ನನ್ನ ತಾಯಿನುಡಿಯ ಪದಗಳು ಇತ್ತೀಚೆಗೆ ನನ್ನ ಕೈಬಿಡುತ್ತಿವೆ. ನನಗೆ ಹಕ್ಕಿ, ಜಿಂಕೆ, ನವಿಲು, ಹಸು, ಆಡುಗಳ ಭಾಷೆ ಬೇಕಾಗಿದೆ. ಮರ, ಗಾಳಿ, ನೀರು, ನದಿ, ಪರ್ವತ, ನೆಲ, ಹೆಸರಿಲ್ಲದ ಹೂಗಳು, ಮಿಂಚುಹುಳು, ಜೀರುಂಡೆಗಳಿಂದ ನಾನು ಅಕ್ಷರಗಳನ್ನು ಸಾಲ ಪಡೆಯಬೇಕಿದೆ. ಆದರೆ ಅವು ಸಾಯುತ್ತಿವೆ. ಸತ್ತವರಿಗೆ ಕೂಡ ಒಂದು ಭಾಷೆ ಇದೆಯೇ? ಅವರಿಗೆ ಪದಗಳಿವೆಯೇ? ನಾನು ಸಾವನ್ನು ಹುಡುಕಿಕೊಂಡು ಹೋಗಬೇಕಿಲ್ಲ; ಅದು ಪ್ರತಿದಿನವೂ ನನ್ನನ್ನು ಭೇಟಿ ಮಾಡುತ್ತದೆ. ಬಡವರ ಸಾವು. ಹಸಿವು, ಬರಗಾಲ, ಪ್ರವಾಹ, ಅರಣ್ಯನಾಶ, ಸಂಹಾರ, ತಾರತಮ್ಯ, ಬುಲ್ಡೋಜರ್, ಬಾಂಬ್ಗಳಿಂದ ಉಂಟಾದ ಸಾವು. ಆದರೆ ನಾನು ಬರಿಗೈಯಾಗಿದ್ದೇನೆ. ಸತ್ತವರಿಗೆ ಧ್ವನಿಯಿಲ್ಲ, ಪದಗಳಿಲ್ಲ. ಅವರಿಗೆ ಇರುವುದು ಕೇವಲ ಒಂದು ವಾಸನೆ, ಗುಪ್ತ ಪಾಪಗಳ ವಾಸನೆಯಂತೆ; ಯಾರೂ ಮಾತನಾಡದ, ಸರ್ವವ್ಯಾಪಿ ವಾಸನೆ. ಆದರೆ ಈಗ ಈ ವಾಸನೆಯು, ಸಾಂಕ್ರಾಮಿಕ ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಧರಿಸಿರುವ ಮುಖಗವುಸುಗಳನ್ನು ದಾಟಿ ಬರುತ್ತಿದೆ. ಮತ್ತು ನನ್ನ ಕಥೆಗಳನ್ನು ಹೇಳಲು ಸಾಧ್ಯವಾಗದೆ ನಾನು ಸಾಯುತ್ತಿದ್ದೇನೆ. ಭಾಷೆಯ ಹುಡುಕಾಟ ಕೊನೆಗೊಳ್ಳುವುದಿಲ್ಲ. ಈ ನಡುವೆ ನಾನು ಕೆಲವು ಒಡಕಲು ಕವನಗಳನ್ನು ಬರೆದಿದ್ದೇನೆ.


Jalpaiguri, West Bengal
|THU, SEP 25, 2025
ಮೀನು, ಕಪ್ಪೆಗಳು ಮತ್ತು ಕೆಲವು ದುರ್ಬಲ ಕವನಗಳ ಭಾಷೆ
ಈ ಪದ್ಯಗಳಲ್ಲಿ ಕವಿ ತನ್ನ ಪರಿಸರದಲ್ಲಿ ನಾಶವಾಗುತ್ತಿರುವ ಭಾಷೆಯ ಕುರಿತು ತಪಿಸುತ್ತಿದ್ದಾರೆ. ಇದಕ್ಕೆ ಕಾರಣ ಜೀವನೋಪಾಯ, ಹವಾಮಾನ ಮತ್ತು ಹಿಂದೆ ನಾವು ಅರಿತಿದ್ದ ಜಗತ್ತಿನ ಇಲ್ಲವಾಗುವಿಕೆ. ಇದೆಲ್ಲದಕ್ಕೂ ಕಾರಣ ದುರಾಸೆ ಮತ್ತು ಅಧಿಕಾರಶಾಹಿ ಎನ್ನುವುದು ಕವಿಯ ಅಭಿಮತ
Author
Illustration
Editor
Translator
1. Where did the fish go?
We want more, more
devastatingly more,
more without limits,
more - the infinite.
