ಕಮ್ಲಾ ದೇವಿಯು ದುಡಿಯುತ್ತಿರುವ ಭೂಮಿಯಿಂದ ಹಳೆಯ ನೆನಪುಗಳು ಹಾಗೂ ನೋವಿನ ಅಲೆಗಳು ಪುಟಿದೆದ್ದು ಅವರುಯೆದುರು ಬಂದು ನಿಲ್ಲುತ್ತವೆ. ಒಂದೊಮ್ಮೆ ಅವರುಯ ಪರಿವಾರವು ಹದಿನೆಂಟು ಎಕರೆ ಭೂಮಿಯನ್ನು ಹೊಂದಿತ್ತು. ಸದ್ದಿಲ್ಲದೆ ಅವರು ಹೀಗೆಂದರು: “ನಾನು ಕೂಲಿಯವರನ್ನು ನೇಮಿಸಿಕೊಳ್ಳುತ್ತಿದ್ದೆ, ಈಗ ನಾನೇ ಅವರಲ್ಲಿ ಒಬ್ಬಳಾಗಿದ್ದೇನೆ.”
ಹಿಮಾಲಯದ ಹೊರಭಾಗದ ಬೆಟ್ಟದ ಬುಡದಲ್ಲಿನ ಗುಡ್ಡದಲ್ಲಿರುವ ಉಧಮ್ ಸಿಂಗ್ ನಗರ್ ಎಂಬ ಫಲವತ್ತಾದ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡವೆನಿಸಿದ ಥಾರು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಕಮ್ಲಾ ಇದೇ ಸಮುದಾಯಕ್ಕೆ ಸೇರಿದವರು. ಈಕೆಯ ಪಂಗಡದವರು ಉತ್ತರಾಖಂಡದ ಮೊದಲ ನೆಲಸಿಗರಲ್ಲಿ ಹಾಗೂ ಅತ್ಯಂತ ವಂಚಿತರಲ್ಲಿ ಒಬ್ಬರೆಂದು ಪರಿಗಣಿತವಾಗಿದೆ.
ಪ್ರತಿ ಮೂವತ್ತೈದು ಜನರಲ್ಲಿ ಒಬ್ಬರು ಪರಿಶಿಷ್ಟ ಪಂಗಡದವರಾಗಿರುವ ಈ ರಾಜ್ಯದಲ್ಲಿ ಇವರಂತೆಯೇ ಅನೇಕರು ಬುಡಕಟ್ಟು ಜನಾಂಗದವರಲ್ಲದವರಿಗೆ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಕುಟುಂಬಕ್ಕೆ ಅಗತ್ಯವಿರುವಾಗಲೆಲ್ಲ, ಕಡಿಮೆ ಬಡ್ಡಿಯೊಂದಿಗೆ ಅನಿಶ್ಚಿತ ಸಾಲಗಳ ಭರವಸೆಯೊಂದಿಗೆ ಕಮ್ಲಾ ಈ ನಷ್ಟವನ್ನು ಅನುಭವಿಸಬೇಕಾಯಿತು.
“ಮಾವನವರ ಕಾಯಿಲೆಗೆ ನಾವು ಸಾಲಮಾಡಬೇಕಾಯಿತು. ನಂತರ ನನ್ನ ಪತಿಯ ಸಲುವಾಗಿ. ನಾದಿನಿಯರ ಮದುವೆ ಮಾಡಬೇಕಿತ್ತು” ಅವರುಯ ಧ್ವನಿ ಸೊರಗಿತು.
