37 ವರ್ಷದ ಗನಿ ಸಾಮಾ ಗುಜರಾತಿನ ನಾಲ್‌ ಸರೋವರ ಮತ್ತು ಪಕ್ಷಿಧಾಮದಲ್ಲಿ ಅಂಬಿಗನಾಗಿ ಗುರುತಿಸಿಕೊಂಡಿದ್ದಾರೆ. ಅಹಮದಾಬಾದ್‌ ಜಿಲ್ಲೆಯ ವಿರಾಮಗಾಮ್‌ ತೆಹಸಿಲ್‌ ಪ್ರದೇಶದಲ್ಲಿರುವ ಈ ಈ 120 ಚದರ ಕಿಲೋಮೀಟರ್ ವ್ಯಾಪ್ತಿಯ ಸರೋವರವು ಮಧ್ಯ ಏಷ್ಯಾದ ಹಾರು ಹಾದಿ ಮೂಲಕ, ಆರ್ಕ್ಟಿಕ್ ಮಹಾಸಾಗರದಿಂದ ಹಿಂದೂ ಮಹಾಸಾಗರಕ್ಕೆ ಬರುವ ಅನೇಕ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತದೆ.

"ನಾನು 350ಕ್ಕೂ ಹೆಚ್ಚು ಜಾತಿಯ ಹಕ್ಕಿಗಳನ್ನು ಗುರುತಿಸಬಲ್ಲೆ" ಎಂದು ಅವರು ಹೇಳುತ್ತಾರೆ, ಇದರಲ್ಲಿ ನಾ; ಸರೋವರಕ್ಕೆ ಬರುವ ವಲಸೆ ಹಕ್ಕಿಗಳು ಸಹ ಸೇರಿವೆ. "ಈ ಹಿಂದೆ, ಸುಮಾರು 240 ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಲಾಗುತ್ತಿತ್ತು, ಈಗ ಈ ಸಂಖ್ಯೆ 315ಕ್ಕಿಂತ ಹೆಚ್ಚಾಗಿದೆ."

ಗನಿ ಈ ಸರೋವರದ ಸುತ್ತಮುತ್ತಲಿನಲ್ಲೇ ತನ್ನ ಬಾಲ್ಯವನ್ನು ಕಳೆದಿದ್ದಾರೆ. "ನನ್ನ ತಂದೆ ಮತ್ತು ನನ್ನ ಅಜ್ಜ ಈ ಪಕ್ಷಿಗಳ ರಕ್ಷಣೆಗೆ ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಿದ್ದರು. ಅವರಿಬ್ಬರೂ ಅರಣ್ಯ ಇಲಾಖೆಯಲ್ಲಿ ಅಂಬಿಗರಾಗಿ ಕೆಲಸ ಮಾಡುತ್ತಿದ್ದರು. ಈಗ ನಾನೂ ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ. "1997ರಲ್ಲಿ ಈ ಕೆಲಸಕ್ಕೆ ಸೇರಿಕೊಂಡ ಮೊದಲಿನಲ್ಲಿ, ಒಮ್ಮೊಮ್ಮೆ ಕೆಲಸ ಸಿಕ್ಕರೆ ಕೆಲವೊಮ್ಮೆ ಏನೂ ಇರುತ್ತಿರಲಿಲ್ಲ" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

2004ರಲ್ಲಿ ಅರಣ್ಯ ಇಲಾಖೆಯು ಅವರನ್ನು ಗಸ್ತು ತಿರುಗಲು ಮತ್ತು ಪಕ್ಷಿಗಳನ್ನು ರಕ್ಷಿಸಲು ಅಂಬಿಗನನ್ನಾಗಿ ನೇಮಿಸಿಕೊಂಡ ನಂತರ ಅವರ ಬದುಕಿನ ದಿನಗಳು ಬದಲಾದವು ಮತ್ತು "ನಾನು ಈಗ ತಿಂಗಳಿಗೆ ಸುಮಾರು 19,000 ರೂಪಾಯಿಗಳನ್ನು ಸಂಪಾದಿಸುತ್ತೇನೆ."

