ಅರಣ್ಯದ ಸಮೀಪದ ಗದ್ದೆಯಲ್ಲಿ ಕೆಲಸ ಮಾಡುವ ಜನರ ಮೇಲೆ ದಾಳಿ ಮಾಡುವ ಕಾಡು ಪ್ರಾಣಿಗಳು ಭಯಾನಕ ಗಾಯಗಳು ಮತ್ತು ಪ್ರಾಣಹಾನಿಗಳನ್ನು ಉಂಟುಮಾಡುತ್ತವೆ. ಬೆಲೆ ಏರಿಕೆ ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ನೊಂದಿರುವ ಹೊಲ ಉಳುವವರ ಬದುಕನ್ನು ಈ ಸಮಸ್ಯೆ ಮತ್ತಷ್ಟು ಅಪಾಯಕ್ಕೆ ತಳ್ಳಿದೆ. ತಡೊಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ (ಟಿಎಟಿಆರ್) ಸುತ್ತ ನಡೆಯುತ್ತಿರುವ ರಕ್ತಸಿಕ್ತ ಮಾನವ-ಪ್ರಾಣಿ ಸಂಘರ್ಷ ಬೆಳೆಯುತ್ತಿರುವ ಪ್ರಾಜೆಕ್ಟ್ ಟೈಗರ್‌ನ ಯಶಸ್ಸಿಗೆ ನೇರ ಸಂಬಂಧವನ್ನು ಹೊಂದಿದೆ