ಜಾತಿಯೊಂದಕ್ಕೆ ಸೀಮಿತವಾಗಿರುವ ರಂಗಭೂಮಿ ಕಲೆ ರಾಜರಾಣಿ ಆಟ್ಟಂ ಪ್ರಕಾರದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವ ಸಲುವಾಗಿ ಶಾಲೆಯನ್ನು ಬಿಡಬೇಕಾಗಿ ಬಂತು. ಅವರು ಮತ್ತು ಸಹೋದರ ಬಾಲ್ಯದಲ್ಲಿ ಹೆಣ್ಣಿನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇದರಿಂದಾಗಿ ಸಹೋದರರಿಬ್ಬರೂ ನಿಂದನೆ, ಲೈಂಗಿಕ ಕಿರುಕುಳ ಎದುರಿಸುವುದರ ಜೊತೆಗೆ ಮತ್ತು ಸಂಪ್ರದಾಯದ ಹೊರೆಯನ್ನು ಸಹ ಹೊರಬೇಕಾಯಿತು.
ತನ್ನ 23ನೇ ವಯಸ್ಸಿನಲ್ಲಿ ಅವರು ಇರುಳಿನಲ್ಲಿ ಹೊಟ್ಟೆಪಾಡಿಗಾಗಿ ನೃತ್ಯ ಮಾಡುತ್ತಾ, ಶಿಕ್ಷಣ ಪಡೆಯುವುದಕ್ಕಾಗಿ ಸಾಧ್ಯವಿರುವುದನ್ನೆಲ್ಲ ಮಾಡಿದರು. ಮತ್ತು ವ್ಯವಸ್ಥೆ ನಿರಾಕರಿಸಿದ್ದ ಶಿಕ್ಷಣವನ್ನು ತನ್ನದಾಗಿಸಿಕೊಂಡರು. ಕಡೆಗೆ ಅವರು ತಾನು ಅಭ್ಯಾಸ ಮಾಡುತ್ತಿದ್ದ ಜಾನಪದ ರಂಗಕಲೆಯಲ್ಲೇ ಪಿಎಚ್ಡಿ ಪಡೆದುಕೊಂಡರು. ಆದರೆ ಉನ್ನತ ಶಿಕ್ಷಣವನ್ನೇ ನೆಚ್ಚಿಕೊಂಡು ಬದುಕುವ ಅವರ ಕನಸು ಹೆಚ್ಚು ಕಾಲ ಬಾಳಿಕೆ ಬರಲಿಲ್ಲ.