Where did all the fish go?
Bishnu - the last fisherman of his clan
sees ponds in his dreams
and every night
he walks to the high-rise apartments
and curses them.
He keeps his ears to the ground
hears the trapped fish under the buildings,
dying of eutrophication.
He pushes the pillars off until his hands begin to bleed,
and he feels hypoxemic.
In the morning, passers-by find him dead.
No one cries for a mad fisherman.
To be cried upon
one needs to be high on the class hierarchy
Bishnu has none.
No one cries,
only in his hand, he has two fistfuls of sand.
2. The broken ecosystem and the dead vultures of my village
Hisss hisss hisss…
We are the broken grammar
You needed milk,
you fed your cows diclofenac
You broke the sentence:
Eco-system.
Now we're all dead
and you are stinking like us
Decomposed bodies of cows
Follow your memory of the smell
Who is dead? Who is dead?
Grammar - Sentence - Ecosystem?
Rest in stink brothers.
(The chorus of the dead vultures stops)
3. Where did the frogs go?
The midnight moaning
and the creak creak of a decaying
mango wood cot and
the croaking of the frog for a she-frog -
we lost all in our lust for good days.
The tired soul of jobless pursuit
and empty stomachs
are listless in early morning's pleasure.
The cot has lost its skeleton.
The frogs are all dead.
The rains are fermenting more foams
of pesticides.
In the basti of a megacity
the door of a damp shoddy room
is unlatched still,
Zamila's eyes are vacant and droopy.
No customer these days.
Her mother has turned her gaze
away from the sky,
a dark cloud hovers in her eyes.
4. The tree as a witch
They deemed the blackboard tree
as a witch.
They first cut down its wings
and then danced around it.
They feasted upon body
and then burnt down the trunk,
the legs, the seeds, the ovaries.
They were done.
Upon returning home they killed
the woman too.
The woman who asked questions
about the tree, the vultures
and the tongues.
1. ಮೀನು ಎಲ್ಲಿ ಹೋಯಿತು?
ನಮಗೆ ಹೆಚ್ಚು ಬೇಕು, ಬಹಳಷ್ಟು
ವಿನಾಶಕಾರಿ ಎನ್ನುವಷ್ಟು ಹೆಚ್ಚು ಬೇಕು,
ಮಿತಿಗಳಿಲ್ಲದಷ್ಟು ಹೆಚ್ಚು ಬೇಕು,
ಹೆಚ್ಚು - ಆ ಅನಂತವೇ ಬೇಕು.
ಆ ಮೀನುಗಳೆಲ್ಲ ಎಲ್ಲಿ ಹೋದವು?
ಬಿಷ್ಣು – ಆ ಕುಲದ ಕೊನೆಯ ಮೀನುಗಾರ
ಅವನಿಗೆ ಕನಸಿನಲ್ಲಿ ಕೆರೆಗಳು ಕಾಣುತ್ತವೆ
ಮತ್ತು ಪ್ರತಿ ರಾತ್ರಿ
ಎತ್ತರದ ಅಪಾರ್ಟ್ಮೆಂಟ್ಗಳ ಬಳಿಗೆ ನಡೆದು ಹೋಗಿ
ಅವುಗಳಿಗೆ ಶಾಪ ಹಾಕುತ್ತಾನೆ.
ಅವನು ನೆಲಕ್ಕೆ ಕಿವಿಕೊಟ್ಟು ಕೇಳುತ್ತಾನೆ,
ಕಟ್ಟಡಗಳಡಿಯಲ್ಲಿ ಸಿಕ್ಕಿಬಿದ್ದ ಮೀನುಗಳು,
ಜಲಮಾಲಿನ್ಯದಿಂದ ಸಾಯುತ್ತಿರುವುದು ಕೇಳುತ್ತದೆ.