ಈಗ ನಲವತ್ತೇಳರ ವಯಸ್ಸಿನ ಕಮ್ಲಾ, ತಮ್ಮ ಇಪ್ಪತ್ತೆಂಟನೇ ವಯಸ್ಸಿನಲ್ಲಿ ನವ ವಧುವಾಗಿ ಆಗಮಿಸಿದ ಸಿತಾರ್ಗಂಜ್ ತಹಸಿಲ್ನ ಪಿಂಡಾರಿ ಹಳ್ಳಿಯಲ್ಲಿ ಅವರುಯ ಮಾವ ತೋಲಾ ಸಿಂಗ್, ಶ್ರೀಮಂತ ರೈತರಾಗಿದ್ದರು. ಕುಟುಂಬದ ಸಮೃದ್ಧಿಯ ಪ್ರಮಾಣವನ್ನು ತಿಳಿಸುತ್ತ, ಅವರು, ತಮ್ಮ ಅಂಗಳದಾದ್ಯಂತ ಕೈಬೀಸಿ, “ಸುಗ್ಗಿಯ ಕಾಲದಲ್ಲಿ ಈ ಜಾಗದ ತುಂಬೆಲ್ಲಾ ಧಾನ್ಯಗಳು ತುಂಬಿರುತ್ತಿದ್ದವು. ಲಾಲಾಗಳು (ವ್ಯಾಪಾರಸ್ಥರು) ನಮ್ಮಿಂದ ಗೋಧಿ ಮತ್ತು ಅಕ್ಕಿಯನ್ನು ಕೊಳ್ಳಲು ತಮ್ಮ ಜನರನ್ನು ಹಾಗೂ ಟ್ರಕ್ಗಳನ್ನು ಕಳುಹಿಸುತ್ತಿದ್ದರು” ಎಂದರು.
ಪುರುಷರು ಸಾಲದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಕಾರಣ, ಕುಟುಂಬಕ್ಕೆ ಮೊದಲ ಬಾರಿಗೆ ಸಾಲದ ಅವಶ್ಯಕತೆಯುಂಟಾದ ಬಗ್ಗೆ ಕಮ್ಲಾಳಿಗೆ ನೆನಪಿಲ್ಲ. ಆದರೆ ಹತ್ತಿರದ ಸಿತಾರ್ಗಂಜ್ ನಗರದಲ್ಲಿ ಬಟ್ಟೆಯ ಅಂಗಡಿಯನ್ನು ಹೊಂದಿದ್ದ ಸಾಲದಾತನು 2005ರ ಚಳಿಗಾಲದ ಒಂದು ದಿನ ತನ್ನ ಮನೆಯಲ್ಲಿ ಠಿಕಾಣಿ ಹೂಡಿದ್ದು ಅವರುಗೆ ಚೆನ್ನಾಗಿ ನೆನಪಿದೆ.
“ಬೆಳಗಿನಿಂದ ಸಂಜೆಯವರೆಗೂ ಅವರು ನನ್ನ ಪತಿಯ ಬಳಿಯೇ ಕುಳಿತಿದ್ದ. ಜೊತೆಗೆ ಸ್ಥಳೀಯ ವ್ಯಕ್ತಿಯೊಬ್ಬರಿದ್ದರು. ʼನನಗೆ ನಿಮ್ಮ ಭೂಮಿಯನ್ನು ಕೊಡಿ. ಎಲ್ಲವೂ ಸುಸೂತ್ರವಾಗುತ್ತದೆʼ ಎಂದು ಅವರು ಒತ್ತಾಯಿಸುತ್ತಿದ್ದ. ನನ್ನ ಪತಿ ಹಾಸಿಗೆ ಹಿಡಿದಿದ್ದರು. ರಾತ್ರಿಯ ವೇಳೆಗೆ ಅವರಲ್ಲಿ ವಿರೋಧಿಸುವ ಚೈತನ್ಯವೂ ಉಳಿದಿರಲಿಲ್ಲ” ಎಂದು ಅವರು ನೆನಪಿಸಿಕೊಂಡರು. ಪತಿ ಹರೀಶ್ ಚಂದ್ರ, ಐವತ್ತು ರೂ.ಗಳ ಸ್ಟಾಂಪ್ ಪೇಪರಿನ ಮೇಲೆ ಸಹಿಮಾಡಿ, ಬುಡಕಟ್ಟು ಜನಾಂಗದವರಲ್ಲದ ರಾಮ್ ಅವತಾರ್ ಗೋಯಲ್ ಎಂಬ ವ್ಯಕ್ತಿಗೆ 68,360 ರೂ.ಗಳಿಗೆ 3.5 ಬಿಘಾ ಭೂಮಿಯನ್ನು (ಸುಮಾರು .58 ಎಕರೆ) ಹಸ್ತಾಂತರಿಸಿದರು. ಇಂತಹ ವರ್ಗಾವಣೆಗೆ ಕಾನೂನುಬದ್ಧವಾಗಿ ಅವಶ್ಯವಿರುವ ಜಿಲ್ಲಾಧಿಕಾರಿಯ ಅನುಮತಿಯನ್ನು ಕಡೆಗಣಿಸಲಾಯಿತು. ಯಾವುದೇ ಮಾರಾಟ ಪತ್ರವನ್ನು ನೋಂದಾಯಿಸಲಿಲ್ಲ. ಆದರೂ ಭೂಮಿಯು ಕೈತಪ್ಪಿತು.
