ಪೂರ್ಣಿಯಾ ಜಿಲ್ಲೆ ಮೆಕ್ಕೆಜೋಳದ ತೊಟ್ಟಿಲು ಎಂದೇ ಖ್ಯಾತ. ಈ ಭಾಗದ ಒಂದು ರಸ್ತೆಯಲ್ಲಿ ಹಾದು ಹೋಗುತ್ತಿದ್ದರೆ. ರಸ್ತೆಯ ಎರಡೂ ಬದಿಗೆ ಚಿನ್ನ ಚೆಲ್ಲಿದಂತೆ ಕಾಣುತ್ತಿತ್ತು. ಅದು ಈ ಊರಿನಲ್ಲಿ ಜೋಳದ ಕೊಯ್ಲು ಮುಗಿದಿತ್ತು. ರೈತರು ರಸ್ತೆಯ ಇಕ್ಕೆಲಗಳಲ್ಲಿ ಹಳದಿ ಜೋಳದ ಕಾಳುಗಳನ್ನು ಒಣಗಿಸಿದ್ದರು. ರೂಪಸ್ಪುರ ಟೋಲಾ ಎನ್ನುವ ಊರಿನ ಸಂತಾಲ್ ಗಂಡಸರು ಹಾಗೂ ಮಹಿಳೆಯರು ಜೋಳದಲ್ಲಿನ ತೇವಾಂಶ ವೇಗವಾಗಿ ಅವಿಯಾಗುವಂತೆ ಮಾಡಲು ನೇಗಿಲಿನಂತಹ ಸಾಧನವನ್ನು ಬಳಸಿ ಧಾನ್ಯವನ್ನು ತಿರುವಿ ಹಾಕುತ್ತಿದ್ದರು. ಇಲ್ಲೇ ಎಲ್ಲೋ ಒಂದು ಕಡೆ ಚೌಕಿದಾರ ಇದನ್ನೆಲ್ಲ ಗಮನಿಸುತ್ತಿರಬಹುದು. ಇವರು ಶೀಘ್ರದಲ್ಲೇ ಆದಿವಾಸಿಗಳ ಮನೆಯೆದರು ಪ್ರತ್ಯಕ್ಷರಾಗಿ ತಮ್ಮ ಭೂಮಾಲಿಕರ ಪಾಲಿನ ಧಾನ್ಯವನ್ನು ಸಂಗ್ರಹಿಸಲಿದ್ದಾರೆ. ಇದು ಇಲ್ಲಿ ಹಲವು ತಲೆಮಾರುಗಳಿಂದ ನಡೆದಬಂದಿರುವ ಪದ್ಧತಿ. ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಲ್ಲಿದ್ದರೂ ಈ ಜನರು ಈಗಲೂ ತಮ್ಮ ಫಸಲಿನ ಒಂದು ಭಾಗವನ್ನು ಈ ಜನರಿಗೆ ಕೊಡುತ್ತಿದ್ದಾರೆ.
ಅಲ್ಲಿಂದ ಸ್ವಲ್ಪ ದೂರದಲ್ಲಿ ಈ ಆದಿವಾಸಿ ಜನರ ಪೂರ್ವಜರೂ ಇದೆಲ್ಲದರ ಮೇಲೆ ಗಮನವಿಸಿರಿಸಿದ್ದಾರೆ. ಇವರು ಐದು ದಶಕಗಳ ಹಿಂದೆ ಇದೇ ಭೂಮಾಲಿಕರ ವಿರುದ್ಧ ಹೋರಾಡಿ ಬಲಿದಾನಗೈದವರು. ಈ ಊರಿನಲ್ಲಿ ಅವರ ನೆನಪಿಗಾಗಿ ಸ್ಮಾರಕವೊಂದನ್ನು ರಚಿಸಲಾಗಿದೆ. ವೇದಿಕೆಯೊಂದರ ಮೇಲೆ ಸ್ಥಂಭವನ್ನು ಕಟ್ಟಲಾಗಿದ್ದು, ಅದರ ಮೇಲಿನ ಬಿಳಿ ಮಾರ್ಬಲ್ ಕಲ್ಲಿನ ಮೇಲೆ 220/10/1971ರಂದು ಭೂಮಾಲಿಕರಿಂದ ಭೀಕರ ಹತ್ಯೆಗೀಡಾದ 14 ಜನರ ಹೆಸರುಗಳನ್ನು ಕೆತ್ತಿಸಲಾಗಿದೆ.
“ಊರಿಗೇ ಊರೇ ಸ್ಮಶಾನದಂತಾಗಿತ್ತು. ಅವಋ [ಜಮೀನುದಾರರ ಖಾಸಗಿ ಸೈನ್ಯ] ಊರಿನ 45 ಮನೆಗಳಿಗೆ ಬೆಂಕಿ ಹಚ್ಚಿದ್ದರು. ಪ್ರತಿ ಮನೆಯಿಂದಲೂ ಗೋಳಾಟ ಕೇಳುತ್ತಿತ್ತು. ಇಡೀ ವಾತಾವರಣ ಹೊಗೆಯಿಂದ ತುಂಬಿತ್ತು. ಜನರು ಸಮಾಧಾನಗೊಳ್ಳುವ ಸ್ಥಿತಿಯಲ್ಲಿ ಇದ್ದಿರಲಿಲ್ಲ.” ಇದಕ್ಕೆ ಲ್ಲ ಆಗ ಯುವಕನಾಗಿದ್ದ ಶಿವನಾರಾಯಣ್ ಸಾಕ್ಷಿಯಾಗಿದ್ದರು. ಅವರೀಗ ವೃದ್ಯಾಪ್ಯದಲ್ಲಿದ್ದಾರೆ. ಆದರೆ ಬಿಹಾರದ ಪರಿಸ್ಥಿತಿ ಮಾತ್ರ ಅಂದು ಹೇಗಿತ್ತೋ, ಹಾಗೆಯೇ ಉಳಿದುಕೊಂಡಿದೆ.
ಪ್ರಸ್ತುತ 70 ವರ್ಷ ಪ್ರಾಯದ ಶಿವನಾರಾಯಣ್ ಮುರ್ಮು “ಆಗಲೂ ಭೂಮಿಗಾಗಿಯೇ ಹೋರಾಟ ನಡೆದಿದ್ದು” ಎಂದರು. ಅವರು ಈ ಹತ್ಯಾಕಾಂಡದಲ್ಲಿ ತಮ್ಮ ಇಬ್ಬರು ಸಂಬಂಧಿಕರನ್ನು ಕಳೆದುಕೊಂಡಿದ್ದರು. 2025ರ ಜುಲೈ ತಿಂಗಳ ಒಂದು ಸಂಜೆ ನಮ್ಮೊಂದಿಗೆ ಮಾತಿಗೆ ಕುಳಿತಿದ್ದವರು, “ಅಂದು ಇನ್ನೂ ಸೂರ್ಯ ಮುಳುಗಿರಲಿಲ್ಲ. ಅವರು ಬಂದೂಕು, ದೊಣ್ಣೆ, ಕೊಡಲಿಗಳನ್ನು ಹಿಡಿದು ನಮ್ಮ ಕೇರಿಯನ್ನು ಸುತ್ತುವರೆದಿದ್ದರು. ನಂತರ ಅವರು ನಮ್ಮ ಆದಿವಾಸಿ ಮನೆಗಳಿಗೆ ಬೆಂಕಿಯಿಟ್ಟರು. ಜೊತೆಗೆ ಎದುರಿಗೆ ಸಿಕ್ಕವರನ್ನೆಲ್ಲ ಗುಂಡಿಟ್ಟು ಕೊಂದರು, ಮತ್ತು ಜೀವಂತ ಸುಟ್ಟರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಆದರೆ ಶಿವನಾರಾಯಣ್ ಅವರ ಪಾಲಿನ ನೋವು ಇದಕ್ಕೂ ಮೀರಿದ್ದು. ಈ ಹತ್ಯಕಾಂಡಕ್ಕೂ ಸುಮಾರು ಏಳು ವರ್ಷಗಳ ಮೊದಲು ಅವರು ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಶಿವನಾರಾಯಣ್ ಅವರಿಗೆ ಹತ್ತು ವರ್ಷದ ಪ್ರಾಯ. ಅವರ ತಂದೆ ಲಖನ್ ಲಾಲ್ ಹೆಂಬ್ರಾಮ್ ಅವರನ್ನು ಭೀಕರವಾಗಿ ಕೊಲ್ಲಲಾಗಿತ್ತು. ಈ ಕೊಲೆಗೂ ಭೂಮಿಯೇ ಕಾರಣವಾಗಿತ್ತು. “ಅವರು ವಿದ್ಯಾವಂತರಾಗಿದ್ದರು. ಸಂತಾಲ್ ಆದಿವಾಸಿಗಳ ಭೂ ಹಕ್ಕಿಗಾಗಿ ಹೋರಾಡುತ್ತಿದ್ದರು. ಈ ಸಂಬಂಧ ನ್ಯಾಯಾಲಯಗಳಿಗೂ ಓಡಾಡುತ್ತಿದ್ದರು. ಒಂದು ದಿನ ಅವರು ತನ್ನನ್ನು ಭೇಟಿಯಾಗಲು ಬಂದಿದ್ದ ಜಮೀನುದಾರರ ಕಡೆಯವರನ್ನು ಬಿಟ್ಟು ಬರಲೆಂದು ಹೋಗಿದ್ದರು. ಆದರೆ ಹಾಗೆ ಹೋದವರು ಮರಳಿ ಬರಲಿಲ್ಲ. ಮೂರು ದಿನಗಳ ನಂತರ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅವರ ಶವ ಪತ್ತೆಯಾಯಿತು. ಅವರು ಕತ್ತು ಕತ್ತರಿಸಿದ ಸ್ಥಿತಿಯಲ್ಲಿ ಬಿದ್ದಿದ್ದರು. ಈ ವಿಚಾರದಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ.
ಪೂರ್ಣಿಯಾ ಹತ್ಯಾಕಾಂಡದ ಒಂದು ದಶಕದ ನಂತರ ಜಮೀನುದಾರನ ಕಡೆಯ 25ರಿಂದ 30 ಅಪರಾಧಿಗಳಿಗೆ 20 ವರ್ಷಗಳ ಜೈಲು ಶಿಕ್ಷೆಯಾಯಿತು. ಇದನ್ನು ನೋಡಿ ಶಿವನಾರಾಯಣ್ ಇನ್ನಾದರೂ ಕಾಲ ಬದಲಾಗಬಹುದು ಎಂದು ಭಾವಿಸಿದ್ದರು.
ಆದರೆ ಅವರಿಗೆ ತಿಳಿದಿರುವುದು ಕತೆಯ ಅರ್ಧ ಭಾಗ ಮಾತ್ರ.















