ಸದ್ದಿಲ್ಲದೆ ದಹಿಸಿ ಹೋಗುತ್ತಿರುವ ದೆಹಲಿಯ ಸ್ಮಶಾನದ ಕೆಲಸಗಾರರು
ಸ್ಮಶಾನದ ಕೆಲಸಗಾರರಾದ ಹರಿಂದರ್ ಮತ್ತು ಪಪ್ಪು ದೆಹಲಿಯ ನಿಗಮ್ ಬೋಧ್ ಸ್ಮಶಾನದಲ್ಲಿ ಕೊವಿಡ್ ಎರಡನೇ ಅಲೆಯ ಉದ್ದಕ್ಕೂ ದಣಿವರಿಯದೆ ನಿರಂತರ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನೇ ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಅವರಿಗೆ ಯಾವುದೇ ಸುರಕ್ಷಾ ಸಾಧನಗಳಾಗಲಿ ವಿಮೆಯಾಗಲಿ ಇಲ್ಲ. ಜೊತೆಗೆ ತಮ್ಮ ಸಂಬಳದ ಏರಿಕೆಗಾಗಿಯೂ ಕಾಯುತ್ತಿದ್ದಾರೆ.