ಕರ್ನಾಟಕದ ಬಳ್ಳಾರಿಯಲ್ಲಿ ಗಣಿ ಕೆಲಸ ಮಾಡುವ ಮಹಿಳೆಯರು ಅದಿರು ಅಗೆಯುವುದು. ಪುಡಿ ಮಾಡುವುದು, ಕತ್ತರಿಸುವುದು ಹಾಗೂ ಜರಡಿ ಹಿಡಿಯುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಎರಡು ದಶಕಗಳ ಹಿಂದಿನ ಇಲ್ಲಿನ ಯಾಂತ್ರೀಕರಣವು ಈ ಮಹಿಳೆಯರನ್ನು ಅಪ್ರಸ್ತುತರನ್ನಾಗಿಸಿತು. ಪರಿಹಾರ ಮತ್ತು ಪುನರ್ವಸತಿಯನ್ನು ಆಗ್ರಹಿಸುತ್ತಾ ಅವರು ಈಗ ವಜಾಗೊಂಡ ಕಾರ್ಮಿಕರ ಒಕ್ಕೂಟವನ್ನು ಸೇರಿಕೊಂಡಿದ್ದಾರೆ ಮತ್ತು ಈ ಮೂಲಕ ತಮ್ಮ ಹೋರಾಟಕ್ಕೆ ಇನ್ನಷ್ಟು ಬಲ ತಂದಿದ್ದಾರೆ