ಸೈಯದ್ ಖುರ್ಷಿದ್ ಈ ಬಾರಿಯ ಬಜೆಟ್ ಕಡೆ ಹೆಚ್ಚು ಗಮನ ನೀಡಲಿಲ್ಲ. "ನಾನು ಸುದ್ದಿ ವಾಹಿನಿಯನ್ನು ನೋಡಲು ಸಹ ಪ್ರಯತ್ನಿಸಲಿಲ್ಲ" ಎಂದು 72 ವರ್ಷದ ಅವರು ಹೇಳುತ್ತಾರೆ. "ಅದರಲ್ಲಿ ಸತ್ಯ ಎಷ್ಟು ಮತ್ತು ಪ್ರಚಾರ ಎಷ್ಟು ಎನ್ನುವುದು ಯಾರಿಗೂ ತಿಳಿದಿಲ್ಲ."
ಪ್ರಸ್ತುತ ಬಜೆಟ್ ಮಂಡನೆಯಲ್ಲಿ ತೆರಿಗೆ ಸ್ಲ್ಯಾಬ್ ಗಳಲ್ಲಿನ ಬದಲಾವಣೆಗಳ ಬಗ್ಗೆ ಅವರು ಕೇಳಿದ್ದಾರೆ ಏಕೆಂದರೆ ಈ ಕುರಿತು ಅವರಿಗೆ ಯಾರೋ ಹೇಳಿದ್ದರು . "ಆದರೆ ನನ್ನ ಮೊಹಲ್ಲಾದಲ್ಲಿ ಅದರಿಂದ ಪ್ರಯೋಜನ ಪಡೆಯಲಿರುವ ಒಬ್ಬನೇ ಒಬ್ಬ ವ್ಯಕ್ತಿಯ ಬಗ್ಗೆ ನನಗೆ ತಿಳಿದಿಲ್ಲ" ಎಂದು ಅವರು ನಗುತ್ತಾ ಹೇಳುತ್ತಾರೆ. "ಹಮ್ ಅಪ್ನಾ ಕಮಾತೇ ̧ಹೈ ಔರ್ ಖಾತೇ ಹೈ [ನಾನು ನನ್ನ ಅನ್ನವನ್ನು ನಾನೇ ದುಡಿದು ತಿನ್ನುತ್ತೇನೆ]."
ಸೈಯದ್ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ಪಟ್ಟಣದಲ್ಲಿ 60 ವರ್ಷಗಳಿಂದ ಟೈಲರ್ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂದೆಯಿಂದ ಈ ಕೆಲಸವನ್ನು ಕಲಿತಾಗ ಅವರಿಗೆ ಕೇವಲ ಎಂಟು ವರ್ಷ. ಆದರೆ, ಅವರ ವ್ಯವಹಾರವು ಮೊದಲಿನಷ್ಟು ಲಾಭದಾಯಕವಾಗಿಲ್ಲ. "ಯುವ ಪೀಳಿಗೆಯು ರೆಡಿಮೇಡ್ ಬಟ್ಟೆಗಳನ್ನು ಖರೀದಿಸುತ್ತದೆ" ಎಂದು ಅವರು ವಿವರಿಸುತ್ತಾರೆ.
![](/media/images/02a-IMG20250203145616-PMN-Workers_like_us_.max-1400x1120.jpg)
![](/media/images/02b-IMG20250203145628-PMN-Workers_like_us_.max-1400x1120.jpg)
ಅವರ ಆರು ಮಕ್ಕಳಲ್ಲಿ - 4 ಗಂಡು ಮಕ್ಕಳು ಮತ್ತು 2 ಹೆಣ್ಣುಮಕ್ಕಳು - ಒಬ್ಬ ಮಗ ಮಾತ್ರ ಅವರೊಂದಿಗೆ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ, ಉಳಿದವರು ಸ್ಥಳೀಯವಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡು ತ್ತಾರೆ. ಅವರ ಹೆಣ್ಣುಮಕ್ಕ ಳಿಗೆ ಮದುವೆಯಾಗಿ ದ್ದು, ಅವರು ಗೃಹಿಣಿಯರು
ಒಂದು ಕೋಣೆಯ ಅಂಗಡಿಯಲ್ಲಿ ಕೆಲಸ ಮಾಡುವ ಸೈಯದ್, ತನ್ನ ಬಳಿ ಕೆಲಸ ಮಾಡುವ ಒಂದೆರಡು ಕಾರ್ಮಿಕರಿಗೆ ಸಂಬಳ ನೀಡಿದ ನಂತರ ತಿಂಗಳಿಗೆ ಸುಮಾರು 20,000 ರೂ.ಗಳನ್ನು ಸಂಪಾದಿಸುತ್ತಾರೆ. "ಅದೃಷ್ಟವಶಾತ್ ನನ್ನ ತಂದೆ ಈ ಅಂಗಡಿಯನ್ನು ಖರೀದಿಸಿದರು ಹೀಗಾಗಿ ನಾನು ಬಾಡಿಗೆ ಕಟ್ಟಬೇಕಿಲ್ಲ. ಇಲ್ಲದಿದ್ದರೆ ಸಂಪಾದನೆ ಅಷ್ಟು ಇರುತ್ತಿರಲಿಲ್ಲ. ನಾನು ಹೆಚ್ಚು ಓದಿಲ್ಲ, ಹೀಗಾಗಿ ಅಷ್ಟು ಓದಲು ಬರುವುದಿಲ್ಲ" ಎಂದು ಅವರು ಸೂಕ್ಷ್ಮವಾಗಿ ಹೊಲಿಯುತ್ತಿರುವ ಬಟ್ಟೆಯಿಂದ ಕಣ್ಣುಗಳನ್ನು ತೆಗೆಯದೆ ಹೇಳುತ್ತಾರೆ.
ಈ ಬಾರಿಯ ಬಜೆಟ್ಟಿನಲ್ಲಿ ಕಡಿಮೆ ಆದಾಯ ಗಳಿಸುವ ಜನರ ಕುರಿತು ಗಮನಹರಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ, ಆದರೆ ಇದು ಒಂದು ನಿರ್ದಿಷ್ಟ ವರ್ಗದ ಜನರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ಸೈಯದ್ ಹೇಳುತ್ತಾರೆ. "ನಮ್ಮಂತಹ ಕಾರ್ಮಿಕರಿಗೆ ಏನೂ ಸಿಗುವುದಿಲ್ಲ."
ಅನುವಾದ: ಶಂಕರ. ಎನ್. ಕೆಂಚನೂರು