2005ರಿಂದ 2011ರಲ್ಲಿನ ಅವರ ನಿಧನದವರೆಗೆ ಹರೀಶ್ ಅಂತಹ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದರು. ಪರಿವಾರದ ಒಡೆತನದಲ್ಲಿದ್ದ ಎಲ್ಲ ಹದಿನೆಂಟು ಎಕರೆಯನ್ನು ನಿಧಾನವಾಗಿ ಮಾರಲಾಯಿತು ಅಥವಾ ಗಿರವಿಯಿಡಲಾಯಿತು. ಕಮ್ಲಾಳ ಬಳಿ ಕೇವಲ ಒಂಬತ್ತು ಎಕರೆಗಳ ನಾಲ್ಕು ಒಪ್ಪಂದಗಳ ಪ್ರತಿಗಳಿವೆಯಷ್ಟೇ.
“ಐದು ಮಕ್ಕಳ ನಿಗಾವಹಿಸಬೇಕಿತ್ತು. ನನ್ನ ಹಿರಿಯ ಮಗಳಿಗೆ ಕೇವಲ ಹದಿನೇಳು ವರ್ಷವಾಗಿತ್ತು. ಇಬ್ಬರು ಸಾಲದಾತರಿಗೆ ಬಹುತೇಕ ನಮ್ಮೆಲ್ಲ ಭೂಮಿಯನ್ನೂ ಕಳೆದುಕೊಂಡೆವು. ನಾನು ಸದಾ ಅದನ್ನು ಸ್ವಲ್ಪ ಸಮಯದವರೆಗೆ ಗಿರವಿಯಿಡಲಾಗಿದೆಯೆಂದೇ ಭಾವಿಸಿದ್ದೆ. ಭೂಮಿಯನ್ನು ಮಾರಿ ಸಾಲವನ್ನು ತೀರಿಸುವ ಸಲುವಾಗಿ ಅದನ್ನು ವಾಪಸ್ಸು ಕೇಳಲು ಹೋದಾಗ ಅದು ಈಗಾಗಲೇ ಮಾರಾಟವಾಗಿದೆ ಎಂದು ನನಗೆ ತಿಳಿಸಲಾಯಿತು. ಇದು ದರೋಡೆ” ಎಂದರಾಕೆ.
ಪಿಂಡಾರಿಯಿಂದ ಸುಮಾರು ಅರವತ್ತು ಕಿ.ಮೀ. ದೂರದ ಮತ್ತೊಂದು ಹಳ್ಳಿ, ಉಧಮ್ ಸಿಂಗ್ ನಗರದ ಬುಕ್ಸ ಬುಡಕಟ್ಟಿನ ಮೂವತ್ತೊಂದು ವರ್ಷದ ಮಹಿಳೆ, ಮಂಗೋಲ ಸಿಂಗ್ ಸಹ ಇದೇ ರೀತಿಯ ನಷ್ಟವನ್ನು ಅನುಭವಿಸಿದರು. ತನ್ನ ಪಾಲಿನ ಕುಟುಂಬದ ಜಮೀನನ್ನು ಗಿರವಿ ಇಟ್ಟಿದ್ದೇಕೆ ಎಂಬುದನ್ನು ವಿವರಿಸುತ್ತ ಅವರು ಹೀಗೆಂದರು: “ನನ್ನ ಸಹೋದರ, ಫೂಲ್, ಹಳ್ಳಿಯಲ್ಲಿ ಎಂದಿಗೂ ಕಾಣದ ಅದ್ದೂರಿ ಮದುವೆಯನ್ನು ಬಯಸಿದ್ದ. ಅವರು ಕುಡಿತ ಮತ್ತು ಜೂಜಿನ ಚಟಕ್ಕಿಳಿದಿದ್ದ. ಮದುವೆಯು ಅವರುನನ್ನು ಸರಿದಾರಿಗೆ ತರಬಹುದೆಂದು ನಾನು ಭಾವಿಸಿದ್ದೆ.”