ತನ್ನ ಕೈಗಳಿಂದ ರಕ್ತ ಸುರಿಯುವವರೆಗೆ ಅವನು ಕಂಬಗಳನ್ನು ದೂಡುತ್ತಾನೆ,
ಕೊನೆಗೆ ಅವನಿಗೆ ಉಸಿರುಗಟ್ಟಿದಂತಾಗುತ್ತದೆ.
ಬೆಳಿಗ್ಗೆ, ದಾರಿಹೋಕರು ಅವನು ಸತ್ತು ಬಿದ್ದಿರುವುದನ್ನು ಕಾಣುತ್ತಾರೆ.
ಹುಚ್ಚು ಮೀನುಗಾರನಿಗಾಗಿ ಯಾರೂ ಅಳುವುದಿಲ್ಲ.
ಯಾರಾದರೂ ಅಳಬೇಕೆಂದರೆ
ಆ ವ್ಯಕ್ತಿ ವರ್ಗ ಶ್ರೇಣಿಯಲ್ಲಿ ಉನ್ನತ ಸ್ಥಾನದಲ್ಲಿರಬೇಕು,
ಬಿಷ್ಣುವಿನ ಬಳಿ ಅದ್ಯಾವುದೂ ಇಲ್ಲ.
ಯಾರೂ ಅಳುವುದಿಲ್ಲ,
ಅವನ ಕೈಯಲ್ಲಿ, ಕೇವಲ ಎರಡು ಮುಷ್ಟಿಯಷ್ಟು ಮರಳಿದೆ.
2. ಮುರಿದುಬಿದ್ದ ಪರಿಸರ ವ್ಯವಸ್ಥೆ ಮತ್ತು ನನ್ನ ಊರಿನ ಸತ್ತ ರಣಹದ್ದುಗಳು
ಹಿಸ್ಸ್ ಹಿಸ್ಸ್ ಹಿಸ್ಸ್...
ನಾವು ಒಡಕಲು ವ್ಯಾಕರಣ.
ನಿಮಗೆ ಹಾಲು ಬೇಕಿತ್ತು,
ಹಸುಗಳಿಗೆ ಡಿಕ್ಲೋಫೆನಾಕ್ ಔಷಧಿ ಕಟ್ಟಿರಿ.
ನೀವು ವಾಕ್ಯವನ್ನೇ ಮುರಿದಿರಿ:
ಪರಿಸರ ವ್ಯವಸ್ಥೆ.
ಈಗ ನಾವೆಲ್ಲ ಸತ್ತಿದ್ದೇವೆ
ಮತ್ತು ನೀವು ನಮ್ಮಂತೆಯೇ ವಾಸನೆ ಹೊಡೆಯುತ್ತಿದ್ದೀರಿ.
ಹಸುಗಳ ಕೊಳೆತ ದೇಹಗಳ ವಾಸನೆ
ನಿಮ್ಮ ನೆನಪಿನ ವಾಸನೆಯನ್ನು ಹಿಂಬಾಲಿಸುತ್ತಿದೆ.
ಯಾರು ಸತ್ತರು? ಯಾರು ಸತ್ತರು?
ವ್ಯಾಕರಣವೇ? ವಾಕ್ಯವೇ? ಪರಿಸರ ವ್ಯವಸ್ಥೆಯೇ?
ವಾಸನೆಯಲ್ಲಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರರೇ.
(ಸತ್ತ ರಣಹದ್ದುಗಳ ಸಮೂಹ ಗಾಯನ ನಿಲ್ಲುತ್ತದೆ)
3. ಕಪ್ಪೆಗಳೆಲ್ಲ ಎಲ್ಲಿ ಹೋದವು?
ಅರ್ಧರಾತ್ರಿಯ ನರಳುವಿಕೆ
ಮತ್ತು ಸವೆಯುತ್ತಿರುವ ಮಾವಿನ ಮರದ ಮಂಚದ ಕಿರ್ರ್ ಕಿರ್ರ್ ಸದ್ದು
ಹಾಗೂ ಹೆಣ್ಣು ಕಪ್ಪೆಗಾಗಿ ಗಂಡು ಕಪ್ಪೆಯ ಕೂಗು –
ಒಳ್ಳೆಯ ದಿನಗಳ ನಮ್ಮ ದುರಾಸೆಯಲ್ಲಿ ಇವೆಲ್ಲವನ್ನೂ ನಾವು ಕಳೆದುಕೊಂಡೆವು.
