ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಕಾರಣ, ಮುರುಕಲು ಗುಡಿಸಲಿನಲ್ಲಿ ಪ್ರತ್ಯೇಕ ವಾಸದಲ್ಲಿದ್ದ ಪರ್ಧಿಗಳ ಶೋಚನೀಯ ಸ್ಥಿತಿ
ಪುಣೆ ಜಿಲ್ಲೆಯಲ್ಲಿನ ಆದಿವಾಸಿಗಳ ಈ ವಾಸಸ್ಥಳದಲ್ಲಿ, ಕೋವಿಡ್ ಖಾಯಿಲೆಯ ಗುಣಲಕ್ಷಣಗಳಿರುವ ವ್ಯಕ್ತಿಗಳು ವಿದ್ಯುಚ್ಛಕ್ತಿ, ನೀರು ಹಾಗೂ ಸಾಕಷ್ಟು ದಿನಸಿಯ ಸೌಲಭ್ಯವಿಲ್ಲದ ಒಣಹುಲ್ಲಿನ ಗುಡಿಸಲುಗಳಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಮುಖಗವಸು (mask), ಗಾಳಿ, ಬೆಳಕಿನ ವ್ಯವಸ್ಥೆ, ಆಕ್ಸಿಮೀಟರ್ ಇತ್ಯಾದಿಗಳಿಗೆ ಇಲ್ಲಿ ಯಾವುದೇ ಅರ್ಥವಿಲ್ಲ