ಮಮತಾ ಪರೇದ್ ಪರಿಯಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದರು. ಅಪರೂಪದ ಪ್ರತಿಭೆ ಮತ್ತು ಬದ್ಧತೆಯನ್ನು ಹೊಂದಿದ್ದ ಯುವ ಪತ್ರಕರ್ತರಾಗಿದ್ದ ಅವರು ಡಿಸೆಂಬರ್ 11, 2022ರಂದು ದುರಂತ ಸಾವನ್ನು ಕಂಡರು.

ಅವರು ನಮ್ಮ ಅಗಲಿ ಇಂದಿಗೆ ಒಂದು ವರ್ಷ. ನಾವು ಅವರ ನೆನಪಿನಲ್ಲಿ ವಿಶೇಷ ಪಾಡ್‌ಕಾಸ್ಟ್‌ ಒಂದನ್ನು ನಿಮಗಾಗಿ ತಂದಿದ್ದೇವೆ. ಇದರಲ್ಲಿ ಅವರು ತನ್ನ ಜನರ ಕುರಿತಾಗಿ ಮಾತನಾಡಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ಆದಿವಾಸಿ ಸಮುದಾಯವಾದ ವಾರ್ಲಿ ಸಮುದಾಯಕ್ಕೆ ಸೇರಿದವರಾದ ಮಮತಾ ಸಾಯುವ ಕೆಲವು ತಿಂಗಳ ಮೊದಲು ಈ ಆಡಿಯೋ ರೆಕಾರ್ಡ್‌ ಮಾಡಿದ್ದರು.

ಈ ವರದಿಯಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಹಕ್ಕುಗಳನ್ನು ಪಡೆಯಲು ನಡೆಸುತ್ತಿದ್ದ ಹೋರಾಟಗಳ ಬಗ್ಗೆ ಬರೆದಿದ್ದಾರೆ. ಧೈರ್ಯಶಾಲಿ ಪತ್ರಕರ್ತರಾಗಿದ್ದ ಅವರು ಸಣ್ಣ ಕುಗ್ರಾಮಗಳಿಂದ ವರದಿ ಮಾಡಿದ್ದರು. ಅಂತಹ ಹಳ್ಳಿಗಳಲ್ಲಿ ಕೆಲವನ್ನು ಭೂಪಟದಲ್ಲೂ ನೋಡಲು ಸಾಧ್ಯವಿಲ್ಲ. ಹಸಿವು, ಬಾಲಕಾರ್ಮಿಕತೆ, ಜೀತದಾಳು, ಶಾಲಾ ಶಿಕ್ಷಣದ ಲಭ್ಯತೆ, ಭೂ ಹಕ್ಕುಗಳು, ಸ್ಥಳಾಂತರ, ಜೀವನೋಪಾಯ ಮುಂತಾದ ವಿಷಯಗಳ ಕುರಿತು ವರದಿ ಮಾಡುವಲ್ಲಿ ಅವರು ತೀವ್ರ ಬದ್ಧತೆಯನ್ನು ತೋರಿಸಿದ್ದರು.


ಈ ಸಂಚಿಕೆಯಲ್ಲಿ, ಮಮತಾ ತನ್ನ ಊರಾದ ನಿಂಬಾವಳಿಯಲ್ಲಿ ನಡೆದ ಅನ್ಯಾಯದ ಕಥೆಯನ್ನು ವಿವರಿಸಿದ್ದಾರೆ . ಮುಂಬೈ-ವಡೋದರಾ ಎಕ್ಸ್‌ಪ್ರೆಸ್‌ ವೇ ಯೋಜನೆಯ ನೀರಿನ ಯೋಜನೆಗಾಗಿ ಸರ್ಕಾರಿ ಅಧಿಕಾರಿಗಳು ಒಳ್ಳೆಯತನದ ಸೋಗಿನಲ್ಲಿ ಗ್ರಾಮಸ್ಥರನ್ನು ಪಿತ್ರಾರ್ಜಿತ ಭೂಮಿಯನ್ನು ಬಿಟ್ಟುಕೊಡುವಂತೆ ಹೇಗೆ ಮೋಸಗೊಳಿಸಿದರು ಎಂಬುದನ್ನು ಅವರು ವಿವರಿಸುತ್ತಾರೆ. ಯೋಜನೆಯು ಅವರ ಹಳ್ಳಿಯನ್ನು ಹಾಳುಗೆಡವಿತು, ಮತ್ತು ಅದಕ್ಕೆ ನೀಡಲಾದ ಪರಿಹಾರವು ಸಂಪೂರ್ಣವಾಗಿ ಅಸಮರ್ಪಕವಾಗಿತ್ತು.