ತನ್ನ ಹೆತ್ತವರನ್ನು ಕಳೆದುಕೊಂಡಾಗ ಅವರುಗಿನ್ನೂ ಹನ್ನೊಂದು ವರ್ಷವಷ್ಟೇ. ಪೋಷಕರ ಪಾತ್ರವನ್ನು ನಿಭಾಯಿಸುವ ಜವಾಬ್ದಾರಿ ಅವರುಯ ಹೆಗಲಿಗೇರಿತು. ಒಡಹುಟ್ಟಿದ ಮೂರು ಜನರಲ್ಲಿ ಅವರು ಹಿರಿಯಳು. ಕುಟುಂಬದ ಐದು ಎಕರೆ ಜಮೀನನ್ನು ನಿಭಾಯಿಸುವುದನ್ನು ಅವರು ತ್ವರಿತವಾಗಿ ಕಲಿತಳು. “ನನಗೆ ಬೇರೆ ಯಾವ ಆಯ್ಕೆಗಳಿದ್ದವು?” ಎಂದಳಾಕೆ.
ಮಕ್ಕಳ ಚಿಕ್ಕ ವಯಸ್ಸನ್ನು ಪ್ರಸ್ತಾಪಿಸುತ್ತಾ, ಸಂಬಂಧಿಕರು ಫಲವತ್ತಾದ ಭೂಮಿಯನ್ನು ಕೃಷಿಕರಿಗೆ ಗುತ್ತಿಗೆ ನೀಡುವಂತೆ ಸಲಹೆಯಿತ್ತರು. ಎಕರೆಗೆ ವಾರ್ಷಿಕ ಹದಿನೈದು ಸಾವಿರ ರೂ.ಗಳಂತೆ ಹಣವನ್ನು ಮುಂಗಡವಾಗಿಯೇ ಪಡೆದು, ಮೂರರಿಂದ ಐದು ವರ್ಷಗಳವರೆಗೆ ಅವಧಿಗೆ ಇದನ್ನು ಮಾಡಬಹುದಿತ್ತು. ಒಡಹುಟ್ಟಿದವರ ಅಗತ್ಯಗಳಿಗಾಗಿ ಸ್ವಲ್ಪ ಪ್ರಮಾಣದ ಭೂಮಿಯನ್ನು ಮೀಸಲಿಡಲಾಗಿತ್ತು. ಶಾಲೆ, ಮನೆ ಮತ್ತು ಹೊಲದ ಕೆಲಸಗಳ ಸಮತೋಲನದೊಂದಿಗೆ ಅವರು ಸಹೋದರರ ಶಿಕ್ಷಣಕ್ಕಾಗಿ ಶ್ರಮಿಸಿದಳು. ಆದರೆ ಹಿರಿಯ ಮಗ ಪೂರನ್ಗೆ ತೀವ್ರ ಅನಾರೋಗ್ಯವಿತ್ತು. ಕಿರಿಯವನು ಬಹಳ ಸೋಮಾರಿಯಾಗಿದ್ದ.
2010-11ರ ಅಖಿಲ ಭಾರತ ಕೃಷಿ ಜನಗಣತಿಯ ವರದಿಯಲ್ಲಿ, ಮಹಿಳೆಯರಿಗಿಂತ ಏಳು ಪಟ್ಟು ಹೆಚ್ಚಿನ ಪುರುಷರು ಕೃಷಿ ಭೂಮಿಯ ಒಡೆಯರು ಎಂದು ತಿಳಿಸಲಾಗಿದೆ. ಗದರ್ಪುರ್ ತಹಸಿಲ್ನ ನಂದ್ಪುರ್ ಹಳ್ಳಿಯಲ್ಲಿನ ಮಂಗೋಲಾರ ನೆರೆಹೊರೆಯವರು ಅವರುಯ ದುಗುಡವನ್ನು ತಿರಸ್ಕಾರದಿಂದ ನೋಡಿದರು. ಫೂಲ್ಗೆ ತಿಳಿಹೇಳುವಂತೆ ಅವರು ಅವರಲ್ಲಿ ವಿನಂತಿಸ“ಅವರು ಪುರುಷ. ಜೀವನ ನಿರ್ವಹಣೆಗೆ ಅವರುನಿಗೆ ಭೂಮಿಯು ಅವಶ್ಯ. ನೀನೇಕೆ ಅವನ ಕಾರ್ಯಗಳಲ್ಲಿ ತಲೆಹಾಕುತ್ತೀಯ?” ಎಂದರವರು. ಮಂಗೋಲಾಳಿಗೆ ವಿವಾಹವೆಂಬ ಪಾರಂಪರಿಕ ಭದ್ರತೆಯಿಲ್ಲವೆಂಬುದು ಅವರಿಗೆ ಮುಖ್ಯವಾಗಲಿಲ್ಲ.