Gani on a boat with his camera equipment, looking for birds to photograph on the Nal Sarovar lake in Gujarat
PHOTO • Zeeshan Tirmizi
Gani on a boat with his camera equipment, looking for birds to photograph on the Nal Sarovar lake in Gujarat
PHOTO • Zeeshan Tirmizi

ಗನಿ ತನ್ನ ಕ್ಯಾಮೆರಾ ಉಪಕರಣಗಳೊಂದಿಗೆ ದೋಣಿಯಲ್ಲಿ, ಅವರು ಗುಜರಾತಿನ ನಾಲ್ ಸರೋವರ್ ಸರೋವರದಲ್ಲಿ ಫೋಟೊ ತೆಗೆಯಲು ಹಕ್ಕಿಯ ಹುಡುಕಾಟದಲ್ಲಿದ್ದಾರೆ

Left: Gani pointing at a bird on the water.
PHOTO • Zeeshan Tirmizi
Right: Different birds flock to this bird sanctuary.
PHOTO • Zeeshan Tirmizi

ಎಡಕ್ಕೆ: ಗನಿ ನೀರಿನ ಮೇಲಿರುವ ಹಕ್ಕಿಯನ್ನು ತೋರಿಸುತ್ತಿದ್ದಾರೆ. ಬಲ: ಈ ಪಕ್ಷಿಧಾಮಕ್ಕೆ ವಿವಿಧ ಬಗೆಯ ಹಕ್ಕಿಗಳು ಬರುತ್ತವೆ

ಮೂರನೇ ತಲೆಮಾರಿನ ಅಂಬಿಗ ಮತ್ತು ಉತ್ಸಾಹಿ ಪಕ್ಷಿ ವೀಕ್ಷಕ ನಾಲ್ ಸರೋವರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ವೆಕರಿಯಾ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಈ ಸರೋವರದ ಪ್ರವಾಸೋದ್ಯಮ ಸಂಬಂಧಿತ ಕೆಲಸವು ಹಳ್ಳಿಯ ಜನರಿಗೆ ಆದಾಯದ ಏಕೈಕ ಮೂಲವಾಗಿದೆ.

ಗನಿ ಊರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದರು ಆದರೆ ಕುಟುಂಬದ ಪೋಷಣೆಗಾಗಿ ದುಡಿಯಲು ಪ್ರಾರಂಭಿಸಬೇಕಿದ್ದ ಕಾರಣ 7ನೇ ತರಗತಿಯ ನಂತರ ಶಾಲೆ ತೊರೆದರು. ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಅವರು 14 ವರ್ಷದವರಿದ್ದಾಗ, ಖಾಸಗಿಯಾಗಿ ದೋಣಿ ನಡೆಸಲು ಆರಂಭಿಸಿದರು.

ಔಪಚಾರಿಕ ಶಿಕ್ಷಣವನ್ನೂ ನಿಲ್ಲಿಸಿದರೂ ಗನಿ ಈ ಯಾವುದೇ ಹಕ್ಕಿಯನ್ನು ನೋಡಿದ ತಕ್ಷಣ ಗುರುತಿಸಬಲ್ಲರು ಮತ್ತು ಅದರ ಹೆಸರು ಹೇಳಬಲ್ಲರು. ಕೆಮೆರಾ ಇಲ್ಲದಿರುವುದು ಅವರ ಪಾಲಿಗೆ ಒಂದು ತಡೆಯೇ ಆಗಿರಲಿಲ್ಲ. “ನನ್ನ ಬಳಿ ಕೆಮೆರಾ ಇಲ್ಲದ ಸಮಯದಲ್ಲಿ ಮೊಬೈಲ್‌ ಮೇಲೆ ಟೆಲಿಸ್ಕೋಪ್‌ ಇರಿಸಿ ಹಕ್ಕಿಗಳ ಫೋಟೊ ತೆಗೆಯುತ್ತಿದ್ದೆ.” ಅವರು ಕೊನೆಗೂ 2023ರಲ್ಲಿ ಕೊಂಡರು. “ಆರ್‌ ಜೆ ಪ್ರಜಾಪತಿಯವರ ಸಹಾಯದೊಂದಿಗೆ ನಿಕಾನ್‌ ಕೂಲ್‌ ಪಿಕ್ಸ್‌ ಪಿ950 ಕೆಮೆರಾ ಮತ್ತು ದೂರದರ್ಶಕವನ್ನು ಖರೀದಿಸಿದೆ.”

