ಸಂಪೂರ್ಣ ವೈಯಕ್ತಿಕ ರಕ್ಷಣಾ ಸಾಧನಳೊಂದಿಗೆ ಸಜ್ಜುಗೊಂಡಿದ್ದು, ಅನ್ಯಗ್ರಹ ಜೀವಿಗಳಂತೆ ಕಾಣುತ್ತಿದ್ದ ಅವರು, ದಕ್ಷಿಣ 24 ಪರಗಣಗದ ಆತನ ಹಳ್ಳಿಯಲ್ಲಿ ಬಂದಿಳಿದರು. “ನಾನೊಬ್ಬ ಪ್ರಾಣಿಯೋ ಎಂಬಂತೆ ಅವರು ನನ್ನನ್ನು ಹಿಡಿಯಲು ಬಂದಿದ್ದರು” ಎಂದರು ಹರನ್ಚಂದ್ರ ದಾಸ್. ಸ್ನೇಹಿತರು ಇವರನ್ನು ಹರು ಎಂದು ಕರೆಯುತ್ತಾರೆ. ಇವರ ಅಭಿಪ್ರಾಯದಂತೆ, ಈಗ ಅವರು ಆತನ ಸ್ನೇಹಿತರಾಗಿ ಉಳಿದಿಲ್ಲ. ಇತ್ತೀಚೆಗೆ, ಅವರು ದಾಸ್ ಅವರನ್ನು ಬಹಿಷ್ಕರಿಸುತ್ತಿದ್ದಾರೆ. “ಜನರು ನನ್ನ ಕುಟುಂಬಕ್ಕೆ ದಿನಸಿ ಹಾಗೂ ಹಾಲನ್ನು ಪೂರೈಸುವುದನ್ನು ನಿಲ್ಲಿಸಿದರು. ಹಲವಾರು ವಿಧಗಳಲ್ಲಿ ನಮಗೆ ಕಿರುಕುಳವನ್ನು ನೀಡಲಾದ ಕಾರಣ, ನಾವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದೆವು. ನಮ್ಮೆಲ್ಲ ನೆರೆಹೊರೆಯವರೂ ನಮ್ಮ ಬಗ್ಗೆ ಭಯಭೀತರಾಗಿದ್ದಾರೆ” ವೈದ್ಯಕೀಯ ತಪಾಸಣೆಯಲ್ಲಿ ಹರಚಂದ್ರ ದಾಸ್ ಕೋವಿಡ್-19 ಸೋಂಕಿತರಲ್ಲವೆಂದು ತಿಳಿದುಬಂದಾಗ್ಯೂ, ಈ ಪರಿಸ್ಥಿತಿಯು ಕಂಡುಬರುತ್ತಿದೆ.
ಆತನ ಅಪರಾಧ: ಇವರು ಆಸ್ಪತ್ರೆಯೊಂದರ ನೌಕರಿಯಲ್ಲಿರುವುದು. ಬಹುತೇಕ ಆರೋಗ್ಯ ಕಾರ್ಯಕರ್ತರು ಇಂತಹುದೇ ವಿರೋಧವನ್ನು ಎದುರಿಸುತ್ತಿದ್ದಾರೆ. ಬಹುಶಃ, ಆ ಜಿಲ್ಲಾ ಮಟ್ಟದ ಕಾರ್ಯಕರ್ತರೂ ಸಹ ಇವರು ಸೋಂಕಿತರಾಗಿದ್ದಾರೆಂಬ ಗುಮಾನಿಯ ಮೇಲೆ ಇವರನ್ನು ಅರಸುತ್ತಾ ಅಲ್ಲಿಗೆ ಬಂದಿರಬಹುದು.
“ನಾನು ಆಸ್ಪತ್ರೆಯೊಂದರಲ್ಲಿ ಕೆಲಸಮಾಡುವ ಕಾರಣ, ಸೋಂಕಿತನಾಗಿದ್ದೇನೆಂದು ಎಲ್ಲರೂ ಭಯಗೊಂಡಿದ್ದರು” ಎಂದು ಅವರು ತಿಳಿಸಿದರು.