ಸ್ವಲ್ಪ ಸಮಯದ ನಂತರ, ಫೂಲ್, ಮತ್ತೊಂದು ಅರ್ಧ ಎಕರೆ ಜಮೀನನ್ನು ಮಾರಲೆತ್ನಿಸಿದ. ಗಾಬರಿಗೊಂಡ ಮಂಗೋಲ ಮಾರಾಟವನ್ನು ತಡೆಹಿಡಿಯಬೇಕೆಂದು ಉಧಮ್ ಸಿಂಗ್ ನಗರದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಹಾಕಿದರು. ತಾಂತ್ರಿಕ ಕಾರಣಗಳಿಂದಾಗಿ ಈ ಕೋರಿಕೆಯನ್ನು ವಜಾಮಾಡಲಾಯಿತು.
2015ರ ಮಧ್ಯಭಾಗದಲ್ಲಿ, ಮಂಗೋಲಾರಿಗೆ ತನ್ನ ಸಹೋದರನಿಂದ ಶಾಂತಿಯ ಪ್ರಸ್ತಾವನೆ ಬಂದಿತು. “ನಿನಗೆ ಕಾಳಜಿಯಿದೆ ಎಂಬುದನ್ನು ನನಗೆ ತೋರಿಸು. ನನ್ನಿಚ್ಛೆಯಂತೆ ನನಗೆ ಮದುವೆಮಾಡು. ನೀನು ಪಡೆಯಲೇಬೇಕೆಂದು ಆಲೋಚಿಸುತ್ತಿರುವ ಒಂದು ಎಕರೆ ಭೂಮಿಯನ್ನು ಗಿರವಿಯಿಡು (ಮದುವೆಗೆ ಹಣವನ್ನು ಹೊಂದಿಸಲು). ನಾನು ಅದನ್ನು ನಿನಗೆ ವಾಪಸ್ಸು ಕೊಡಿಸುತ್ತೇನೆ” ಎಂದನಾತ. ಇದು, ಅವರುನಿಗೆ ತಾನು ಗೌರವಿಸಬೇಕೆಂಬ ಯಾವುದೇ ಉದ್ದೇಶವಿಲ್ಲದ ಪ್ರಸ್ತಾವನೆ.
ನಿರಾಶೆಯಿಂದ ಮಂಗೋಲಾ ಹೀಗೆಂದರು: “ಸಾಲ ತೀರಿಸಲು ಆರು ತಿಂಗಳು ಬಾಕಿಯಿದೆ. ಭೂಮಿಯನ್ನು ಬಿಡಿಸಿಕೊಳ್ಳದಿದ್ದರೆ, ಶಾಶ್ವತವಾಗಿ ಅದು ಕಳೆದುಹೋಗುತ್ತದೆ. ಭೂಮಿ ಇಲ್ಲದೆ ನಾನು ಏನು? ನಾನು ಮದುವೆಯಾಗಲು ಬಯಸಿದರೂ, ಹಣವಿಲ್ಲದೆ ಅದನ್ನು ಹೇಗೆ ನಿರ್ವಹಿಸುವುದು?”
