ಗ್ರಾಮೀಣ ಭಾರತೀಯರು ಸ್ವಾತಂತ್ರ್ಯ ಹೋರಾಟದ ಕಾಲಾಳುಗಳಾಗಿದ್ದರು ಮತ್ತು ಇದುವರೆಗೆ ಕಂಡ ಕೆಲವು ಶ್ರೇಷ್ಠ ವಸಾಹತು ವಿರೋಧಿ ದಂಗೆಗಳ ನಾಯಕರಾಗಿದ್ದರು. ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಲು ಅವರಲ್ಲಿ ಅಸಂಖ್ಯಾತ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು. ಮತ್ತು ಸ್ವತಂತ್ರ ಭಾರತವನ್ನು ನೋಡಲು ಬಹಳ ಸಂಕಟಗಳನ್ನು ಎದುರಿಸಿ ಬದುಕಿದ್ದ ಅನೇಕರನ್ನು ಶೀಘ್ರದಲ್ಲೇ ಮರೆತುಬಿಡಲಾಯಿತು. 1990ರ ದಶಕದಿಂದ, ನಾನು ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರ ಜೀವನದ ಕತೆಗಳನ್ನು ದಾಖಲಿಸಿದೆ. ಅವುಗಳಲ್ಲಿ ಐದು ಕಥೆಗಳನ್ನು ಇಲ್ಲಿ ನೀವು ಓದಬಹುದು:
‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ
ಒಡಿಶಾದ ನುವಾಪಾಡಾದಲ್ಲಿ ದೇಮತಿ ಡೀ ಸಬರ್ ಮತ್ತು ಅವರ ಸ್ನೇಹಿತರು ಲಾಠಿಗಳೊಂದಿಗೆ ಕೋವಿಗಳನ್ನು ಹಿಡಿದಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಎದುರಿಸಿದ್ದರು
ಆಗಸ್ಟ್ 14, 2015 | ಪಿ. ಸಾಯಿನಾಥ್
ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1
ಬಡ ಒಡಿಯಾ ಗ್ರಾಮಸ್ಥರು ಸಂಬಲ್ಪುರ್ ನ್ಯಾಯಾಲಯವನ್ನು ವಶಪಡಿಸಿಕೊಂಡು ನಡೆಸಲು ಪ್ರಯತ್ನಿಸಿದಾಗ
ಜುಲೈ 22, 2014 | ಪಿ.ಸಾಯಿನಾಥ್
ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2
‘ಸ್ವಾತಂತ್ರ್ಯ ಗ್ರಾಮ’ ಎಂಬ ಹೆಸರನ್ನು ಗಳಿಸಿದ ಒಡಿಶಾದ ಪುಟ್ಟ ಗ್ರಾಮ
ಜುಲೈ 22, 2014 | ಪಿ.ಸಾಯಿನಾಥ್
ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ
ಬಡಪಾಯಿ ಐಎನ್ಎ ಸ್ವಾತಂತ್ರ್ಯ ಹೋರಾಟಗಾರ್ತಿ, ಅವರ ರಾಷ್ಟ್ರದ ಏಕೈಕ ಬೇಡಿಕೆ ಮಾನ್ಯತೆ. ಇದಕ್ಕಾಗಿ ಈ ಹಿರಿಯ ಯೋಧೆಯ ಹೋರಾಟ ಸ್ವಾತಂತ್ರ್ಯ ದೊರೆತ ಆರು ವರ್ಷಗಳ ನಂತರವೂ ಮುಂದುವರೆಯಿತು
ಆಗಸ್ಟ್ 5, 2015 | ಪಿ. ಸಾಯಿನಾಥ್
ಒಂಬತ್ತು ದಶಕಗಳ ಅಹಿಂಸೆ
ಬಾಜಿ ಮೊಹಮ್ಮದ್, ಸ್ವಾತಂತ್ರ್ಯ ದೊರೆತ 60 ವರ್ಷಗಳ ನಂತರವೂ ಅವರ ಅಹಿಂಸಾತ್ಮಕ ಹೋರಾಟಗಳು ಮುಂದುವರೆದಿದ್ದವು
ಆಗಸ್ಟ್ 14, 2015 | ಪಿ.ಸಾಯಿನಾಥ್