ಗನಿ ಹಕ್ಕಿಗಳ ವಿಷಯದಲ್ಲಿ ಸಂಶೋಧಕರಿಗೂ ಸಹಾಯ ಮಾಡಿದ್ದಾರೆ. ಮತ್ತು ಈ ಸಹಾಯವು ನಾಲ್ ಸರೋವರದಲ್ಲಿನ ವಲಸೆ ಹಕ್ಕಿಗಳ ಛಾಯಾಚಿತ್ರಗಳಿಗೆ ಅಂತರರಾಷ್ಟ್ರೀಯ ಮನ್ನಣೆ ದೊರೆಯಲು ಕಾರಣವಾಗಿದೆ. "ನಾನು ಒಂದೇ ಗೂಡಿನ ರಷ್ಯಾದ ಯು3 ಮತ್ತು ಯು4 ಎಂದು ಟ್ಯಾಗ್ ಮಾಡಲಾದ ಎರಡು ಹಕ್ಕಿಗಳ ಚಿತ್ರಗಳನ್ನು ತೆಗೆದಿದ್ದೆ. 2022ರಲ್ಲಿ, ಯು3 ಹಕ್ಕಿಯನ್ನು ಮತ್ತೆ ನೋಡಿದೆ; ಈ ವರ್ಷ [2023] ನಾನು ಯು4 ಹಕ್ಕಿಯನ್ನು ಸಹ ಕಂಡೆ. ಇವುಗಳನ್ನು ವೈಲ್ಡ್‌ ಲೈಫ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ರಷ್ಯಾದ ವಿಜ್ಞಾನಿಗೆ ಕಳುಹಿಸಿದಾಗ, ಆ ಪಕ್ಷಿಗಳು ಒಂದೇ ಗೂಡಿನಿಂದ ಬಂದಿವೆ ಎಂದು ವಿಜ್ಞಾನಿ ನಮಗೆ ಮಾಹಿತಿ ನೀಡಿದರು. ಎರಡೂ ಪಕ್ಷಿಗಳು ನಾಲ್ ಸರೋವರಕ್ಕೆ ಭೇಟಿ ನೀಡಿವೆ" ಎಂದು ಅವರು ಉತ್ಸಾಹದಿಂದ ಹೇಳುತ್ತಾರೆ.

ರಷ್ಯಾದ ವಿಜ್ಞಾನಿಗಳು ಅವರ ವೀಕ್ಷಣೆಗಳನ್ನು ಗಮನಿಸಿದ್ದಾರೆ ಎಂದು ಅವರು ಹೇಳುತ್ತಾರೆ. "ಡೆಮೊಸೆಲ್ಲಾ ಕ್ರೇನ್ (ಗ್ರುಸ್ ವರ್ಗೋ) ಎಂದು ಕರೆಯಲ್ಪಡುವ ಕೊಕ್ಕರೆ ಜಾತಿಯ ಸುಮಾರು ಎಂಟು ಉಂಗುರ ಪಕ್ಷಿಗಳನ್ನು ನಾನು ನೋಡಿದ್ದೆ. ನಾನು ಈ ಹಕ್ಕಿಗಳ ಚಿತ್ರ ತೆಗದು ನಂತರ ಕಳುಹಿಸಿದೆ, ಅದರ ನಂತರ ಈ ಕುರಿತು ಟಿಪ್ಪಣಿ ಮಾಡಲಾಯಿತು."