ತನ್ನ ಮತ್ತೊಬ್ಬ ಸಹೋದರನೊಂದಿಗೆ ಹಂಚಿಕೊಂಡಿರುವ ಎರಡು ಕೋಣೆಗಳ ಕಟ್ಟುಪಟ್ಟಿಯ (ledge) ಮೇಲಿಟ್ಟ ಕಾನೂನು ದಾಖಲೆಗಳಿಂದ ತುಂಬಿದ ಮಂಗೋಲಾಳ ಕಪ್ಪು ಬ್ಯಾಗು, 2012ರಿಂದಲೂ ಗಾತ್ರದಲ್ಲಿ ನಿರಂತರವಾಗಿ ವೃದ್ಧಿಸುತ್ತಲೇ ಇದೆ. ಈಕೆಯ ಹತಾಶೆಯೂ ಮತ್ತಷ್ಟು ಹೆಚ್ಚಾಗುತ್ತಿದೆ.
ಿದರು.
ಖತಿಮ ಊರಿನಲ್ಲಿ ನೆಲೆಸಿರುವ ನಲವತ್ತೊಂದು ವರ್ಷದ ವಕೀಲ ಅನಿಲ್ ಸಿಂಗ್ ರಾಣಾ ಸಹ ಥಾರು ಸಮುದಾಯದವರು. ಭೂಮಿಯ ಹಕ್ಕನ್ನು ನಿರ್ಧರಿಸುವ ಕಾನೂನಿನ ಪ್ರಕ್ರಿಯೆಗಳಲ್ಲಿ ಅವರಿಗೆ ಅಷ್ಟಾಗಿ ವಿಶ್ವಾಸವಿಲ್ಲ. “ಇಂತಹ ಪ್ರಕರಣಗಳು ದೀರ್ಘಕಾಲೀನವಾಗಿರುತ್ತವೆ. ಪಾರಂಪರಿಕವಾಗಿ ನಮ್ಮ ಸಮುದಾಯದವರು ಅಷ್ಟಾಗಿ, ದಸ್ತಾವೇಜು ಹಾಗೂ ಕಾಗದಪತ್ರಗಳನ್ನು ಇಟ್ಟುಕೊಂಡಿರುವುದಿಲ್ಲ. ಜಮೀನಿನ ನಷ್ಟ ಎಂದಿಗೂ ಸರಳವಲ್ಲ. ಅನೇಕ ಸ್ತರಗಳಲ್ಲಿ ಅದು ಪರಿಣಾಮ ಬೀರುತ್ತದೆ.”
ರಾಣಾ, ಕಳೆದ ದಶಕದ ಹೆಚ್ಚಿನ ಸಮಯವನ್ನು ಉತ್ತರಾಖಂಡ್ನ ಸುಮಾರು ನಲವತ್ತು ಹಳ್ಳಿಗಳ ಬುಡಕಟ್ಟು ಜನರ ಹಕ್ಕುಗಳ ಬಗ್ಗೆ ಕೆಲಸಮಾಡುವ ಗ್ರಾಮ-ಮಟ್ಟದ ಸಂಘಟನೆಗಳ ತಂಡವೆನಿಸಿದ, ಭೂಮಿ ಅಧಿಕಾರ್ ಮಂಚ್ (BAM) ಜೊತೆಗೆ ಕಳೆದರು. ಇದು ಸ್ಥಾಪನೆಗೊಂಡ ಎರಡು ವರ್ಷಗಳ ನಂತರ, 2009ರಲ್ಲಿ, ಅರಣ್ಯದಲ್ಲಿ ವಾಸಿಸುವ ಸಮುದಾಯಗಳ ಪಾರಂಪರಿಕ ಹಕ್ಕುಗಳನ್ನು ರಕ್ಷಿಸುವ 2006ರ ಕಾಯ್ದೆಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು. ಜಾಗೃತಿ ಮೂಡಿಸುವ ಮತ್ತು ಪ್ರಭಾವ ಬೀರುವ ನಿಟ್ಟಿನ ಮಂಚ್ನ ವಿಧಾನಗಳು ಬುಡಕಟ್ಟು ಭೂ ಹಕ್ಕುಗಳಿಗಾಗಿ ನಡೆಸುವ ಹೋರಾಟದಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನು ಕಂಡಿದೆ.
2012ರಲ್ಲಿ ಕಮ್ಲಾ ಈ ಸಂಘಟನೆಯತ್ತ ಮುಖಮಾಡಿದರು.
