ಅವರು ಈಗಾಗಲೇ ಸುಮಾರು 20 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿದ್ದರು, ಆದರೆ ಇನ್ನೂ ಅವರ ಶಕ್ತಿ ಕಡಿಮೆಯಾಗಿರಲಿಲ್ಲ, ಒಂದೇ ಶೈಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರಲ್ಲಿ ಒಂದು ಸ್ವಲ್ಪ ಕೂಡ ಸುಸ್ತು ಕಾಣಿಸಿರಲಿಲ್ಲ. ಅವರು ಅವರಿಗೆ ತಕ್ಕನಾದ ಸರಿಯಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ಧರಿಸಿದ್ದರು ಅವು ಸ್ವಲ್ಪ ಹಾಳಾದ ಬಟ್ಟೆಗಳು. ತಾವು ಹೊರಟ ಪ್ರದೇಶಕ್ಕೆ ತಲುಪುತ್ತಿದ್ದರೇ ಎಂಬುದು ಇನ್ನೊಂದು ವಿಷಯ. ಅವರು ಬೃಹತ್ ಕೋರಾಪುಟ್ ಪ್ರದೇಶದಲ್ಲಿ ಮಲ್ಕನ್‌ಗಿರಿ ಜಿಲ್ಲೆಯ ವಾರದ ಸಂತೆ ಅಥವಾ ಗ್ರಾಮೀಣ ಮಾರುಕಟ್ಟೆಗೆ ಹೋಗುತ್ತಿದ್ದರು. ದಾರಿ ಮಧ್ಯದಲ್ಲಿ ಬಹುಶಃ ಹೀಗೂ ಆಗಬಹುದು, ಒಬ್ಬ ಸ್ಥಳೀಯ ವ್ಯಾಪಾರಿ - ಅಥವಾ ಸಾಲ ಕೊಟ್ಟವ - ಮಾರ್ಗದಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಬಹುದು ಮತ್ತು ಅವರು ಉತ್ಪಾದಿಸಿದ ಸರಕನ್ನು ಕಡಿಮೆ ಮೊತ್ತಕ್ಕೆ ಖರೀದಿಸಲೂಬಹುದು. ನಂತರ ಅವರು ಅದನ್ನು ಅವನಿಗಾಗಿ ಸಂತೆಗೆ ಹೊತ್ತುಕೊಂಡು ಹೋಗುವ ಪರಿಸ್ಥಿತಿಯೂ ಬರಬಹುದು.

ನಾಲ್ಕು ಜನರ ಗುಂಪೊಂದು ನಿಧಾನವಾಗಿ ಮಾತನಾಡಲು ನನ್ನ ಹತ್ತಿರ ಬಂದು ನಿಂತಿತು. ಅವರು ಕುಂಬಾರರು ಅಥವಾ ಸಾಂಪ್ರದಾಯಿಕವಾಗಿ ಮಡಿಕೆ ಮಾಡುವವರಾಗಿರಲಿಲ್ಲ. ಅವರು ಧುರುಗಳು, ಅವರು ಈ ಪ್ರದೇಶದ ಆದಿವಾಸಿ ಗುಂಪು ಅವರನ್ನು ಧುರುಗಳು ಎನ್ನುತ್ತಾರೆ. ನನ್ನೊಂದಿಗೆ ಮಾತನಾಡಿದ ಇಬ್ಬರು, ಮಾಝಿ ಮತ್ತು ನೋಕುಲ್, ಕುಂಬಾರಿಕೆ ತಮ್ಮ ಸಾಂಪ್ರದಾಯಿಕ ಉದ್ಯೋಗವಲ್ಲ ಎಂದು ಹೇಳಿದರು. ಅವರು ಅದನ್ನು ಯಾವುದೋ ಲಾಭೋದ್ದೇಶ ರಹಿತ ಸಂಸ್ಥೆಯು  ನಡೆಸಿದ ಕಾರ್ಯಾಗಾರ ಶಿಬಿರಗಳಲ್ಲಿ ಕಲಿತ ಹಾಗೆ ಕಾಣಿಸುತ್ತಿತ್ತು. ವ್ಯವಸಾಯವು ಉತ್ತಮವಾಗಿ ನಡೆಯದ ಕಾರಣ, ಅವರು ಮಡಕೆಗಳನ್ನು ತಯಾರಿಸುವ ನಿರ್ಧಾರ ತೆಗೆದುಕೊಂಡಿರಬಹುದು ಮತ್ತು ಅವರ ಉತ್ಪನ್ನಗಳು ಸರಳವಾಗಿದ್ದವು, ಹಾಗೂ ನಿಜವಾಗಿಯೂ ಉತ್ತಮವಾದವು, ಕಲಾತ್ಮಕವೂ ಆಗಿದ್ದವು. ಆದರೆ, ಅಲ್ಲಿ ಕೆಲವರು ಇವರ ಉತ್ಪನ್ನಗಳು ಚೆನ್ನಾಗಿಲ್ಲ ಎಂದು ಹೇಳುತ್ತಿದ್ದರು. ಈ ಪ್ಲಾಸ್ಟಿಕ್‌ಗೆ ಸಮನಾಗಿ ಯಾವುದೇ ಬೇರೆ ರೀತಿಯ ಉತ್ಪನ್ನಗಳು ಇಲ್ಲವೆನುವಷ್ಟು, ಬಹಳ ವರ್ಷಗಳಿಂದಲೇ ಪ್ಲಾಸ್ಟಿಕ್‌ ಎಲ್ಲಾ ಕಡೆಗಳಲ್ಲಿಯೂ ಶಾಶ್ವತ ರೂಪದಲ್ಲಿ ಬಳಕೆಯಲ್ಲಿದೆ. 1994ಕ್ಕಿಂತ ಹಿಂದಿನಿಂದಲೇ ಜನರು ಪ್ಲಾಸ್ಟಿಕ್ ಮಡಕೆಗಳು/ಪಾತ್ರೆಗಳು ಮತ್ತು ಬಕೆಟ್‌ಗಳನ್ನು ಬಳಸುತ್ತಿದ್ದಾರೆ” ಎಂದು ನೋಕುಲ್‌ ದೂಷಿಸುತ್ತಲೇ ಹೇಳಿದರು.

"ಹೌದು," ಎಂದು ಮಾಜಿಃ ಕೂಡಾ ಹೇಳಿದರು. "ಸಾಹುಕಾರ ನಾವು ಉತ್ಪಾದಿಸಿದ ಸರಕನ್ನು ಅವನು ನಿಗದಿಪಡಿಸುವ ಕಡಿಮೆ ಬೆಲೆಗೆ ತೆಗೆದುಕೊಳ್ಳುತ್ತಾನೆ ಎಂಬುದು ನಿಜ. ಆದರೆ ನಂತರ, ನಾವು ಅವನಿಗೆ ಹಣವನ್ನು ಕೊಡಬೇಕಾಗುತ್ತದೆ. ಸಾಹುಕಾರ ತಾನು ಹೆಚ್ಚು ಶ್ರಮವಿಲ್ಲದೆ ಮಡಕೆಗಳನ್ನು ವಾರದ ಸಂತೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಾನೆ. ಅವನಿಗೆ ಮಾರ್ಗದರ್ಶನ ಕೊಡಲು ಅಲ್ಲಿ ಇತರ ಆದಿವಾಸಿಗಳು ಇರುತ್ತಾರೆ. ಈ ಪರಿಸ್ಥಿತಿ ಇದ್ದರೂ ಕೆಲವು ಸಂತೆಗಳಲ್ಲಿ  ಮೂಲ ತಯಾರಕರೇ ತಮ್ಮ ವಸ್ತುಗಳನ್ನು ಮಾರಾಟ ಮಾಡುವುದನ್ನು ಕಾಣಬಹುದು. ಹಳ್ಳಿಗಳ ವಿವಿಧ ಸಮೂಹಗಳು ವಾರದ ವಿವಿಧ ದಿನಗಳಲ್ಲಿ ತಮ್ಮ ಮಾರುಕಟ್ಟೆಗಳನ್ನು ತೆರೆಯುತ್ತಾರೆ. ಆದ್ದರಿಂದ ಪ್ರತಿ ಸ್ಥಳದಲ್ಲಿ ಸಂತೆ ವಾರಕ್ಕೆ ಒಂದುಬಾರಿ ನಡೆದರೂ, ಪ್ರತಿದಿನ ಎಲ್ಲೋ ಒಂದು ಪ್ರದೇಶದಲ್ಲಿ ಸಂತೆ ನಡೆಯುತ್ತಲೇ ಇರುತ್ತದೆ.

