ಕ್ವೀರ್ ಜನರು ಲಿಂಗ ಗುರುತು, ಲಿಂಗ ಅಭಿವ್ಯಕ್ತಿ, ಲೈಂಗಿಕತೆ ಮತ್ತು ಲೈಂಗಿಕ ದೃಷ್ಟಿಕೋನವನ್ನು ಅವಲಂಬಿಸಿ ಅವರು ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುತ್ತಾರೆ. ಅವರನ್ನು ಹೆಚ್ಚಾಗಿ ಎಲ್ಜಿಬಿಟಿಕ್ಯೂಐಎ+ ಸಮುದಾಯ ಎಂದು ವರ್ಗೀಕರಿಸಲಾಗಿದೆ ಮತ್ತು ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‌ಜೆಂಡರ್, ಕ್ವಶ್ಚನಿಂಗ್/ಕ್ವೀರ್, ಇಂಟರ್ಸೆಕ್ಸ್, ಅಸೆಕ್ಷುವಲ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ. ಸಾಮಾಜಿಕ ಮತ್ತು ಕಾನೂನು ಕ್ಷೇತ್ರಗಳಲ್ಲಿ ಪೂರ್ಣ ಸ್ವೀಕಾರಕ್ಕಾಗಿ ಅವರು ಹೋರಾಟ ನಡೆಸುತ್ತಿದ್ದಾರೆ. ಈ ಸಂಗ್ರಹದಲ್ಲಿನ ಕಥೆಗಳು ಕ್ವೀರ್ ಸಮುದಾಯಕ್ಕೆ ಮೂಲಭೂತ ಹಕ್ಕುಗಳ ಲಭ್ಯತೆಯ ಕೊರತೆಯನ್ನು ಎತ್ತಿ ತೋರಿಸುತ್ತವೆ. ಅವರು ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ, ಸಾಮಾಜಿಕ ಸ್ವೀಕಾರ, ನ್ಯಾಯ, ಗುರುತು ಮತ್ತು ಸ್ಥಿರ ಭವಿಷ್ಯಕ್ಕಾಗಿ ನಿರಂತರ ಹೋರಾಟ ನಡೆಸಬೇಕಿದೆ. ದೇಶದೆಲ್ಲೆಡೆಯ ಕಥೆಗಳು ಇಲ್ಲಿವೆ, ಕ್ವೀರ್ ಜನರು ಏಕಾಂಗಿಯಾಗಿ ಮತ್ತು ಒಗ್ಗಟ್ಟಿನಿಂದ ಆಚರಿಸಿದ ಸಂಭ್ರಮಗಳ ಕುರಿತು ಕೆಲವು ಕತೆಗಳು ಮಾತನಾಡಿದರೆ, ಇನ್ನೂ ಕೆಲವು ಕತೆಗಳು ಅವರ ಹೋರಾಟದ ಕುರಿತು ಮಾತನಾಡುತ್ತವೆ