ಗ್ರಾಮೀಣ ಭಾರತದ ಮತದಾರರು ಮತ ಹಾಕುವ ಮೊದಲು ಯಾವ ವಿಷಯಗಳನ್ನು ಪರಿಗಣಿಸುತ್ತಾರೆ? ದೇಶದ ಗ್ರಾಮೀಣ ಭಾಗದ ಮತದಾರರು ಪರಿಗಣಿಸುವ ಕೆಲವು ಮುಖ್ಯ ವಿಷಯಗಳೆಂದರೆ ಕೃಷಿ ಬಿಕ್ಕಟ್ಟು, ಸಾಲ ಮನ್ನಾ, ಆರೋಗ್ಯ ಸೇವೆ, ರಸ್ತೆ, ಶಾಲೆ, ಉದ್ಯೋಗ, ಉತ್ತಮ ವೇತನ ಮತ್ತು ಘನತೆಯ ಬದುಕು. ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಾಖಂಡ ರಾಜ್ಯದ ಹಲವು ಊರುಗಳಲ್ಲಿ ತಿರುಗಾಡಿ ಪರಿ ಈ ವಿಷಯವನ್ನು ಕಂಡುಕೊಂಡಿದೆ. ಕೆಲವೆಡೆ ನಿರ್ಧಿಷ್ಟ ಗುಂಪುಗಳ ನಿಯಮಗಳು ಮೇಲುಗೈ ಸಾಧಿಸಿದ್ದರೆ, ಇನ್ನೂ ಹಲವೆಡೆ ಜನರ ನೆಲ ಮತ್ತು ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿರುವ ಉದ್ಯಮಗಳು ಮತ್ತು ಯೋಜನೆಗಳ ಕುರಿತ ಆಕ್ರೋಶವನ್ನು ಕಾಣಬಹುದು. ಇದರ ಜೊತೆಗೆ ದೀರ್ಘಕಾಲೀನ ಬೇಡಿಕೆಗಳ ಬಗೆಗಿನ ನಿರ್ಲಕ್ಷ್ಯದ ಕುರಿತಾಗಿಯೂ ಈ ಜನರಲ್ಲಿ ಸಿಟ್ಟಿದೆ.