ಜಲಿಯನ್ ವಾಲಾ ಬಾಗ್ ಘಟನೆ ಹೊಸ ರಾಷ್ಟ್ರೀಯ ಪ್ರಜ್ಞೆಯಲ್ಲಿ ಒಂದು ಮಹತ್ವದ ತಿರುವು. ಭಗತ್ ಸಿಂಗ್ ಕಥೆಯು ಅಲ್ಲಿಂದ ಆರಂಭವಾಯಿತು ಎಂದು ನಮ್ಮಲ್ಲಿ ಅನೇಕರು ಕೇಳುತ್ತಾ ಬೆಳೆದರು - ತನ್ನ10ನೇ ವಯಸ್ಸಿನಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಹಳ್ಳಿಗೆ ರಕ್ತ ತುಂಬಿದ ಮಣ್ಣನ್ನು ತುಂಬಿದ ಸಣ್ಣ ಬಾಟಲಿಯನ್ನು ತಂದಿದ್ದರು. ಆ ಮಣ್ಣನ್ನು ತನ್ನ ತಂಗಿಯೊಂದಿಗೆ ಸೇರಿ ತನ್ನ ಅಜ್ಜನ ಮನೆಯಲ್ಲಿದ್ದ ತೋಟಕ್ಕೆ ಹಾಕಿದರು. ನಂತರ, ಆ ಸ್ಥಳದಲ್ಲಿ ಅವರು ಪ್ರತಿವರ್ಷ ಹೂವುಗಳನ್ನು ಬೆಳೆಯುತ್ತಿದ್ದರು.
ಏಪ್ರಿಲ್ 13, 1919ರಂದು ನಡೆದ ಪಂಜಾಬಿನ ಅಮೃತಸರದಲ್ಲಿ ಸಾವಿರ ನಿರಾಯುಧರಾಗಿದ್ದ ನಾಗರಿಕರ ಹತ್ಯಾಕಾಂಡ (ಬ್ರಿಟಿಷರು 379 ಎಂದು ಹೇಳುತ್ತಾರೆ), ಅಪರಾಧಿಗಳ ಅಥವಾ ಅವರ ನಂತರದ ಸರ್ಕಾರಗಳ ಮನಸ್ಸಾಕ್ಷಿಯನ್ನು ಇಂದಿಗೂ ಮುಟ್ಟಿಲ್ಲ. ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಈ ವಾರ ತನ್ನ ಸಂಸತ್ತಿನಲ್ಲಿ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ – ಆದರೆ ಈ ಭಯಾನಕ ದೌರ್ಜನ್ಯಕ್ಕಾಗಿ ಕ್ಷಮೆ ಕೇಳಲಿಲ್ಲ.
ಜಲಿಯನ್ ವಾಲಾಬಾಗ್ಗೆ ಭೇಟಿ ನೀಡಿಯೂ ನೀವು ಮಾನಸಿಕವಾಗಿ ಅಲುಗಾಡದೆ ಉಳಿಯಲು ನೀವು ಬಹಳ ದೊಡ್ಡ ಅಸೂಕ್ಷ್ಮ ಮನಸ್ಥಿತಿ ಹೊಂದಿರಬೇಕು. 100 ವರ್ಷಗಳ ನಂತರ, ಆ ಉದ್ದೇಶಪೂರ್ವಕ ಹತ್ಯೆಯ ಕೂಗು ಆ ತೋಟದಲ್ಲಿ ಈಗಲೂ ಪ್ರತಿಧ್ವನಿಸುತ್ತದೆ. ಸುಮಾರು 35 ವರ್ಷಗಳ ಹಿಂದೆ, ನಾನು ಭೇಟಿ ನೀಡಿದಾಗ, ಹತ್ತಿರದ ಗೋಡೆಯ ಮೇಲೆ ಇದನ್ನು ಬರೆಯದೆ ಇರಲು ಸಾಧ್ಯವಾಗಲಿಲ್ಲ:
ಅವರು ನಮಗೆ ನಿರಾಯುಧರ ಮೇಲೆ ದಾಳಿ ಮಾಡಿದರು
ಜನಸಂದಣಿಯು ಚದುರಿಹೋಯಿತು
ಅವರು ತಮ್ಮ ಲಾಠಿ ಮತ್ತು ಬ್ಯಾಟನ್ಗಳನ್ನು ಬಳಸಿದರು
ನಮ್ಮ ಮೂಳೆಗಳು ಮುರಿದವು
ಅವರು ಗುಂಡು ಹಾರಿಸಿದರು
ಅನೇಕ ಜೀವಗಳು ಕುಸಿದು ಬಿದ್ದವು
ಆದರೆ ನಮ್ಮ ಆತ್ಮ ಕುಸಿಯಲಿಲ್ಲ
ಅವರ ಸಾಮ್ರಾಜ್ಯವು ಕುಸಿಯಿತು
ಅನುವಾದ: ಶಂಕರ ಎನ್. ಕೆಂಚನೂರು