ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೊಸ ಸರ್ಕಾರ ರಚಿಸಲು ಮತದಾನ ಪ್ರಾರಂಭವಾಗಿದೆ. ಏಪ್ರಿಲ್ 19ರಿಂದ ಜೂನ್ 1, 2024ರವರೆಗೆ ಮತದಾನ ನಡೆಯಲಿದೆ. ನಮ್ಮ ಪರಿ ಇಡೀ ಗ್ರಾಮೀಣ ಭಾರತದ ಮತದಾನದ ಪ್ರೇರಕ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ವಿವಿಧ ಮತ ಕ್ಷೇತ್ರಗಳಿಗೆ ಭೇಟಿ ನೀಡಿದೆ. ನಮ್ಮ ವರದಿಗಾರರ ಬಳಿ ರೈತರು, ಕೃಷಿ ಕಾರ್ಮಿಕರು, ಅರಣ್ಯವಾಸಿಗಳು, ವಲಸಿಗರು ಮತ್ತು ಅಂಚಿನಲ್ಲಿ ವಾಸಿಸುವ ಜನರು ನಲ್ಲಿ ನೀರು, ವಿದ್ಯುತ್ ಮತ್ತು ತಮ್ಮ ಮಕ್ಕಳಿಗೆ ಉದ್ಯೋಗದಂತಹ ಮೂಲಭೂತ ಅಗತ್ಯಗಳಿಲ್ಲದೆ ಹತಾಶರಾಗಿರುವುದಾಗಿ ಹೇಳಿದ್ದಾರೆ. ರಾಜಕೀಯ ಕಾರ್ಯಸೂಚಿಗಳಿಂದ ಪ್ರೇರಿತವಾದ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ವಾತಾವರಣದಲ್ಲಿ, ಭದ್ರತೆಯ ನಷ್ಟದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಭಯದಲ್ಲಿರುವ ಮತದಾರರೂ ಇದ್ದಾರೆ. ಪರಿ ದೇಶದ ಮೂಲೆ ಮೂಲೆಗಳಿಂದ ತಂದ ವರದಿಗಳನ್ನು ನೀವು ಇಲ್ಲಿ ಓದಬಹುದು