ಪ್ರತಿ ವರ್ಷ ಡಿಸೆಂಬರ್ 6, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು, ಗ್ರಾಮೀಣ ಭಾರತದ ಲಕ್ಷಾಂತರ ಬಡ ಜನರನ್ನು ಮುಂಬೈಯ ದಾದರಿನಲ್ಲಿರುವ ಚೈತ್ಯಭೂಮಿ ತನ್ನೆಡೆಗೆ ಸೆಳೆಯುತ್ತದೆ. ಶೋಷಣೆ ಮತ್ತು ತುಳಿತಕ್ಕೊಳಗಾದ ಜನರು ಇಲ್ಲಿ ಸಾಗರದಂತೆ ಒಂದೆಡೆ ಸೇರಿ ಅವರಿಗೆ ಗೌರವ ಸಲ್ಲಿಸಿ ಮತ್ತು ಸ್ವಾಭಿಮಾನವನ್ನು ಗಳಿಸುತ್ತಾರೆ