Left: A Sooty Tern seabird that came to Nal Sarovar during the Biporjoy cyclone in 2023.
PHOTO • Gani Sama
Right: A close-up of a Brown Noddy captured by Gani
PHOTO • Gani Sama

ಎಡ: 2023ರಲ್ಲಿ ಬಿಪೋರ್‌ಜಾಯ್ ಚಂಡಮಾರುತದ ಸಮಯದಲ್ಲಿ ನಾಲ್ ಸರೋವರಕ್ಕೆ ಬಂದ ಸೂಟಿ ಟರ್ನ್ ಸೀಬರ್ಡ್ ಬಲ: ಗನಿಯವರು ತೆಗೆದ ಬ್ರೌನ್‌ ನಾಡ್ಡಿ ಹಕ್ಕಿಗಳ ಸಮೀಪದ ಚಿತ್ರ

Left: A pair of Sarus cranes next to the lake.
PHOTO • Gani Sama
Right: Gani's picture of flamingos during sunset on the water.
PHOTO • Gani Sama

ಎಡ: ಸರೋವರದ ಪಕ್ಕದಲ್ಲಿ ಒಂದು ಜೋಡಿ ಸಾರಸ್ ಕೊಕ್ಕರೆಗಳು ಬಲ: ಗನಿಯವರು ಸೆರೆ ಹಿಡಿದ ಸೂರ್ಯಾಸ್ತದ ಸಮಯದಲ್ಲಿ ನೀರಿನ ಮೇಲೆ ಆಡುತ್ತಿರುವ ಫ್ಲೆಮಿಂಗೊಗಳ ಚಿತ್ರ

ಹವಾಮಾನ ಬದಲಾವಣೆಯಿಂದಾಗಿ ನಾಲ್ ಸರೋವರದಲ್ಲಿ ಬದಲಾವಣೆಗಳು ನಡೆಯುತ್ತಿರುವುದನ್ನು ಗಣ ಗಮನಿಸಿದ್ದಾರೆ. "ಜೂನ್‌ ತಿಂಗಳಿನಲ್ಲಿ ಗುಜರಾತಿಗೆ ಅಪ್ಪಳಿಸಿದ ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮದಿಂದಾಗಿ, ಬ್ರೌನ್ ನಾಡ್ಡಿ (ಅನೌಸ್ ಸ್ಟೊಲಿಡಸ್), ಸೂಟಿ ಟರ್ನ್ (ಒನಿಕೊಪ್ರಿಯನ್ ಫುಸ್ಕಾಟಸ್), ಆರ್ಕ್ಟಿಕ್ ಸ್ಕುವಾ (ಸ್ಟೆರ್ಕೊರಾರಿಯಸ್ ಪ್ಯಾರಾಸಿಟಿಕಸ್) ಮತ್ತು ಬ್ರಿಡ್ಲೆಡ್ ಟೆರ್ನ್ (ಒನಿಕೊಪ್ರಿಯನ್ ಅನೆಥೆಟಸ್) ನಂತಹ ಕೆಲವು ಹೊಸ ಜಾತಿಯ ಸಮುದ್ರ ಪಕ್ಷಿಗಳು ಇಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿವೆ.