ಉದ್ಯೋಗದ ಹುಡುಕಾಟದಲ್ಲಿ ದಣಿದ ಆತ್ಮ
ಮತ್ತು ಖಾಲಿ ಹೊಟ್ಟೆಗಳು
ಬೆಳಗಿನ ಜಾವದ ಸಂತೋಷದಲ್ಲಿ ಆಸಕ್ತಿ ಕಳೆದುಕೊಂಡಿವೆ.
ಮಂಚವು ತನ್ನ ಹಲಗೆಗಳನ್ನು ಕಳೆದುಕೊಂಡಿದೆ.
ಕಪ್ಪೆಗಳೆಲ್ಲ ಸತ್ತುಹೋಗಿವೆ.
ಮಳೆ ಕೀಟನಾಶಕಗಳ ನೊರೆಗಳನ್ನು ಹೊಮ್ಮಿಸುತ್ತಿವೆ.
ಮಹಾನಗರದ ಒಂದು ಬಸ್ತಿಯಲ್ಲಿ
ಬೂಸಲು ಹಿಡಿದ ಆ ಕಳಪೆ ಕೋಣೆಯ ಬಾಗಿಲು
ಇನ್ನೂ ತೆರೆದೇ ಇದೆ.
ಝಮಿಲಾಳ ಕಣ್ಣುಗಳು ಬರಿದಾಗಿ, ಮಂಕಾಗಿವೆ.
ಈ ದಿನಗಳಲ್ಲಿ ಗ್ರಾಹಕರು ಬರುತ್ತಿಲ್ಲ.
ಅವಳ ತಾಯಿ ತನ್ನ ದೃಷ್ಟಿಯನ್ನು
ಆಕಾಶದತ್ತ ತಿರುಗಿಸಿದ್ದಾಳೆ,
ಕಪ್ಪಾದ ಮೋಡವೊಂದು ಅವಳ ಕಣ್ಣುಗಳಲ್ಲಿ ಸುಳಿದಾಡುತ್ತಿದೆ.
4. ಒಂದು ಮಾಂತ್ರಿಕ ಮರ
ಅವರು ಹಾಲೆ ಮರವನ್ನು
ಡಾಕಿನಿ ಎಂದು ಕರೆದರು
ಮೊದಲು ಅದರ ರೆಂಬೆಗಳನ್ನು ಕತ್ತರಿಸಿದರು
ನಂತರ ಅದರ ಸುತ್ತ ಕುಣಿದರು
ಅದರ ನಂತರ ಅದರ ದೇಹದ ಮೇಲೆ ಊಟ ಮಾಡಿದರು
ಕೊನೆಗೆ ಅದರ ಕಾಂಡ, ಕಾಲುಗಳು, ಬೀಜಗಳು, ಅಂಡಾಶಯಗಳನ್ನು ಸುಟ್ಟುಹಾಕಿದರು.
ಅವರ ಕೆಲಸ ಮುಗಿಯಿತು.
ಅವರು ಮನೆಗೆ ಮರಳಿದ ನಂತರ
ಆ ಮಹಿಳೆಯನ್ನು ಕೂಡ ಕೊಂದರು.
ಮರದ ಬಗ್ಗೆ, ರಣಹದ್ದುಗಳ ಬಗ್ಗೆ
ಮತ್ತು ನಾಲಿಗೆಗಳ (ಭಾಷೆಗಳ) ಬಗ್ಗೆ
ಪ್ರಶ್ನೆಗಳನ್ನು ಕೇಳಿದ್ದ ಆ ಮಹಿಳೆಯನ್ನು ಅವರು ಕೊಂದರು.
ಅನುವಾದ: ಶಂಕರ. ಎನ್. ಕೆಂಚನೂರು
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/the-language-of-the-fish-frogs-and-a-few-fractured-poems-kn