“ನಾವು ಸರಳ ಜನರು. ನಮಗೆ ಕೋರ್ಟು ಅರ್ಥವಾಗುವುದಿಲ್ಲ. ಸಾಮಾಜಿಕ ಒತ್ತಡವು ಹೆಚ್ಚು ಪರಿಣಾಮಕಾರಿ” ಎಂಬುದು ಅವರುಯ ತರ್ಕ. BAMನ ಕ್ಷೇತ್ರ ಕಾರ್ಯಕರ್ತರ ತಂಡದ ಭಾಗವಾಗಿರುವ ತನ್ನ ಅತ್ತಿಗೆ ಮಿನಾ ದೇವಿಯೊಂದಿಗೆ ಸೇರಿ, ಕಮ್ಲಾ, ತನ್ನ ಭೂಮಿಯನ್ನು ವಾಪಸ್ಸು ಕೇಳಲು ಪ್ರಾರಂಭಿಸಿದರು. “ನಾವು ಅವರ (ಸಾಲದಾತರ) ಅಂಗಡಿಗಳಿಗೆ ತೆರಳಿ ಅಲ್ಲಿ ನಿಲ್ಲುತ್ತಿದ್ದೆವು. ನನ್ನೊಂದಿಗೆ ಮಾತನಾಡು, ಕಾಗದಪತ್ರಗಳನ್ನು ನನಗೆ ತೋರಿಸು ಎಂದು ನಾನು ಆಗ್ರಹಿಸತೊಡಗಿದೆ. ಹಳ್ಳಿಯ ಇತರೆ ಮಹಿಳೆಯರನ್ನು ಸಹ ನಾವು ಕರೆದೊಯ್ದೆವು.”
ಹಿಂದಿನ ವರ್ಷ, ಅವರುಯ ಹಠದ ಕಾರಣದಿಂದಾಗಿ, ಒಬ್ಬ ಸಾಲದಾತನು 3.5 ಎಕರೆಗಳನ್ನು ವಾಪಸ್ಸು ನೀಡಿದ. ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ತಿಳಿಸದ ಅವರು, “ಅವರೆಲ್ಲರೂ (ಸಾಲಗಾರರು) ಈ ತಂತ್ರವನ್ನು ಬಳಸಿದಲ್ಲಿ, ನನ್ನ ವ್ಯವಹಾರವು ಕೊನೆಗೊಂಡು, ನನ್ನ ಸುಪರ್ದಿನಲ್ಲಿರುವ ಭೂಮಿಯೆಲ್ಲವನ್ನೂ ಕಳೆದುಕೊಳ್ಳುತ್ತೇನೆ” ಎಂದರು.
ಕಮ್ಲಾಳ ಕಿರಿಯ ಮಗ, ಇಪ್ಪತ್ತು ವರ್ಷದ ಕೇಶವ್, ಕುಟುಂಬದ ಭೂ ದಾಖಲೆಗಳನ್ನು ಪತ್ತೆಹಚ್ಚುವ ಸಲುವಾಗಿ ತನ್ನನ್ನೇ ಮೀಸಲಿಟ್ಟು, ಈಗ ಕಾಲೇಜನ್ನು ತೊರೆದಿದ್ದಾನೆ. ಅವನ್ನು ಪತ್ತೆಹಚ್ಚಿದಲ್ಲಿ, ಹೆಚ್ಚು ಪರಿಣಾಮಕಾರಿಯಾದ ಒತ್ತಡವನ್ನು ಹೇರಬಹುದಾಗಿದೆ. ಸಾಲದಾತರಲ್ಲೊಬ್ಬನಿಂದ ತನ್ನ ತಂದೆಯ ಸಹಿಯಿರುವ ಖಾಲಿ ಸ್ಟಾಂಪ್ ಪೇಪರನ್ನು ವಾಪಸ್ಸುಪಡೆದಿರುವುದು ಇಲ್ಲಿಯವರೆಗಿನ ಅವರುನ ಅತಿ ದೊಡ್ಡ ಯಶಸ್ಸು.