ಮಧ್ಯ ಏಷ್ಯಾದ ಹಾರು ಹಾದಿಯ ಮೂಲಕ ಕೆಂಪು ಎದೆಯ ಬಾತುಕೋಳಿ (ಬ್ರಾಂಟಾ ರುಫಿಕೊಲಿಸ್) ಬಂದಿದೆ - ಚಳಿಗಾಲದಲ್ಲಿ ನಾಲ್ ಸರೋವರದ ಆಕರ್ಷಣೆಯ ಕೇಂದ್ರವಾಗಿರುತ್ತದೆ. ಇದು ಕಳೆದ ಮೂರು ವರ್ಷಗಳಿಂದ ಇಲ್ಲಿಗೆ ಬರುತ್ತಿದೆ. ಇದು ಮಂಗೋಲಿಯಾ ಮತ್ತು ಕಜಕಿಸ್ತಾನದಂತಹ ಸ್ಥಳಗಳಿಂದ ಬರುತ್ತದೆ. "ಆ ಒಂದು ಪಕ್ಷಿ ಕಳೆದ ಮೂರು ವರ್ಷಗಳಿಂದ ಇಲ್ಲಿಗೆ ಬರುತ್ತಿದೆ. ಇದು ನಿರಂತರವಾಗಿ ಇಲ್ಲಿಗೆ ಬರುತ್ತಿದೆ" ಎಂದು ಗನಿ ಗಮನಸೆಳೆದರು. ಪಕ್ಷಿಧಾಮಕ್ಕೆ ಭೇಟಿ ನೀಡುವ ತೀವ್ರವಾಗಿ ಅಳಿವಿನಂಚಿನಲ್ಲಿರುವ ಸೋಷಿಯೇಬಲ್ ಲ್ಯಾಪ್ವಿಂಗ್ (ವೆನೆಲ್ಲಸ್ ಗ್ರೆಗರಿಯಸ್) ‌ಹಕ್ಕಿಯನ್ನು ಅವರು ಉಲ್ಲೇಖಿಸುತ್ತಾರೆ.

"ಒಂದು [ಹಕ್ಕಿ] ಗೆ ನನ್ನ ಹೆಸರಿಡಲಾಗಿದೆ" ಎಂದು ಗನಿ ಕೊಕ್ಕರೆ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ. "ಆ ಕೊಕ್ಕರೆ ಇದೀಗ ರಷ್ಯಾದಲ್ಲಿದೆ; ಅದು ರಷ್ಯಾಕ್ಕೆ ಹೋಗಿ ನಂತರ ಗುಜರಾತಿಗೆ ಹಿಂದಿರುಗಿತು ಮತ್ತು ನಂತರ ಮತ್ತೆ ರಷ್ಯಾಕ್ಕೆ ಹೋಯಿತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

"ನಾನು ಆಗಾಗ್ಗೆ ಪತ್ರಿಕೆಗಳಿಗೆ ಅನೇಕ ಚಿತ್ರಗಳನ್ನು ನೀಡುತ್ತಿರುತ್ತೇನೆ. ಅವರು ನನ್ನ ಹೆಸರನ್ನು ಪ್ರಕಟಿಸುವುದಿಲ್ಲ. ಆದರೆ ಅದರಲ್ಲಿನ ಚಿತ್ರಗಳನ್ನು ನೋಡಿ ನನಗೆ ಸಂತೋಷವಾಗುತ್ತದೆ" ಎಂದು ಗನಿ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Student Reporter : Zeeshan Tirmizi

जीशान तिर्मिज़ी, राजस्थान केंद्रीय विश्वविद्यालय के छात्र हैं. वह साल 2023 में पारी के इंटर्न रह चुके हैं.

की अन्य स्टोरी Zeeshan Tirmizi
Photographs : Zeeshan Tirmizi

जीशान तिर्मिज़ी, राजस्थान केंद्रीय विश्वविद्यालय के छात्र हैं. वह साल 2023 में पारी के इंटर्न रह चुके हैं.

की अन्य स्टोरी Zeeshan Tirmizi
Photographs : Gani Sama

गनी समा 37 वर्षीय प्रकृतिवादी हैं, और उन्होंने इसके लिए कोई प्रशिक्षण नहीं लिया है. वह नल सरोवर पक्षी अभ्यारण्य में पक्षियों की निगरानी और सुरक्षा के लिए बतौर नाविक काम करते हैं.

की अन्य स्टोरी Gani Sama
Editor : PARI Desk

पारी डेस्क हमारे संपादकीय कामकाज की धुरी है. यह टीम देश भर में सक्रिय पत्रकारों, शोधकर्ताओं, फ़ोटोग्राफ़रों, फ़िल्म निर्माताओं और अनुवादकों के साथ काम करती है. पारी पर प्रकाशित किए जाने वाले लेख, वीडियो, ऑडियो और शोध रपटों के उत्पादन और प्रकाशन का काम पारी डेस्क ही संभालता है.

की अन्य स्टोरी PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru