ಇಟ್ಟಿಗೆ ಭಟ್ಟಿಗಳು ಭಾರತದಲ್ಲಿ ಅತ್ಯಂತ ಕ್ರೂರವಾಗಿ ಶೋಷಣೆಯ ಕೆಲಸದ ಸ್ಥಳಗಳಲ್ಲಿ ಒಂದಾಗಿದೆ. ನಿರ್ಗತಿಕ ಕುಟುಂಬಗಳು ಮತ್ತು ಅನೇಕ ಬುಡಕಟ್ಟು ಸಮುದಾಯಗಳು ವರ್ಷದ ಆರು ತಿಂಗಳವರೆಗೆ ಈ ಭಟ್ಟಿಗಳಿಗೆ ವಲಸೆ ಹೋಗುತ್ತವೆ. ಅಲ್ಲಿ ಅವರು ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಅವರು ಸುಡುವ ಬಿಸಿಲಿನಲ್ಲಿ ಭಾರವಾದ ಹೊರೆಗಳನ್ನು ಹೊತ್ತುಕೊಂಡು ಶ್ರಮಿಸುತ್ತಾರೆ. ಕೆಲಸದಿಂದ ಸಿಗುವ ಆದಾಯವೂ ಕಡಿಮೆ. ಉಳಿದ ದಿನಗಳಲ್ಲಿ ಹೊಲ, ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಇಟ್ಟಿಗೆ ಭಟ್ಟಿ ಕೆಲಸದಲ್ಲಿ ಹೆಚ್ಚಾಗಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ನಿರ್ದಿಷ್ಟ ಮೊತ್ತದ ಹಣ ನೀಡಿ ದೊಡ್ಡ ಸಂಖ್ಯೆಯ ಇಟ್ಟಿಗೆಗಳನ್ನು ತಯಾರಿಸುವಂತೆ ಕೇಳಲಾಗುತ್ತದೆ. ಈ ಗುತ್ತಿಗೆಯು ಇಡೀ ಕುಟುಂಬವನ್ನು ಒಳಗೊಂಡಿರುತ್ತದೆ ಮತ್ತು ಹಣವನ್ನು ಗುತ್ತಿಗೆದಾರ ನೀಡುತ್ತಾನೆ. ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣದಲ್ಲಿ ಕೆಲಸ ಮಾಡುತ್ತಿರುವ ಇಟ್ಟಿಗೆ ಭಟ್ಟಿ ಕಾರ್ಮಿಕರ ಕುರಿತ ಪರಿ ಲೇಖನಗಳಿವು