ಈ ಊರಿನಲ್ಲಿ ನೀವು ದನವಾಗಿ ಹುಟ್ಟಿದ್ದರೆ ನಿಮಗೆ ತಿನ್ನಬಲ್ಲಷ್ಟು ಟೊಮ್ಯಾಟೊ ಉಚಿತವಾಗಿ ಸಿಗುತ್ತದೆ. ಅದು ಈ ಬಾರಿ ಮಾತ್ರ. ಉಳಿದ ಸಮಯದಲ್ಲಿ ನೀವು ಕುರಿಗಳಾಗಿದ್ದರೆ ನಿಮಗೆ ಉಚಿತ ಟೊಮ್ಯಾಟೊ ತಿನ್ನುವಷ್ಟು ಸಿಗುವುದು ಖಚಿತ.

ಅನಂತಪುರ ಟೊಮೆಟೊ ಮಾರುಕಟ್ಟೆ ಅಂಗಳದ ಬಳಿಯ ಈ ಮೈದಾನವು ಈ ಹಣ್ಣು ಅಥವಾ ತರಕಾರಿಯ ಬೆಲೆಗಳು ಕಡಿಮೆಯಾದಾಗ ಅವುಗಳನ್ನು ಎಸೆಯುವ ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ. (ಟೊಮ್ಯಾಟೊ ಪೌಷ್ಟಿಕತಜ್ಞರು ತರಕಾರಿ ಎಂದು ಪರಿಗಣಿಸುವ ಹಣ್ಣುಗಳಾಗಿವೆ ಎಂದು ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಹೇಳುತ್ತದೆ). ಹತ್ತಿರದ ಹಳ್ಳಿಗಳಿಂದ ತಮ್ಮ ಉತ್ಪನ್ನಗಳನ್ನು ತಂದ ರೈತರು ಸಾಮಾನ್ಯವಾಗಿ ತಮ್ಮ ಮಾರಾಟವಾಗದ ಟೊಮೆಟೊಗಳನ್ನು ಇಲ್ಲಿ ಎಸೆಯುತ್ತಾರೆ. ಈ ಸ್ಥಳವು ಹೆಚ್ಚಾಗಿ ಆಡುಗಳಿಂದ ಕಿಕ್ಕಿರಿದಿರುತ್ತದೆ. ಆದರೆ, ಮಳೆ ಸಮಯದಲ್ಲಿ ಆಡುಗಳು ಟೊಮೆಟೊ ತಿಂದರೆ ಜ್ವರ ಬರುತ್ತದೆ' ಎನ್ನುತ್ತಾರೆ ಪಿ.ಕದಿರಪ್ಪ. ಅವರು ಇಲ್ಲಿಗೆ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಬುಕ್ಕರಾಯಸಮುದ್ರಂ ಗ್ರಾಮದವರು ಮತ್ತು ಇದು ಕೂಡ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಸೇರಿದ ಊರಾಗಿದೆ. ಕದಿರಪ್ಪ ವೃತ್ತಿಯಿಂದ ಕುರಿ ಪಾಲಕ.

ಆಡುಗಳು ದನಗಳಿಗಿಂತಲೂ ಹೆಚ್ಚು ಸೂಕ್ಷ್ಮ ಪ್ರಾಣಿಗಳಾಗಿರುವ ಕಾರಣ, ಅನಂತಪುರದಲ್ಲಿ ಮಳೆಯಾಗುತ್ತಿರುವ ಈ ಹೊತ್ತು ಅವುಗಳಿಗೆ ಟೊಮ್ಯಾಟೊ ತಿನ್ನಿಸಿದರೆ ಜ್ವರ ಕೂಡ ಬರುವ ಸಾಧ್ಯತೆಯಿರುತ್ತದೆ. ಇದೇ ಕಾರಣಕ್ಕಾಗಿ ಆಡುಗಳಿಗೆ ಅವುಗಳ ಮೆಚ್ಚಿನ ಹಣ್ಣನ್ನು ತಿನ್ನಲು ಅವುಗಳ ಮಾಲಿಕ ಬಿಡುವುದಿಲ್ಲ. ಅವು ಅಲ್ಲೇ ಇದ್ದ ಕಳೆ ಗಿಡಗಳನ್ನು ಮತ್ತು ಹುಲ್ಲನ್ನು ತಿಂದು ಸಮಾಧಾನ ಮಾಡಿಕೊಳ್ಳುತ್ತಿದ್ದವು. ಬಹುಶಃ ದನಗಳು ತಮ್ಮ ನೆಚ್ಚಿನ ಹಣ್ಣುಗಳನ್ನು ತಿನ್ನುತ್ತಿರುವುದನ್ನು ನೋಡಿ ಅವುಗಳಿಗೆ ಒಂದಿಷ್ಟು ಹೊಟ್ಟೆಕಿಚ್ಚೂ ಆಗಿರಬಹುದು. ಆಡುಗಳ ಮಾಲಿಕ ತನ್ನ ಆಡುಗಳಿಗೆ ಇಷ್ಟೊಂದು ಹಣ್ಣು ಎಸೆಯುವ ರೈತನಿಗೆ ಪ್ರತಿಯಾಗಿ ಏನನ್ನೂ ನೀಡುವುದಿಲ್ಲ. ಕೆಲವೊಮ್ಮೆ ಹಲವು ದಿನಗಳ ಕಾಲ ರಾಶಿ ರಾಶಿ ಟೊಮ್ಯಾಟೊ ಹೀಗೆ ಎಸೆಯಲಾಗುತ್ತದೆ.