ಇವುಗಳ ಜೊತೆಯಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಮೊದಲು ಪ್ರಕಟವಾದ ಐದು ಲೇಖನಗಳ ಒಂದು ಗುಚ್ಛವನ್ನು ಹೆಚ್ಚಿನ ಛಾಯಾಚಿತ್ರಗಳೊಂದಿಗೆ ಇಲ್ಲಿ ಮರು ಪ್ರಕಟಣೆ ಮಾಡಲಾಗಿದೆ. ಆ ‘ಮರೆತುಹೋದ ಸ್ವಾತಂತ್ರ್ಯ ಹೋರಾಟಗಳು’ ಸರಣಿಯು ದೊಡ್ಡ ದಂಗೆಗಳ ತೊಟ್ಟಿಲುಗಳಾಗಿದ್ದ ಹಳ್ಳಿಗಳ ಸುತ್ತಲೂ ಹೆಣೆಯಲ್ಪಟ್ಟಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟವು ನಗರ ಗಣ್ಯರ ಗುಂಪಿನ ವಿಷಯವಲ್ಲ. ಗ್ರಾಮೀಣ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಒಂದಕ್ಕಿಂತ ಹೆಚ್ಚು ರೀತಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಉದಾಹರಣೆಗೆ, 1857ರ ಅನೇಕ ಹೋರಾಟಗಳು ಹಳ್ಳಿಗಳಲ್ಲಿ ಆರಂಭಗೊಂಡವು, ಅದೇ ಸಮಯದಲ್ಲಿ ಮುಂಬೈ ಮತ್ತು ಕೋಲ್ಕತ್ತಾದ ಗಣ್ಯರು ಬ್ರಿಟಿಷರ ಯಶಸ್ಸಿಗೆಂದು ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. 1997ರಲ್ಲಿ, ಸ್ವಾತಂತ್ರ್ಯಕ್ಕೆ 50 ವರ್ಷಗಳು ತುಂಬಿದ ಸಮಯದಲ್ಲಿ, ಈ ಕಥೆಗಳಿಗಾಗಿ ನಾನು ಆ ಕೆಲವು ಹಳ್ಳಿಗಳಿಗೆ ತೆರಳಿದ್ದೆ:
ಶೇರ್ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ
1942ರಲ್ಲಿ ಧ್ವಜವನ್ನು ಹಾರಿಸಿ ಅದಕ್ಕಾಗಿ ಬೆಲೆ ತೆತ್ತ ಉತ್ತರ ಪ್ರದೇಶ ಗ್ರಾಮ
ಆಗಸ್ಟ್ 14, 2015 | ಪಿ. ಸಾಯಿನಾಥ್
ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ
ಅಲ್ಲೂರಿ ಸೀತಾರಾಮರಾಜು ಆಂಧ್ರದಲ್ಲಿನ ರಾಂಪಾದಿಂದ, ವಸಾಹತುಶಾಹಿ ವಿರೋಧಿ ದಂಗೆಗಳಲ್ಲಿ ಒಂದನ್ನು ಮುನ್ನಡೆಸಿದರು
ಆಗಸ್ಟ್ 14, 2015 | ಪಿ.ಸಾಯಿನಾಥ್
ಸೋನಾಖಾನ್: ವೀರ್ ನಾರಾಯಣ್ ಎರಡು ಬಾರಿ ನಿಧನರಾದಾಗ
ಛತ್ತೀಸ್ಗಢದಲ್ಲಿ, ವೀರ್ ನಾರಾಯಣ್ ಸಿಂಗ್ ಯಾವುದೇ ದಾನವನ್ನು ಬಯಸಲಿಲ್ಲ, ಆದರೆ ನ್ಯಾಯಕ್ಕಾಗಿ ಹೋರಾಡಲು ಅವರ ಜೀವನವನ್ನೇ ನೀಡಿದರು
ಆಗಸ್ಟ್ 14, 2015 | ಪಿ. ಸಾಯಿನಾಥ್
ಕಲ್ಲಿಯಶ್ಶೆರಿ: ಸುಮುಕನ್ ಅವರನ್ನು ಹುಡುಕುತ್ತಾ
ಬ್ರಿಟಿಷರು, ಸ್ಥಳೀಯ ಭೂಮಾಲೀಕರು ಮತ್ತು ಜಾತಿಗಳ ವಿರುದ್ಧ ಹೋರಾಡುವ ಮೂಲಕ, ಎಲ್ಲಾ ರಂಗಗಳಲ್ಲಿ ಹೋರಾಡಿದ ಗ್ರಾಮ
ಆಗಸ್ಟ್ 14, 2015 | ಪಿ.ಸಾಯಿನಾಥ್
ಕಲ್ಲಿಯಶ್ಶೆರಿ: 50ನೇ ವರ್ಷದಲ್ಲೂ ಹೋರಾಟ
ಕೇರಳದ ಕಮ್ಯುನಿಸ್ಟರಿಗೆ ಸರ್ಕಾರದಿಂದ ತಪ್ಪಿಸಿಕೊಳ್ಳಲು ಬೇಟೆಗಾರರ ದೇವರು ಆಶ್ರಯ ನೀಡಿದಾಗ
ಆಗಸ್ಟ್ 14, 2015 | ಪಿ. ಸಾಯಿನಾಥ್
ʼಪರಿʼ ತಮ್ಮ 90ರ ಹರೆಯದಲ್ಲಿರುವ ಕೊನೆಯ ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕುವ ಮತ್ತು ದಾಖಲಿಸುವ ಪ್ರಯತ್ನವನ್ನು ಮುಂದುವರಿಸಲಿದೆ.
ಅನುವಾದ: ಶಂಕರ ಎನ್. ಕೆಂಚನೂರು