ನಮಗೆ ಪರಿಯಲ್ಲಿ, ಮಮತಾರನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಕೆಲಸ ಮಾಡಲು ಬಹಳಷ್ಟು ಅವಕಾಶ ಸಿಕ್ಕಿತು; ಪರಿಯಲ್ಲಿ ಪ್ರಕಟವಾದ ಅವರ ಎಲ್ಲಾ ಒಂಬತ್ತು ವರದಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮಮತಾ ತನ್ನ ಬರವಣಿಗೆ ಮತ್ತು ಸಮುದಾಯದೊಂದಿಗಿನ ಕೆಲಸಗಳಲ್ಲಿ ಈಗಲೂ ಬದುಕಿದ್ದಾರೆ. ಅವರ ನೆನಪು ನಮ್ಮನ್ನು ಕಾಡಲಿದೆ.

ಈ ಪಾಡ್‌ಕಾಸ್ಟ್‌ ನಿರ್ಮಾಣದಲ್ಲಿ ಸಹಾಯ ಮಾಡಿದ ಹಿಮಾಂಶು ಸೈಕಿಯಾ ಅವರಿಗೆ ಧನ್ಯವಾದಗಳು.

ಈ ವರದಿಯಲ್ಲಿ ಬಳಸಲಾಗಿರುವ ಮುಖ್ಯ ಚಿತ್ರವನ್ನು ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ವೆಬ್‌ಸೈಟಿನಿಂದ ಪಡೆಯಲಾಗಿದೆ. ಮಮತಾ ಇದರ ಫೆಲೋಶಿಪ್‌ ಕೂಡಾ ಪಡೆದಿದ್ದರು. ಚಿತ್ರವನ್ನು ಬಳಸಲು ಅನುಮತಿ ನೀಡಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದವನ್ನು ತಿಳಿಸುತ್ತೇವೆ.

ಅನುವಾದ: ಶಂಕರ. ಎನ್. ಕೆಂಚನೂರು

Aakanksha

আকাঙ্ক্ষা পিপলস আর্কাইভ অফ রুরাল ইন্ডিয়ার একজন সাংবাদিক এবং ফটোগ্রাফার। পারি'র এডুকেশন বিভাগে কনটেন্ট সম্পাদক রূপে তিনি গ্রামীণ এলাকার শিক্ষার্থীদের তাদের চারপাশের নানান বিষয় নথিভুক্ত করতে প্রশিক্ষণ দেন।

Other stories by Aakanksha
Editors : Medha Kale

পুণে নিবাসী মেধা কালে নারী এবং স্বাস্থ্য - এই বিষয়গুলির উপর কাজ করেন। তিনি পারির মারাঠি অনুবাদ সম্পাদক।

Other stories by মেধা কালে
Editors : Vishaka George

বিশাখা জর্জ পারি’র বরিষ্ঠ সম্পাদক। জীবিকা এবং পরিবেশ-সংক্রান্ত বিষয় নিয়ে রিপোর্ট করেন। পারি’র সোশ্যাল মিডিয়া কার্যকলাপ সামলানোর পাশাপাশি বিশাখা পারি-র প্রতিবেদনগুলি শ্রেণিকক্ষে পৌঁছানো এবং শিক্ষার্থীদের নিজেদের চারপাশের নানা সমস্যা নিয়ে প্রতিবেদন তৈরি করতে উৎসাহ দেওয়ার লক্ষ্যে শিক্ষা বিভাগে কাজ করেন।

Other stories by বিশাখা জর্জ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru