದುಕೊಳ್ಳುವಿಕೆ, ಮದುವೆ, ಭಕ್ತಿ, ಮಾತೃಭೂಮಿ, ಲಿಂಗ ಜಾಗೃತಿ, ಪ್ರಜಾಸತ್ತಾತ್ಮಕ ಹಕ್ಕುಗಳ ವಿಷಯಗಳನ್ನು ಪ್ರತಿಬಿಂಬಿಸುತ್ತವೆ. ತಮ್ಮೊಳಗೆ ಅಡಗಿಸಿಕೊಂಡಿರುವ ರೂಪಕಗಳ ಮೂಲಕ ಈ ಹಾಡುಗಳು ಈ ಪ್ರದೇಶದ ಹೇರಳ ವೈವಿಧ್ಯತೆಯನ್ನೂ ಪ್ರಸ್ತುತಪಡಿಸುತ್ತವೆ. 305 ಸಂಗೀತ ವಾದ್ಯ ವಾದಕರು, ಗಾಯಕರ ಅನೌಪಚಾರಿಕ ತಂಡವು ಈ ಹಾಡುಗಳಿಗೆ ಜೀವ ತುಂಬಿದ್ದಾರೆ. ಈ ಹಾಡುಗಳು ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಇಲ್ಲಿನ ಮೌಖಿಕ ಪರಂಪರೆಯ ಸಿರಿವಂತಿಕೆಯನ್ನು ಪ್ರತಿನಿಧಿಸುತ್ತಿದ್ದವು. ಆದರೆ ಈಗ ಮೆಲ್ಲನೆ ಈ ಮರಳುಗಾಡಿನಿಂದ ದೂರವಾಗುತ್ತಿವೆ. ಈ ಕಾರಣಕ್ಕಾಗಿಯೇ ಅವುಗಳನ್ನು ಸಂಗ್ರಹಿಸಿಡುವುದು ಬಹಳ ಮುಖ್ಯವಾಗಿದೆ

Want to republish this article? Please write to [email protected] with a cc to [email protected]

Author

PARI Contributors

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.