ಎಂ. ಇಂದ್ರ ಕುಮಾರ್ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿಯ ಮಂಗಲ ಗ್ರಾಮದವರು. ಒಂದು ಕಾಲದಲ್ಲಿ ಅವರ ಕುಟುಂಬ ಜಮೀನು ಹೊಂದಿತ್ತು. ಆದರೆ ಈಗಿಲ್ಲ. 38 ವರ್ಷದ ಇಂದ್ರ ಕುಮಾರ್, ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬದುಕುತ್ತಿದ್ದಾರೆ. ಅವರ ಮಕ್ಕಳು 19 ಕಿಲೋಮೀಟರ್ ದೂರದಲ್ಲಿರುವ ಗುಂಡ್ಲುಪೇಟೆಯ ಶಾಲೆಯೊಂದರಲ್ಲಿ ಓದುತ್ತಿದ್ದು, ಅಲ್ಲಿ ಬಸ್ ಮೂಲಕ ತಲುಪುತ್ತಾರೆ.
ಇಂದ್ರ ಕುಮಾರ್ ತಮ್ಮ ಊರಿನಲ್ಲಿರುವ ಮಾರಿಯಮ್ಮ ಚಾರಿಟೇಬಲ್ ಟ್ರಸ್ಟಿಗೆ ಸಂಬಂಧಿಸಿದ ಕೆಲಸವನ್ನು ಬೆಂಬಲಿಸುವ ವನ್ಯಜೀವಿ ಸ್ಮರಣಿಕೆಗಳನ್ನು ಮಾರುವ ಅಂಗಡಿಯ ವ್ಯವಸ್ಥಾಪಕರಾಗಿ ಮಾಡುತ್ತಿದ್ದಾರೆ. ಅವರು ಜಾನುವಾರುಗಳ ಮೇಲೆ ನಡೆಯುವ ಕಾಡುಪ್ರಾಣಿಗಳ ದಾಳಿಗಳನ್ನು ದಾಖಲಿಸುವ ಮೂಲಕವೂ ಸಹಾಯ ಟ್ರಸ್ಟಿಗೆ ಸಹಾಯ ಮಾಡುತ್ತಾರೆ. ಟ್ರಸ್ಟಿನ ಕೆಲಸಗಳಲ್ಲಿ ಚಿರತೆ, ಹುಲಿ ಮತ್ತು ಕಾಡು ನಾಯಿಗಳಂತಹ ಬೇಟೆ ಪ್ರಾಣಿಗಳಿಂದ ಜಾನುವಾರುಗಳನ್ನು ಕಳೆದುಕೊಂಡ ಸಂರಕ್ಷಿತ ಪ್ರದೇಶದ ಸುತ್ತಲಿನ ಗ್ರಾಮಸ್ಥರಿಗೆ ಆರ್ಥಿಕ ಪರಿಹಾರವನ್ನು ಒದಗಿಸುವುದು ಸಹ ಒಳಗೊಂಡಿದೆ.