ಅನಂತಪುರ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸಾಮಾನ್ಯವಾಗಿ ಕಿಲೋಗೆ 20ರಿಂದ 30 ರೂಪಾಯಿಗಳ ನಡುವೆ ಏರಿಳಿತವಾಗುತ್ತಿರುತ್ತದೆ. ಪಟ್ಟಣದ ರಿಲಾಯನ್ಸ್ ಮಾರ್ಟ್ ನಲ್ಲಿ ಅವು ಅಗ್ಗದ ಬೆಲೆಗೆ ಸಿಗುತ್ತವೆ. "ನಾವು ಒಮ್ಮೆ ಅವುಗಳನ್ನು ಕಿಲೋಗೆ ಕೇವಲ ೧೨ ರೂಪಾಯಿಗಳಿಗೆ ಮಾರಾಟ ಮಾಡಿದ್ದೇವೆ" ಎಂದು ಮಾರ್ಟ್ ನ ಸಿಬ್ಬಂದಿಯೊಬ್ಬರು ಹೇಳುತ್ತಾರೆ. "ಅವರು ತಮ್ಮದೇ ಆದ ಪೂರೈಕೆದಾರರನ್ನು ಹೊಂದಿದ್ದಾರೆ, ಆದರೆ ನಾವು ಮಾರುಕಟ್ಟೆ ಅಂಗಳದಲ್ಲಿ ಖರೀದಿಸುತ್ತೇವೆ ಮತ್ತು ಸಾಮಾನ್ಯವಾಗಿ ದಿನದ ಕೊನೆಯಲ್ಲಿ ಕೆಟ್ಟು ಹೋಗಿರುವುದನ್ನು ಎಸೆಯುತ್ತೇವೆ" ಎಂದು ತರಕಾರಿ ಮಾರಾಟಗಾರರೊಬ್ಬರು ಮಾರ್ಟ್ ಬಗ್ಗೆ ಹೇಳುತ್ತಾರೆ

This field near the Anantapur tomato market yard serves as a dumping ground when prices dip
PHOTO • Rahul M.

ಅನಂತಪುರ ಟೊಮ್ಯಾಟೊ ಮಾರ್ಕೆಟ್ ಯಾರ್ಡ್ ಬಳಿಯ ಈ ಮೈದಾನ ಟೊಮ್ಯಾಟೊ ರೇಟ್ ಕುಸಿದಾಗ ಅದನ್ನು ಎಸೆಯುವ ಸ್ಥಳವಾಗಿ ಮಾರ್ಪಡುತ್ತದೆ

ಆದಾಗ್ಯೂ, ಅವು ಗ್ರಾಹಕರು ಮಾರುಕಟ್ಟೆಯಲ್ಲಿ ಟೊಮ್ಯಾಟೊಗಳನ್ನು ಖರೀದಿಸುವ ಬೆಲೆಗಳು. ಆದರೆ ಇದೇ ಬೆಳೆಗೆ ರೈತರು ಕರುಣಾಜನಕವೆನ್ನಿಸುವಂತಹ ಮೊತ್ತವನ್ನು ಪಡೆಯುತ್ತಾರೆ - ಉತ್ಪನ್ನದ ಆಗಮನದ ವೈವಿಧ್ಯತೆ ಮತ್ತು ಸಮಯವನ್ನು ಅವಲಂಬಿಸಿ ಕಿಲೋಗೆ 6ರಿಂದ ಗರಿಷ್ಠ 20ರೂ.ವರೆಗೆ ಪಡೆಯುತ್ತಾರೆ. ಹೆಚ್ಚಿನ ಬೆಲೆ ತುಂಬಾ ಅಪರೂಪ ಮತ್ತು ಅದು ಒಂದು ಅಥವಾ ಎರಡು ದಿನಗಳಿಗಿಂತ ಹೆಚ್ಚು ಉಳಿಯುವುದಿಲ್ಲ. ಈ ಬೆಲೆ ಏರಿಳಿಕೆಯ ಅಪಾಯ ಹೆಚ್ಚು ಕಾಡುವುದು ರೈತರನ್ನೇ ಹೊರತು ವ್ಯಾಪಾರಿಗಳನ್ನಲ್ಲ. ಇದರಲ್ಲಿ ಕಡಿಮೆ ಅಪಾಯ ಎದುರಿಸುವವರೆಂದರೆ ಆ ಪ್ರದೇಶದ ಟೊಮ್ಯಾಟೊಗಳನ್ನು ಖರೀದಿಸುವ ಕಾರ್ಪೊರೇಟ್‌ ಸರಪಳಿಗಳು.

