ಉತ್ತರ ಮುಂಬೈನ ಅಂಬುಜವಾಡಿಯ ಸ್ಲಮ್ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳೊಂದಿಗೆ ಹೆಣಗಾಡುತ್ತಿದ್ದಾರೆ. ಲಾಕ್ಡೌನ್ ಮತ್ತು ಅದರ ನಂತರ ಅವರ ತಂದೆ ತಾಯಂದಿರು ಎದುರಿಸುತ್ತಿರುವ ಆದಾಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ದುಡಿಮೆಯಲ್ಲಿ ಸಹಾಯಕ್ಕೆ ನಿಲ್ಲಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