ಇದು ದೇಶದೆಲ್ಲೆಡೆ ಸಂಚರಿಸಿ ʼಪರಿʼ ಸಂಗ್ರಹಿಸಿದ ವರದಿಗಳ ಸರಣಿ, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಕುರಿತ ವ್ಯಾಪಕ ಶ್ರೇಣಿಯನ್ನು ಇವು ಒಳಗೊಂಡಿವೆ - ಬಂಜೆತನಕ್ಕೆ ಅಂಟಿಕೊಂಡಿರುವ ಕಳಂಕ, ಸ್ತ್ರೀ ಸಂತಾನಹರಣಕ್ಕೆ ಒತ್ತು ನೀಡುವುದು ಮತ್ತು ಕುಟುಂಬ ಯೋಜನೆಯಲ್ಲಿ ಪುರುಷರ ಪಾಲ್ಗೊಳ್ಳುವಿಕೆಯ ಕೊರತೆ. ಆರೋಗ್ಯ ರಕ್ಷಣಾ ಸೌಲಭ್ಯದ ಕೊರತೆ, ಅಸಮರ್ಪಕ ಗ್ರಾಮೀಣ ಆರೋಗ್ಯ ಆರೈಕೆ, ಅನೇಕರಿಗೆ ಆರೋಗ್ಯ ಸೇವೆಗೆ ಪ್ರವೇಶವಿಲ್ಲದಿರುವುದು, ಪ್ರಮಾಣೀಕರಿಸದ ವೈದ್ಯಕೀಯ ವೃತ್ತಿಪರರು ಮತ್ತು ಅಪಾಯಕಾರಿ ಜನನಗಳು, ಮುಟ್ಟಿನ ಕಾರಣಕ್ಕೆ ಎಸಗಲಾಗುವ ತಾರತಮ್ಯ, ಪುತ್ರರಿಗೆ ಆದ್ಯತೆ ಇತ್ಯಾದಿ. ಗ್ರಾಮೀಣ ಭಾರತದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವ್ಯಾಪಕವಾದ ಪೂರ್ವಾಗ್ರಹಗಳು ಮತ್ತು ಸಂಪ್ರದಾಯಗಳು, ಜನರು ಮತ್ತು ಸಮುದಾಯಗಳು, ಲಿಂಗ ಮತ್ತು ಹಕ್ಕುಗಳು ಮತ್ತು ಮಹಿಳೆಯರ ದೈನಂದಿನ ಹೋರಾಟಗಳು ಮತ್ತು ಸಾಂದರ್ಭಿಕ ಸಣ್ಣ ಸಾಧನೆಗಳ ಬಗ್ಗೆ ಹೇಳುವ ಕಥೆಗಳನ್ನು ಸಹ ಈ ವರದಿ ಸರಣಿ ಒಳಗೊಂಡಿದೆ