ಮಂಗೋಲಾ, ತನ್ನ ಸ್ವಂತ ಸಹೋದರನ ವಿರುದ್ಧ ನಿಂತಿರುವ ಕಾರಣ ಅವರುಯ ಹೋರಾಟವು ಪ್ರಯಾಸಕರವೆನಿಸಿದೆ. ಈಕೆಯಿಂದ ದೂರವಾದ ಫೂಲ್ ಹೀಗೆನ್ನುತ್ತಾನೆ “ಈಗ ಅವರುಯು ಕೌಟುಂಬಿಕ ವಿಚಾರವನ್ನು ಹೊರಗಿನವರ ಬಳಿ ಕೊಂಡೊಯ್ದಿದ್ದಾಳೆ. ನಾನು ಅವಳೊಂದಿಗೇಕೆ ರಾಜಿಮಾಡಿಕೊಳ್ಳಬೇಕು?”
ಅನೇಕ ಮಹಿಳೆಯರಂತೆ, ಮಂಗೋಲಾ ಸಹ ಭೂಮಿಯ ಮೇಲಿನ ತನ್ನ ಹಕ್ಕನ್ನು ಅಬಾಧಿತ ಸ್ವಾಮ್ಯವೆಂದು ಭಾವಿಸಲು ಸಾಧ್ಯವಾಗಿಲ್ಲ. ಆ ಆಲೋಚನೆಯನ್ನು ವಿವರಿಸಲು ಅವರು ಹೆಣಗಾಡುತ್ತಾರೆ: “ಎಲ್ಲರೂ ಹೆಣ್ಣುಮಕ್ಕಳಿಗೆ ಭೂಮಿಯನ್ನು ಕೊಡುವುದಿಲ್ಲ. ಅವರುಗೂ ಸ್ವಲ್ಪ ಕೊಡೋಣ, ಆದರೆ ಕುಟುಂಬದ ಪುರುಷರ ಒಪ್ಪಿಗೆಯೊಂದಿಗೆ ಎಂಬ ಮನೋಭಾವವಿದೆ. ಇದು ಸರಿಯೇ ಎಂಬುದು ನನಗೆ ಖಚಿತವಿಲ್ಲ. ಆದರೆ, ಭೂಮಿಯು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ. ಅದನ್ನು ನಾವು ಆರಾಧಿಸುತ್ತೇವೆ ಹಾಗೂ ಅದರಿಂದ ಪೋಷಿಸಲ್ಪಡುತ್ತೇವೆ. ನನ್ನಂತಹ ಮಹಿಳೆಯರಿಗೆ ಅದು ಭರವಸೆಯೂ ಹೌದು.”
ಕಮ್ಲಾರ ಮನಸ್ಸಿನಲ್ಲಿ ಅಂತಹ ಸಂದೇಹಗಳಿಲ್ಲ. ಭೂಮಿಯನ್ನು ಹಸ್ತಾಂತರಿಸುವುದನ್ನು ಮೌನವಾಗಿ ನೋಡುತ್ತಿದ್ದ ವರ್ಷಗಳ ನಂತರ ಕಂಡುಕೊಂಡ ದೃಢಸಂಕಲ್ಪದೊಂದಿಗೆ, ಮರಳಿ ಗೆದ್ದ ಕೃಷಿಭೂಮಿಯ ಮೇಲೆ ನಿಂತು, ಅವರು ಮಾತನಾಡುತ್ತಾರೆ.
“ಭೂಮಿಯು ನನ್ನದು. ಅದನ್ನು ವಾಪಸ್ಸು ಪಡೆಯುತ್ತೇನೆ. ಇದು ನನ್ನ ಕರ್ತವ್ಯ. ಸಂಘರ್ಷ ಎಷ್ಟು ಕಾಲವೆಂಬುದು ಮುಖ್ಯವಲ್ಲ” ಎನ್ನುತ್ತಾಳೆ ಅವರು.
ಲೇಖಕಿಯು ಭಾರತದಲ್ಲಿ ಬಡವರಿಗೆ ಸುರಕ್ಷಿತ ಭೂಮಿ ಮತ್ತು ಆಸ್ತಿ ಹಕ್ಕುಗಳ ಪ್ರಾಮುಖ್ಯತೆಯ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ, N/Core ಫೌಂಡೇಷನ್ನಿಂದ ನೀಡಲಾಗುವ ಇಂಪ್ಯಾಕ್ಟ್ ಜರ್ನಲಿಸಂ ಪ್ರಶಸ್ತಿಯನ್ನು ಪಡೆದಿದ್ದಾರೆ.