ಆರೆ ಆದಿವಾಸಿಗಳು: ʼನಂತರ… ನಾವು ನಮ್ಮ ಈ ಭೂಮಿಯನ್ನು ಕಳೆದುಕೊಂಡೆವುʼ
ಉತ್ತರ ಮುಂಬೈನ 3,200 ಎಕರೆಗಳ ಆರೆ ಪ್ರದೇಶವು ಒಂದೊಮ್ಮೆ 27 ಆದಿವಾಸಿ ಕೊಪ್ಪಲುಗಳ ನೆಲೆಯೆನಿಸಿತ್ತು. ವರ್ಷಗಳು ಕಳೆದಂತೆ, ಹೈನು (dairy) ಸಂಸ್ಕರಣಾ ಘಟಕ ಮತ್ತು ʼಚಲನಚಿತ್ರ ನಗರಿʼಗಳನ್ನೊಳಗೊಂಡಂತೆ ಅನೇಕ ಯೋಜನೆಗಳು ಈ ಭೂಮಿಯ ಬೃಹತ್ ಭಾಗಗಳನ್ನು ಕಬಳಿಸಿವೆ. ಮುಂಬೈ ಮೆಟ್ರೊ ಸಲುವಾಗಿ ನಿರ್ಮಿಸುತ್ತಿರುವ ಕಾರ್ ಶೆಡ್, ಇತ್ತೀಚೆಗೆ ಈ ಭೂಮಿಯ ಹಕ್ಕನ್ನು ಪಡೆದಿದ್ದು, ಇದಕ್ಕಾಗಿ ಸುಮಾರು 2600 ಮರಗಳನ್ನು ಇತ್ತೀಚೆಗೆ ಕತ್ತರಿಸಲಾಯಿತಲ್ಲದೆ, ಕಾನೂನು ಹೋರಾಟವೂ ನಡೆಯಿತು. ಈ ಪ್ರಕ್ರಿಯೆಯಲ್ಲಿ, ಅನೇಕ ಆದಿವಾಸಿಗಳ ಮನೆಗಳನ್ನು ಸಹ ನೆಲಸಮಗೊಳಿಸಿ, ಅವರ ಕೃಷಿ ಭೂಮಿಗಳನ್ನು ವಶಪಡಿಸಿಕೊಂಡು, ಜೀವನೋಪಾಯವನ್ನು ನಾಶಪಡಿಸಲಾಯಿತು. ಅನೇಕರು ವಿರೋಧಿಸಿದರು, ಮೋರ್ಚಾಗಳನ್ನು ಆಯೋಜಿಸಿದರು, ಅಹವಾಲುಗಳನ್ನು ಸಲ್ಲಿಸಿದರು. ಅವರಲ್ಲೊಬ್ಬರು ಈ ಪಾಡ್‌ಕಾಸ್ಟ್‌ನಲ್ಲಿ ಹೇಳಿರುವಂತೆ, ʼಮೆಟ್ರೊಗಾಗಿ ಒಂದೇ ಒಂದು ಮೋರ್ಚಾ ಸಹ ಆಯೋಜಿಸಲ್ಪಡಲಿಲ್ಲ’
ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.
See more stories
Editor
Sharmila Joshi
ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.
See more stories
Translator
Shailaja G. P.
ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.