ನೊರೆನ್ ಹಜಾರಿಕಾ ಹಸಿರು ಭತ್ತದ ಗದ್ದೆಯಲ್ಲಿ ನಿಂತು ಎದೆ ತುಂಬಿ ಹಾಡುತ್ತಾರೆ, ಅದು ಭತ್ತದ ಗಿಡಗಳು ಚಿನ್ನದ ಬಣ್ಣಕ್ಕೆ ತಿರುಗುವ ಕೆಲವು ದಿನಗಳ ಮೊದಲು. 82 ವರ್ಷದ ಜಿತೇನ್ ಹಜಾರಿಕಾ ಧುಲ್ ಬಾರಿಸಿದರೆ 60 ವರ್ಷದ ರಾಬಿನ್ ಹಜಾರಿಕಾ ತಾಳ ಬಾರಿಸಿ ಜೊತೆ ನೀಡಿದರು. ಈ ಮೂವರು ಟಿಟಾಬರ್ ಉಪವಿಭಾಗದ ಬಲಿಜನ್ ಗ್ರಾಮದ ಸಣ್ಣ ರೈತರು. ಅವರು ಒಂದು ಕಾಲದಲ್ಲಿ ತಮ್ಮ ಯೌವನದಲ್ಲಿ ಪರಿಣಿತ ಬಿಹುವಾ (ಬಿಹು ಕಲಾವಿದರು) ಆಗಿದ್ದರು.
“ ಎಷ್ಟು ಬೇಕಿದ್ದರೂ ಮಾತನಾಡಬಹುದು. ಆದರೆ ರೊಂಗೋಲಿ [ವಸಂತದ ಹಬ್ಬ] ಬಿಹುವಿನ ಕತೆಗಳು ಮುಗಿಯುವುದಿಲ್ಲ!”
ಸುಗ್ಗಿಯ ಕಾಲ (ನವೆಂಬರ್-ಡಿಸೆಂಬರ್) ಸಮೀಪಿಸುತ್ತಿದ್ದಂತೆ ಭತ್ತದ ಗದ್ದೆಗಳು ಚಿನ್ನದ ಬಣ್ಣಕ್ಕೆ ತಿರುಗತೊಡಗುತ್ತವೆ. ಸ್ಥಳೀಯ ಕಣಜಗಳು ಮತ್ತೊಮ್ಮೆ ಬೋರಾ, ಜೋಹಾ ಮತ್ತು ಐಜುಂಗ್ (ಸ್ಥಳೀಯ ಅಕ್ಕಿಯ ವಿಧಗಳು) ಗಳಿಂದ ಸಮೃದ್ಧವಾಗುತ್ತವೆ. ಸುಗ್ಗಿ ನಂತರದ ಚುಟಿಯಾ ಸಮುದಾಯದ ಅಪಾರ ಸಂತೃಪ್ತಿಯ ಭಾವವು ಅಸ್ಸಾಂನ ಜೋರಹಾಟ್ ಜಿಲ್ಲೆಯಲ್ಲಿ ತಲೆಮಾರುಗಳಿಂದ ಸಾಗಿ ಬಂದಿರುವ ಬಿಹು ನಾಮ್ (ಹಾಡುಗಳು) ಹಾಡುವಿಕೆಯಲ್ಲಿ ಕೇಳಿಸುತ್ತದೆ. ಚುತಿಯಾಗಳು ಸ್ಥಳೀಯ ಬುಡಕಟ್ಟು ಜನಾಂಗದವರು, ಇವರು ಹೆಚ್ಚಾಗಿ ಕೃಷಿ ಮಾಡುತ್ತಾರೆ ಮತ್ತು ಮುಖ್ಯವಾಗಿ ಅಸ್ಸಾಂನ ಮೇಲ್ಭಾಗದಲ್ಲಿ ವಾಸಿಸುತ್ತಾರೆ.
ಅಸ್ಸಾಮಿ ಪದವಾದ ತುಕ್ ಎಂದರೆ ಅಡಿಕೆ, ತೆಂಗಿನಕಾಯಿ ಮತ್ತು ಬಾಳೆ ಮರಗಳ ಗೊಂಚಲು, ಸಮೃದ್ಧಿಯನ್ನು ವಿವರಿಸಲು ಬಳಸಲಾಗುತ್ತದೆ. ಹಾಡುಗಳಲ್ಲಿನ ಪದಗುಚ್ಛಗಳಾದ 'ಮೊರೊಮೊರ್ ತುಕ್' ಮತ್ತು 'ಮೊರೊಮ್' ಎಂದರೆ ಪ್ರೀತಿ - ಪ್ರೀತಿಯ ಕೂಗು. ಕೃಷಿಕ ಸಮುದಾಯಕ್ಕೆ, ಈ ಪ್ರೀತಿಯ ಸಮೃದ್ಧಿಯೂ ಬಹಳ ಮೌಲ್ಯಯುತವಾಗಿದೆ, ಮತ್ತು ಸಂಗೀತಗಾರರ ಧ್ವನಿಗಳು ಹೊಲಗಳಿಗಿಂತ ಮೇಲಕ್ಕೆ ಏರುತ್ತವೆ.
“ ನನ್ನ ಹಾಡಿನಲ್ಲಿ ತಪ್ಪು ಕಂಡರೆ ಕ್ಷಮೆಯಿರಲಿ
ಯುವಕರು ಸಹ ಈ ಸಂಗೀತ ಸಂಪ್ರದಾಯವನ್ನು ಮುಂದುವರೆಸಿರುವುದರಿಂದಾಗಿ ಈ ಪರಂಪರೆಗೆ ಕೊನೆಯಾಗುವ ಭಯವಿಲ್ಲ.
“ಓ ಸೋಣಮಯಿನಾ,
ಸೂರ್ಯ ತನ್ನ
ಪ್ರಯಾಣ ಮುಂದುವರೆಸಲು ಸಜ್ಜಾಗಿರುವ…”
ಅನುವಾದ: ಶಂಕರ. ಎನ್. ಕೆಂಚನೂರು