30ರ ವಯಸ್ಸಿನ ಮಧ್ಯ ಭಾಗದಲ್ಲಿರುವ ಹರನ್ಚಂದ್ರ, ಕೊಲ್ಕತ್ತಾದಲ್ಲಿನ ಲಾಭ-ನಿರಪೇಕ್ಷ ಆಸ್ಪತ್ರೆಯಾದ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ (ಐಸಿಹೆಚ್) ನಿರ್ವಹಣಾ ಕೊಠಡಿಯಲ್ಲಿ ಕೆಲಸವನ್ನು ನಿಭಾಯಿಸುತ್ತಾರೆ. ಟ್ರಸ್ಟ್ವೊಂದರ ನಿರ್ವಹಣೆಯಲ್ಲಿರುವ ಈ ಆಸ್ಪತ್ರೆಯಲ್ಲಿ ಕೊಲ್ಕತ್ತ ನಗರವಷ್ಟೇ ಅಲ್ಲದೆ, ಗ್ರಾಮೀಣ ಮತ್ತು ಉಪನಗರ ಪ್ರದೇಶಗಳ ಮಕ್ಕಳಿಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. 1956ರಲ್ಲಿ ಸ್ಥಾಪನೆಗೊಂಡ ಈ ಭಾರತದ ಪ್ರಥಮ ಶಿಶುವೈದ್ಯಕೀಯ ಸಂಸ್ಥೆಯು 220 ಹಾಸಿಗೆಗಳನ್ನೊಳಗೊಂಡಿದೆ. ಪಾರ್ಕ್ ಸರ್ಕಸ್ ಪ್ರದೇಶದಲ್ಲಿನ ಈ ಆಸ್ಪತ್ರೆಗೆ ಬರುವ ಮಕ್ಕಳ ಕುಟುಂಬಗಳಿಗೆಲ್ಲಿ ಇಲ್ಲಿ ಅಥವಾ ಇತರೆಡೆಗಳಲ್ಲಿ ದೊರೆಯುವ ವೈದ್ಯಕೀಯ ಚಿಕಿತ್ಸೆಯ ಅವಕಾಶವನ್ನು ಪಡೆಯುವುದು ಕಷ್ಟಕರ.
ಕೋವಿಡ್-19 ಮತ್ತು ಲಾಕ್ಡೌನ್ನಿಂದಾಗಿ ಆವರಿಗೆ ಆಸ್ಪತ್ರೆಯನ್ನು ತಲುಪುವುದೇ ದುಸ್ಸಾಧ್ಯವಾಗುತ್ತಿದೆ. ದಕ್ಷಿಣ 24 ಪರಗಣ ಜಿಲ್ಲೆಯಿಂದ ಈಗ ತಾನೇ ಬಂದ ರತನ್ ಬಿಸ್ವಾಸ್, “ಇಲ್ಲಿಗೆ ಬರುವುದೇ ಸಮಸ್ಯೆ. ವೀಳ್ಯದೆಲೆಗಳ ತೋಟದಲ್ಲಿ ದಿನಗೂಲಿಯ ಕೆಲಸವನ್ನು ನಿರ್ವಹಿಸುತ್ತಿದ್ದೆ. ಅಂಫನ್ (ಮೇ 20ರಂದು ಅಪ್ಪಳಿಸಿದ ಚಂಡಮಾರುತ) ಚಂಡಮಾರುತವು ಆ ತೋಟವನ್ನು ಹಾಳುಗೆಡವಿತು. ಹೀಗಾಗಿ, ನಾನು ನನ್ನ ಆದಾಯದ ಮೂಲವನ್ನು ಕಳೆದುಕೊಂಡೆ. ಈಗ ನನ್ನ ಕಿರಿಯ ಮಗನಿಗೆ ಕಿವಿಗಳ ಹಿಂಭಾಗದಲ್ಲಿ ಸೋಂಕು ಹರಡಿದೆ. ಆದ್ದರಿಂದ ನಾವು ಅವನನ್ನು ಇಲ್ಲಿಗೆ ಕರೆತಂದಿದ್ದೇವೆ. ರೈಲು ಸೇವೆಗಳು ಲಭ್ಯವಿಲ್ಲದ ಕಾರಣ, ಈ ಆಸ್ಪತ್ರೆಯನ್ನು ತಲುಪುವುದೇ ಕಷ್ಟಕರವಾಗಿತ್ತು” ಎಂದು ತಿಳಿಸಿರು. ದಾಸ್ನಂತಹ ಜನರು ಹಲವು ಬಸ್ಗಳು, ರಿಕ್ಷಾಗಳ ಮೂಲಕ ಹಾಗೂ ಸ್ವಲ್ಪ ದೂರವನ್ನು ಕಾಲ್ನಡಿಗೆಯಿಂದ ಕ್ರಮಿಸಿ, ಆಸ್ಪತ್ರೆಯನ್ನು ತಲುಪುತ್ತಿದ್ದಾರೆ.
ಐಸಿಹೆಚ್ ವೈದ್ಯರು ಮುಂಬರುವ ಮತ್ತಷ್ಟು ಸಮಸ್ಯೆಗಳ ಬಗ್ಗೆ ಎಚ್ಚರಿಸುತ್ತಾರೆ.




