PHOTO • P. Sainath

ಧುರುಗಳು ಇತರ ಮೇಕ್-ಇನ್-ಇಂಡಿಯಾ ಸಮಸ್ಯೆಗಳನ್ನು ಹೊಂದಿದ್ದರು. ಭಾರತದಲ್ಲಿನ ಪರಿಶಿಷ್ಟ ಪಂಗಡಗಳ ಅಧಿಕೃತ ಅಂಕಿಅಂಶಗಳ ವಿವರ ಮತ್ತು ಪರಿಶಿಷ್ಟ ಪಂಗಡಗಳ ಒಡಿಶಾ/ಒರಿಸ್ಸಾ ರಾಜ್ಯ ಪಟ್ಟಿ ಎರಡರಲ್ಲೂ ಬುಡಕಟ್ಟು ಜನರ ಹೆಸರನ್ನು ಧುರುಬಾ,ಧುರ್ವಾ ಮತ್ತು ಧುರುವಾ ಎಂದು ಉಚ್ಚರಿಸಲಾಗುತ್ತದೆ. ನಾನು ನೋಡಿದ ಹಾಗೆ ಕೆಲವು ಶಾಲಾ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳಲ್ಲಿ, ಬುಡಕಟ್ಟಿನ ಹೆಸರನ್ನು ಧುರುವಾ ಎಂದು ಬರೆಯಲಾಗಿದೆ. ಇದು ಅವರಿಗೆ ಸರ್ಕಾರದಿಂದ ಪಡೆದುಕೊಳ್ಳಬಹುದಾದ ಪ್ರಯೋಜನಗಳನ್ನು ಕಳೆದುಕೊಳ್ಳಲು ಕಾರಣವಾಯಿತು, ಏಕೆಂದರೆ ಕೆಳಮಟ್ಟದ ಅಧಿಕಾರಶಾಹಿಗಳು ಆ ಹೆಸರಿನಿಂದ ಪಟ್ಟಿ ಮಾಡಲಾದ ಯಾವುದೇ ಬುಡಕಟ್ಟು ಇಲ್ಲ ಎಂದು ಅವರಿಗೆ ತಿಳಿಸಿದ್ದರು. ಈ ತೊಂದರೆಯನ್ನು ಸರಿಪಡಿಸಲು ಬಹಳ ಸಮಯ ಹಿಡಿಯಿತು.

ಹಳ್ಳಿಯ ವಾರದ ಸಂತೆ ಒಂದು ಪ್ರದೇಶದ ಆರ್ಥಿಕತೆಯ ಗಮನಾರ್ಹ ಸೂಕ್ಷ್ಮರೂಪವನ್ನು ಪ್ರಸ್ತುತಪಡಿಸುತ್ತದೆ. ಆ ಪ್ರದೇಶದಲ್ಲಿ ಉತ್ಪಾದಿಸಲಾದ ಹೆಚ್ಚಿನ ವಸ್ತುಗಳನ್ನು ಅಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಅಲ್ಲಿ ನಡೆಯುವ ಎಲ್ಲಾ ವಹಿವಾಟುಗಳು ಅಲ್ಲಿಯ ಜನರ ಚಟುವಟಿಕೆ, ವರ್ಣಮಯ ಜೀವನಕ್ಕೆ ಸೀಮಿತಗೊಂಡಿರುತ್ತವೆ. ನಮ್ಮ ಸಣ್ಣ ಸಂಭಾಷಣೆ ಮುಗಿಯಿತು, ನಾಲ್ಕು ಜನರು ತಮ್ಮ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಕ್ಕಾಗಿ ನನಗೆ ಕೃತಜ್ಞತೆ ಸಲ್ಲಿಸಿದ ನಂತರ (ಛಾಯಾಚಿತ್ರಕ್ಕಾಗಿ ಅವರು ಅವರ ರೀತಿಯಲ್ಲಿಯೇ ಪೋಸ್ ಕೊಡಲು ಬಯಸಿದರು) ನಾನು ಅವರು ಹೋಗುವುದನ್ನು ಸ್ವಲ್ಪ ಆಶ್ಚರ್ಯದಿಂದ ನೋಡಿದೆ. ಅವರ ಸುಂದರವಾದ, ಆಕರ್ಷಕವಾದ ನಡಿಗೆ ಒಂದೇ ತೆರನಾಗಿತ್ತು ಪರಸ್ಪರ ಹೋಲಿಕೆಯಾಗುತ್ತಿತ್ತು. ಯಾರಾದರೂ ಮಡಕೆಗಳನ್ನು ಹೊತ್ತು ನಡೆಯುವಾಗ ಹೆಜ್ಜೆ ತಪ್ಪಿ ಅಥವಾ ಎಡವಿ ಬಿದ್ದರೆ, ಒಡೆದ ಮಡಕೆಗಳ ರಾಶಿಯೇ ಬೀಳುತ್ತದೆ. ಈ ಭಯ ನನಗೆ ಮಲ್ಕನ್‌ಗಿರಿಯಲ್ಲಿ ಆಗಿದೆ- ಆದರೆ ಸಧ್ಯ ಆ ಪರಿಸ್ಥಿತಿಯನ್ನು ದೇವರ ದಯೆಯಿಂದ ನಾನು ನೋಡಿಲ್ಲ.

ಈ ತುಣುಕಿನ ಚಿಕ್ಕ ಆವೃತ್ತಿಯು ಮೊದಲು ಸೆಪ್ಟೆಂಬರ್ 1, 1995ರಂದು ದಿ ಹಿಂದೂ ಬಿಸಿನೆಸ್‌ಲೈನ್‌ನಲ್ಲಿ ಪ್ರಕಟಗೊಂಡಿತ್ತು.

ಅನುವಾದ: ಅಶ್ವಿನಿ ಬಿ .

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Ashwini B. Vaddinagadde

Ashwini B. is a Bengaluru based accountant and translator and writer by passion.

Other stories by Ashwini B. Vaddinagadde