ಗೀತ ಮ್ರಿದ ಹೇಳುವಂತೆ, “ಸರ್ಕಾರವು ಸುಂದರ್ಬನ್ ಕಾಡುಗಳತ್ತ ಗಮನಹರಿಸುತ್ತದೆಯೇ ಹೊರತು ಮನುಷ್ಯರ ಕಾಳಜಿವಹಿಸುವುದಿಲ್ಲ.” ಮೀನುಗಾರರಾಗಿದ್ದ ಇವರ ಪತಿಯು ಫೆಬ್ರವರಿ 2012ರಲ್ಲಿ ಹುಲಿಯೊಂದರಿಂದ ಸಾವಿಗೀಡಾದರು. ಪರಿಹಾರಕ್ಕೆ ಅರ್ಹರಾಗಿದ್ದಾಗ್ಯೂ, ಇವರಿಗೆ ಏನೂ ಸಿಗಲಿಲ್ಲ. ಇವರ ಹಳ್ಳಿಯಲ್ಲಿನ ಅನೇಕ ಇತರೆ ಮಹಿಳೆಯರಿಗೂ ಪರಿಹಾರವು ದೊರೆತಿರುವುದಿಲ್ಲ. ಮೀನುಗಾರರಾಗಿದ್ದ ಇವರ ಗಂಡಂದಿರನ್ನು ಸಹ ಹುಲಿಯು ಕೊಂದಿದೆ.
“ನಿಮ್ಮ ಮತವನ್ನು ಕೇಳುವುದನ್ನು ಮಾತ್ರ ಅವರು ಮರೆಯುವುದಿಲ್ಲ. ನಾನು ಮತವನ್ನು ಚಲಾಯಿಸಿ, ಪ್ರಜೆಯ ಕರ್ತವ್ಯವನ್ನು ನಿಭಾಯಿಸಿದ್ದೇನೆ” ಎಂದರಾಕೆ. ಗೀತ, ಸುಂದರ್ಬನ್ನ ರಜತ್ ಜುಬಿಲಿ ಹಳ್ಳಿಯ ನಿವಾಸಿ.