ಒಬ್ಬ ವ್ಯಾಪಾರಿ ಒಮ್ಮೆ 600 ರೂಪಾಯಿಗಳಿಗೆ ಒಂದು ಟ್ರಕ್ ಲೋಡ್ ಟೊಮೆಟೊವನ್ನು ಖರೀದಿಸಿದನು - ಬೆಲೆಗಳು ಕುಸಿದ ನಂತರ ಅವುಗಳನ್ನು ಮಾರುಕಟ್ಟೆಯ ಬಳಿಯೇ ಮಾರಾಟ ಮಾಡಿದನು. "10 ರೂಪಾಯಿ ಕೊಡಿ ಮತ್ತು ನಿಮಗೆ ಸಾಧ್ಯವಿರುವಷ್ಟು ತುಂಬಿಕೊಂಡು ಹೋಗಿ" ಕೂಗುತ್ತಾ ಆತ ವ್ಯಾಪಾರ ಮಾಡುತ್ತಿದ್ದ. ಹತ್ತು ರೂಪಾಯಿಗೆ ಸಣ್ಣ ಚೀಲದಲ್ಲಿ ತುಂಬಿಕೊಳ್ಳಬಹುದಾದರೆ ದೊಡ್ಡ ಚೀಲಕ್ಕೆ ಆತ ಇಪ್ಪತ್ತು ರೂಪಾಯಿಗಳ ಬೆಲೆ ನಿಗದಿಪಡಿಸಿದ್ದ. ನನಗನ್ನಿಸುವಂತೆ ಆತ ಅಂದು ಒಳ್ಳೆಯ ಸಂಪಾದನೆಯನ್ನೇ ಮಾಡಿದ.

ನಾನು ಈ ಫೋಟೋ ತೆಗೆದ ದಿನ, ಅನಂತಪುರ ನಗರದಾದ್ಯಂತ ಮಾರಾಟಗಾರರು ಟೊಮೆಟೊವನ್ನು ಕಿಲೋಗ್ರಾಂಗೆ 20-25 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ರಿಲಯನ್ಸ್ ಮಾರ್ಟ್ ಒಂದು ಕಿಲೋ ಬೆಲೆಯನ್ನು 19 ರೂಪಾಯಿಗೆ ನಿಗದಿ ಮಾಡಿತ್ತು. ನೆಸ್ಲೆ ಮತ್ತು ಹಿಂದೂಸ್ತಾನ್ ಲಿವರ್ ನಂತಹ ಬಹುರಾಷ್ಟ್ರೀಯ ಬ್ರಾಂಡ್ಗಳ ಟೊಮೆಟೊ ಸಾಸ್‌ಗಳನ್ನು ಇಲ್ಲಿ ಅಂಗಡಿಗಳಲ್ಲಿ ಮಾಡಲಾಗುತ್ತದೆ, ಬಹುಶಃ ಅವರು ಅನಂತಪುರದಲ್ಲಿ ಟೊಮೆಟೊ ಉತ್ಪನ್ನಗಳನ್ನು ಹೆಚ್ಚು ಲಾಭದಾಯಕ ಬೆಲೆಗೆ ಮಾರಾಟಗಾರರಾಗಿರಬಹುದು. ಈ ಸಾಸ್‌ಗಳನ್ನು ಬಹುಶಃ ವಿಶೇಷ ಆರ್ಥಿಕ ವಲಯಗಳಲ್ಲಿ ತಯಾರಿಸಲಾಗುತ್ತದೆ (ಇದು ಹೆಚ್ಚಿನ ಸರ್ಕಾರಿ ಬೆಂಬಲವನ್ನು ಪಡೆಯುತ್ತದೆ)

ಟೊಮ್ಯಾಟೊ ಬೆಳೆಗಾರರು ಕೂಡ ಒಂದಷ್ಟು ಬೆಂಬಲವನ್ನು ನಿರೀಕ್ಷಿಸುತ್ತಾರೆ. ಆದರೆ ಅವರಿಗೆ ಸಿಗುವುದಿಲ್ಲ. ಇದರ ನಡುವೆ ಬೆಲೆ ಇಳಿದಾಗ ದನಗಳು ಬಹಳ ಸಂತಸಪಡುತ್ತವೆ. ಯಾಕೆಂದರೆ ಅದು ಅವುಗಳಿಗೆ ರಸಭರಿತ ಆಹಾರ ಸಿಗುವ ದಿನ.

ಅನುವಾದ: ಶಂಕರ ಎನ್. ಕೆಂಚನೂರು

Rahul M.

রাহুল এম. অন্ধ্র প্রদেশের অনন্তপুর জেলায় স্বাধীনভাবে কর্মরত একজন সাংবাদিক। তিনি ২০১৭ সালের পারি ফেলো।

Other stories by Rahul M.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru