“ನಾವು ನಮ್ಮ ಆದಿವಾಸಿ ಆಹಾರ ಪದ್ಧತಿಯನ್ನು ಮರೆತೇಬಿಟ್ಟಿದ್ದೆವು” ಎನ್ನುತ್ತಾರೆ ಯವತ್ಮಳ್ ನಿವಾಸಿ ಚಂದಾ ಘೋಡಮ್.
ಗ್ರಾಮೀಣ ಭಾರತದಲ್ಲಿ, 75 ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರಲ್ಲಿ ಸೀಮಿತ ಸಂಖ್ಯೆಯ ಮಹಿಳೆಯರಷ್ಟೇ ಭೂಮಿ ಅಥವಾ ಜಾನುವಾರುಗಳ ಮಾಲೀಕತ್ವವನ್ನು ಹೊಂದಿದ್ದಾರೆ, ಅಥವಾ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಕ್ಕುಗಳನ್ನು ಪ್ರತಿಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆಹಾರ ಉತ್ಪಾದನೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯಲ್ಲಿ ಅವರ ನಿರ್ಣಾಯಕ ಪಾತ್ರದ ಹೊರತಾಗಿಯೂ, ಸಾಮಾಜಿಕ ಚೌಕಟ್ಟುಗಳು ಅವರನ್ನು ರೈತರೆಂದು ಗುರುತಿಸುವಲ್ಲಿ ವಿಫಲವಾಗಿವೆ
ಮಹಾರಾಷ್ಟ್ರದ ಬರಪೀಡಿತ ಮತ್ತು ಕೃಷಿ ಆತ್ಮಹತ್ಯೆ ಪೀಡಿತ ಪ್ರದೇಶಗಳಾದ ಮರಾಠಾವಾಡಾ ಮತ್ತು ವಿದರ್ಭದಲ್ಲಿ, ಈ ಎಲ್ಲಾಅಡೆತಡೆಗಳ ಹೊರತಾಗಿಯೂ, ಚಂದಾ ಮತ್ತು ಅವರಂತಹ ಇತರ ಮಹಿಳಾ ರೈತರುಕೃಷಿಯಲ್ಲಿ ಮೌನ ಕ್ರಾಂತಿಯನ್ನು ನಡೆಸುತ್ತಿದ್ದಾರೆ ಮತ್ತು ತಮ್ಮಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಮರಳುತ್ತಿದ್ದಾರೆ.
“ನಮ್ಮ ಭೂಮಿಯಲ್ಲಿ ಎಲ್ಲವನ್ನೂ ಬೆಳೆಯಬಹುದು ಎಂದು ಊರಿನ ಇತರ ಮಹಿಳೆಯರಿಗೆ ಹೇಳುತ್ತೇನೆ” ಎಂದು ಚಂದಾ ಮುಗುಳ್ನಗೆಯೊಂದಿಗೆ ಹೇಳುತ್ತಾರೆ.


